ಶ್ವಾನಂಗೆ ಪೃಷ*ದಲ್ಲಿ ಬಾಲ;

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶ್ವಾನಂಗೆ ಪೃಷ*ದಲ್ಲಿ ಬಾಲ; ಉಪಾಧಿಕಂಗೆ ಬಾಯಲ್ಲಿ ಬಾಲ ನೋಡಾ. ಮಮಕಾರವೆಂಬ ನಾಯಿಯೆದ್ದು ಮುರುಗಲು ನಾಲಗೆಯೆಂಬ ಬಾಲ ಬಡಿದಾಡುತ್ತಿದೆ ನೋಡಾ. ಒಡಲುಪಾಧಿಗೆ ಉಪಚಾರವ ನುಡಿವ ವಿರಕ್ತನ ನಾಲಿಗೆ ನಾಯ ಬಾಲಕಿಂದ ಕರಕಷ್ಟ ನೋಡಾ. ಪರಮಾರ್ಥ ಪದದಲ್ಲಿ ಪರಿಣಾಮಿಯಾದವನ ಬಾಯಲ್ಲಿ ಪ್ರಪಂಚುಂಟೆ ಹೇಳಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.