ಶ್ರೀ ಮಂಜುನಾಥ-ಮಹಾಪ್ರಾಣ ದೀಪಂ

ವಿಕಿಸೋರ್ಸ್ದಿಂದ

ಶ್ರೀ ಮಂಜುನಾಥ ಚಲನಚಿತ್ರದಿಂದ "ಮಹಾಪ್ರಾಣ ದೀಪಂ" ಹಾಡು

  ಓಂ ಮಹಾಪ್ರಾಣ ದೀಪಂ ಶಿವಂ ಶಿವಂ
  ಮಹೌಂಕಾರ ರೂಪಂ ಶಿವಂ ಶಿವಂ
  ಮಹಾಸೂರ್ಯಚಂದ್ರಾದಿನೇತ್ರಂ ಪವಿತ್ರಂ
  ಮಹಾಗಾಢತಿಮಿರಾಂತಕಂ ಸೌರಗಾತ್ರಂ
  ಮಹಾಕಾಂತಿಬೀಜಂ ಮಹಾದಿವ್ಯತೇಜಂ
  ಭವಾನಿ ಸಮೇತಂ ಭಜೇ ಮಂಜುನಾಥಂ
  ಓಂ ನಮಃ ಶಂಕರಾಯ ಚ ವಯಸ್ಕರಾಯ ಚ
  ನಮಃ ಶಿವಾಯ ಚ ಶಿವತರಾಯ ಚ ಭವಹರಾಯ ಚ
  ಮಹಾಪ್ರಾಣ ದೀಪಂ ಶಿವಂ ಶಿವಂ
  ಭಜೇ ಮಂಜುನಾಥಂ ಶಿವಂ ಶಿವಂ
  ಅದ್ವೈತ ಭಾಸ್ಕರಂ ಅರ್ಧನಾರೀಶ್ವರಂ
  ತ್ರಿದಶ ಹೃದಯಂಗಮಂ ಚತುರುದಧಿಸಂಗಮಂ
  ಪಂಚಭೂತಾತ್ಮಕಂ ಷಟ್ಛತ್ರುನಾಶಕಂ
  ಸಪ್ತಸ್ವರೇಶ್ವರಂ ಅಷ್ಟಸಿದ್ಧೀಶ್ವರಂ
  ನವರಸ ಮನೋಹರಂ ದಶದಿಶಾ ಸುವಿಮಲಂ
  ಏಕಾದಶೊಜ್ಜ್ವಲಂ ಏಕನಾಥೇಶ್ವರಂ
  ಪ್ರಸ್ತುತಿವಶಂಕರಂ ಪ್ರಣತಜನಕಿಂಕರಂ
  ದುರ್ಜನಭಯಂಕರಂ ಸಜ್ಜನಶುಭಂಕರಂ
  ಪ್ರಾಣಿಭವತಾರಕಂ ಪ್ರಕೃತಿಹಿತಕಾರಕಂ
  ಭುವನಭವ್ಯಭವನಾಯಕಂ ಭಾಗ್ಯಾತ್ಮಕಂ ರಕ್ಷಕಂ
  ಈಶಂ ಸುರೇಶಂ ಋಷೇಶಂ ಪರೇಶಂ
  ನಟೇಶಂ ಗೌರೀಶಂ ಗಣೇಶಂ ಭೂತೇಶಂ
  ಮಹಾಮಧುರ ಪಂಚಾಕ್ಷರೀ ಮಂತ್ರಮಾರ್ಷಂ
  ಮಹಾಹರ್ಷ ವರ್ಷ ಪ್ರವರ್ಷಂ ಸುಶೀರ್ಷಂ
  ಓಂ ನಮೋ ಹರಾಯ ಚ ಸ್ಮರಹರಾಯ ಚ ಪುರಹರಾಯ ಚ
  ರುದ್ರಾಯ ಚ ಭದ್ರಾಯ ಚ ಇಂದ್ರಾಯ ಚ
  ನಿತ್ಯಾಯ ಚ ನಿರ್ನಿದ್ರಾಯ ಚ
  ಮಹಾಪ್ರಾಣ ದೀಪಂ ಶಿವಂ ಶಿವಂ
  ಭಜೇ ಮಂಜುನಾಥಂ ಶಿವಂ ಶಿವಂ
  ಢಂಢಂಢ ಢಂಢಂಢ ಢಂಢಂಢ ಢಂಢಂಢ
  ಢಂಕಾನಿನಾದ ನವತಾಂಡವಾಡಂಬರಂ
  ತದ್ಧಿಮ್ಮಿ ಥಕಧಿಮ್ಮಿ ದಿದ್ಧಿಮ್ಮಿ ಧಿಮಿಧಿಮ್ಮಿ
  ಸಂಗೀತ ಸಾಹಿತ್ಯ ಸುಮಕಮಲಬಂಭರಂ
  ಓಂಕಾರ ಹ್ರೀಂಕಾರ ಶ್ರೀಂಕಾರ ಹೈಂಕಾರ
  ಮಂತ್ರಬೀಜಾಕ್ಷರಂ ಮಂಜುನಾಥೇಶ್ವರಂ
  ಋಗ್ವೇದಮಾದ್ಯಂ ಯಜುರ್ವೇದವೇದ್ಯಂ
  ಸಾಮಪ್ರಗೀತಂ ಅಥರ್ವಪ್ರಕಾಶಂ
  ಪುರಾಣೇತಿಹಾಸ ಪ್ರಸಿದ್ಧಂ ವಿಶುದ್ಧಂ
  ಪ್ರಪಂಚೈಕಸೂತ್ರಂ ವಿಬುದ್ಧಂ ಸುಸಿದ್ಧಂ
  ನಕಾರಂ ಮಕಾರಂ ಶಿಕಾರಂ ವಕಾರಂ
  ಯಕಾರಂ ನಿರಾಕಾರ ಸಾಕಾರ ಸಾರಂ
  ಮಹಾಕಾಲಕಾಲಂ ಮಹಾನೀಲಕಂಠಂ
  ಮಹಾನಂದನಂದಂ ಮಹಾಟ್ಟಾಟ್ಟಸಹಾಸಂ
  ಜಟಾಜೂಟ ರಂಗೈಕ ಗಂಗಾಸುಚಿತ್ರಂ
  ಜ್ವಲದ್ಯುಗ್ರನೇತ್ರಂ ಸುಮಿತ್ರಂ ಸುಗೋತ್ರಂ
  ಮಹಾಕಾಶಭಾಸ್ವಂ ಮಹಾಭಾನುಲಿಂಗಂ
  ಮಹಾಬಭ್ರುವರ್ಣಂ ಸುವರ್ಣಂ ಪ್ರವರ್ಣಂ
  ಸೌರಾಷ್ಟ್ರ ಸುಂದರಂ ಸೋಮನಾಥೇಶ್ವರಂ
  ಶ್ರೀಶೈಲಮಂದಿರಂ ಶ್ರೀಮಲ್ಲಿಕಾರ್ಜುನಂ
  ಉಜ್ಜೈನಿಪುರ ಮಹಾಕಾಳೇಶ್ವರಂ
  ವೈದ್ಯನಾಥೇಶ್ವರಂ ಮಹಾಭೀಮೇಶ್ವರಂ
  ಅಮರಲಿಂಗೇಶ್ವರಂ ರಾಮಲಿಂಗೇಶ್ವರಂ
  ಕಾಶಿವಿಶ್ವೇಶ್ವರಂ ಪರಂ ಘೃಶ್ಮೇಶ್ವರಂ
  ತ್ರ್ಯಂಬಕಾದೀಶ್ವರಂ ನಾದಲಿಂಗೇಶ್ವರಂ
  ಶ್ರೀಕೇದಾರಲಿಂಗೇಶ್ವರಂ
  ಅಪ್ಲಿಂಗಾತ್ಮಕಂ ಜ್ಯೋತಿಲಿಂಗಾತ್ಮಕಂ
  ವಾಯುಲಿಂಗಾತ್ಮಕಂ ಆತ್ಮಲಿಂಗಾತ್ಮಕಂ
  ಅಖಿಲ ಲಿಂಗಾತ್ಮಕಂ ಅಗ್ನಿಸೋಮಾತ್ಮಕಂ
  ಅನಾದಿಂ ಅಮೇಯಂ ಅಜೇಯಂ ಅಚಿಂತ್ಯಂ
  ಅಮೋಘಂ ಅಪೂರ್ವಂ ಅನಂತಂ ಅಖಂಡಂ //೨//
  
  ಧರ್ಮಸ್ಥಳಕ್ಷೇತ್ರ ವರಪರಂಜ್ಯೋತಿಂ //೩//
  ಓಂ ನಮಃ ಸೋಮಾಯ ಚ ಸೌಮ್ಯಾಯ ಚ
  ಭವ್ಯಾಯ ಚ ಭಾಗ್ಯಾಯ ಚ
  ಶಾಂತಾಯ ಚ ಶೌರ್ಯಾಯ ಚ
  ಯೋಗಾಯ ಚ ಭೋಗಾಯ ಚ
  ಕಾಲಾಯ ಚ ಕಾಂತಾಯ ಚ
  ರಮ್ಯಾಯ ಚ ಗಮ್ಯಾಯ ಚ
  ಈಶಾಯ ಚ ಶ್ರೀಶಾಯ ಚ
  ಶರ್ವಾಯ ಚ ಸರ್ವಾಯ ಚ