Library-logo-blue-outline.png
View-refresh.svg
Transclusion_Status_Detection_Tool

ವಾನರಂಗಳಿಗೆ ಭೈತ್ರ ತಪ್ಪಿಬಂದಡೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ವಾನರಂಗಳಿಗೆ ಭೈತ್ರ ತಪ್ಪಿಬಂದಡೆ ಮುತ್ತು ಮಾಣಿಕ್ಯ ನವರತ್ನದ ಪೆಟ್ಟಿಗೆಗಳು ಸಾರಿದವು. ಸಾರಿದಡೆ ಆ ವಾನರಂಗಳು ಬಲ್ಲವೆ ಮುತ್ತಿನ ರಕ್ಷೆಯ ? ನವರತ್ನದ ಪೆಟ್ಟಿಗೆಯ ತೆರೆದು ನೋಡಿ
ಕೆಯ್ಕೊಂಡು
ವಾನರಂಗಳು ಮೆದ್ದು ನೋಡಿ
ಹಣ್ಣಲ್ಲವೆಂದು ಬಿಟ್ಟು ಕಳೆದವು. ಲೋಕದೊಳಗೆ ಶರಣ ಸುಳಿದಡೆ
ಆ ಶರಣನ ನಡೆ ನುಡಿ ಚಾರಿತ್ರವ ಕರ್ಮಿಗಳೆತ್ತ ಬಲ್ಲರು ? ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಶರಣರ ಇರವನು ನಿಮ್ಮ ಶರಣರು ಬಲ್ಲರಲ್ಲದೆ ಆ ವಾನರನಂತಹ ಮನುಜರೆತ್ತ ಬಲ್ಲರು.