ವಿಷಯಕ್ಕೆ ಹೋಗು

ಯಾಕೆನ್ನೋಳಿನಿತು ಕೃಪೆಯಿಲ್ಲ ಹರಿಯೆ

ವಿಕಿಸೋರ್ಸ್ದಿಂದ

ಯಾಕೆನ್ನೋಳಿನಿತು ಕೃಪೆಯಿಲ್ಲ ಹರಿಯೆ

[ಸಂಪಾದಿಸಿ]

ರಾಗ: ಮುಖಾರಿ ತಾಳ: ಅಟ್ಟ
ಯಾಕೆನ್ನೋಳಿನಿತು ಕೃಪೆಯಿಲ್ಲ ಹರಿಯೆ
ಕಾಕುಮಾಡದೆ ಕಾಯೊ ಭವದೊಳಗೆ ಬಳಲಿದೆನು ||ಪಲ್ಲವಿ||

ಕಂದರ್ಪ ಬಾಧೆಯಿಂ ಮಾನಿನಿಯ ವಶನಾಗಿ
ಮಂದಮತಿಯಿಂದ ಬಲು ಮರುಳಾದೆನೊ
ಸಂದಿತೈ ಯೌವನವು ಬುದ್ಧಿ ಬಂದಿತು ಈಗ
ಸಂದೇಹಪಡದೆ ನೀ ಕರುಣಿಸೈ ಎನ್ನ || ೧ ||

ಹೆಂಡತಿಯು ಕಡೆಗಣ್ಣಿನಿಂದ ನೋಡುವಳೀಗ
ಹಿಂಡು ಮಕ್ಕಳು ಎನ್ನ ಕಾಡುತಿಹರು
ಮುಂಡಮೋಚಿದೆ ನಾನು ಇನ್ನಾರು ಗತಿ ಎನಗೆ
ಪುಂಡರೀಕಾಕ್ಷ ನೀ ಕರುಣಿಸೈ ಎನ್ನ || ೨ ||

ಅಟ್ಟ ಮೇಲೆ ಒಲೆಯು ಉರಿವಂತೆ ಎನಗೀಗ
ಕೆಟ್ಟ ಮೇಲೆ ಅರಿವು ಬಂದಿತಯ್ಯ
ನೆಟ್ಟನೆ ಪುರಂದರವಿಠಲನೆ ಕೈ ಬಿಡದೆ
ದೃಷ್ಟಿಯಿಂದಲಿ ನೋಡಿ ಪರಿಪಾಲಿಸಯ್ಯ || ೩ || []
ರಚನೆ : ಪುರಂದರದಾಸರು.

ಪರಿವಿಡಿ

[ಸಂಪಾದಿಸಿ]


ಉಲ್ಲೇಖ

[ಸಂಪಾದಿಸಿ]
  1. ದಾಸವಾಣಿ