Library-logo-blue-outline.png
View-refresh.svg
Transclusion_Status_Detection_Tool

ವಟವೃಕ್ಷದೊಳಡಗಿದ ಸಮರಸ ಬೀಜ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ವಟವೃಕ್ಷದೊಳಡಗಿದ ಸಮರಸ ಬೀಜ ಭಿನ್ನಭಾವಕ್ಕೆ ಬಪ್ಪುದೆ ? ಕಂಗಳ ನೋಟ
ಕರುವಿಟ್ಟ ಮನದ ಸೊಗಸು ಅನಂಗನ ದಾಳಿಯ ಗೆಲಿದವು ಕಾಣಾ. ಈ ಮರೀಚಿಕಾಜಲದೊಳಡಗಿದ ಪ್ರಾಣಿ ವ್ಯಾಧನ ಬಲೆಗೆ ಸಿಲುಕುವುದೆ ? ನಿನ್ನ ಕೈವಶಕ್ಕೆ ಸಿಕ್ಕಿಹಳೆಂಬುದ ಮರೆಯಾ ಮರುಳೆ. ಚೆನ್ನಮಲ್ಲಿಕಾರ್ಜುನನಲ್ಲದೆ ಪರಪುರುಷ ನಮಗಾಗದ ಮೋರೆ ನೋಡಣ್ಣಾ.