ಸದಸ್ಯ:Priyanka.M 573

ವಿಕಿಸೋರ್ಸ್ದಿಂದ

ನನ್ನ ಹೆಸರು ಪ್ರಿಯಾಂಕ.ಎಂ . ನಾನು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನನ್ನ ಪದವಿ ಮಾಡುತಿದ್ದೇನೆ.ನನಗೆ ಬಹಳ ಇಷ್ಟವಾದುದು ಅಥವಾ ಇಷ್ತವಾಗುವವರು ಎಂದರೆ ನನ್ನ ತಂದೆ ತಾಯಿ. ನಾನು ಹೀಗೆ ಇಂಥಹ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದೇನೆ ಎಂದರೆ ಅದು ಕೇವಲ ನನ್ನ ತಂದೆ ತಾಯಿಗಳ ಪ್ರೋತ್ಸಾಹದಿಂದ ಮಾತ್ರ.ನಾನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಬಯಸುವ ಹಲವಾರು ಸನ್ನಿವೇಶಗಳು ಇವೆ. ಆ ಸನ್ನಿವೇಶಗಳು ನನ್ನ ಮೇಲೆ ಇಲ್ಲವೇ ನನ್ನ ಮನಸ್ಸಿನ ಮೇಲಾಗಲೀ ಒಂದಾದರು ಮಾಸದಂತ ಗುರುತು ಬಿಟ್ಟಿವೆ. ಇವುಗಳಲ್ಲಿ ಒಂದೆಂದರೆ, ನಾನು ಬಾಲ್ಯಾವಸ್ಥೆಯಲ್ಲಿದ್ದಾಗ ನನ್ನ ಅಣ್ಣ ಸೈಕಲ್ ಚಲಿಸುವುದನ್ನು ಹೇಳಿಕೊಡುವಾಗ ನನ್ನನ್ನು ಬೀಳಿಸಿದ. ಆಗ ಆ ಸನ್ನಿವೇಶದಲ್ಲಿ ನನ್ನ ನೆತ್ತಿಯ ಮೇಲಾದ ಗುರುತು, ಆ ಗುರುತ್ತನ್ನು ನೋಡಿದರೆ, ಆ ದಿನವು ನಡೆದ ಎಲ್ಲಾ ಖುಷಿ, ನೋವು, ನನ್ನ ತಾಯಿಯಿಂದ ಸಿಕ್ಕ ಹೊಡೆತ ...... ಇವೆಲ್ಲವೂ ನನ್ನ ಕಣ್ಣ ಮುಂದೆ ನೈಜವಾಗಿ ಬಂದಂತಾಗುತ್ತದೆ. ನನ್ನ ಈ ಕ್ಷಣ ನೆನಪಿಸಿಕೊಳ್ಳುವಾಗ ಮತ್ತೊಂದು ಘಟನೆಯು ನನ್ನ ನೆನಪಿನ ಬುತ್ತಿಯಿಂದ ಹೊರಬರುತ್ತದೆ. ಅದೇನೆಂದರೆ, ನಾನು ಹತ್ತನೆಯ ತರಗತಿಯಲ್ಲಿದ್ದಾಗ ನಾನು ಹಾಗು ನನ್ನ ಗೆಳತಿಯರು, ನನ್ನ ಶಿಕ್ಷಕರು ಹಾಗು ಎಲ್ಲರೂ ಸಹ ಕೂಡಿ ಶಾಲೆಯ ವತಿಯಿಂದ ಒಂದು ಪ್ರವಾಸಕ್ಕೆ ಹೊರಟ್ಟಿದ್ದೆವು. ಅಂದು ನಾನು ಅನೇಕ ಐತಿಹಾಸಿಕ ತಾಣಗಳನ್ನು, ದೇವಾಲಯಗಳನ್ನು, ಎಲ್ಲವನ್ನೂ ಕಂಡೆ ಅದರೊಡನೆ ಅನೇಕ ಮನರಂಜನೆಯನ್ನೂ ಸಹ ಪಡೆದೆ. ಹೇಳಬೇಕಾದರೆ ಅದೇ ಮೊದಲಬಾರಿಗೆ ನಾನು ಪ್ರವಾಸಕ್ಕೆ ಹೋಗಿದ್ದು. ಅದು ಎಲ್ಲಿಗೆಂದರೆ..... ಮೇಲುಕೋಟೆಯ ಯೋಗನರಸಿಂಹ ದೇವಾಲಯಕ್ಕೆ, ಅಲ್ಲೇ ಪಕ್ಕದಲ್ಲಿದ್ದ ವೇಣುಗೋಪಾಲ ದೇವಾಲಯಕ್ಕೆ, ಬಲಮುರಿಯ ಕಾವೇರಿ ಸಂಗಮ, ಹಾಗು ಮೈಸೂರಿನಲ್ಲಿರುವ ಟಿಪ್ಪು ಸುಲ್ತಾನಮತ್ತು ಹೈದರಾಲಿಯ ದೇಹವನ್ನು ಅಂತಕ್ರಿಯೆ ಮಾಡಿರುವ ಆ ಅರಮನೆಗೂ ಸಹ ಬೇಟಿಕೊಟ್ಟೆವು. ನಿಜಕ್ಕೂ ಆ ದಿನ ನನ್ನೊಡನೆ ಇಂದಿಗೂ "ಪ್ರವಾಸ ಕಥನ"ವೆಂಬ ಹೆಸರೊಂದಿಗೆ ನನ್ನೊಡನೆ ಇಂದೂ ನನ್ನ ನೆನಪಿನ ಬುತ್ತಿಯಲ್ಲಿ ಜೀವಂತವಾಗಿದೆ. ಇನ್ನೊಂದು ಕ್ಷಣವೆಂದರೆ ಅಂದು ಮೊದಲ ಬಾರಿಗೆ ನನ್ನ ತಂದೆ ತಾಯಿ ಇಬ್ಬರೂ ಅಷ್ಟೂ ಖುಷಿಯಾಗಿರುವದನ್ನು ಕಂಡ ದಿನ ಹಾಗು ನಾನು ಸಹ ಊಹಿಸಿಲ್ಲವಾದಂತ ದಿನ. ಅದೇನೆಂದರೆ ನನ್ನ ಎಸ್.ಎಸ್.ಎಲ್.ಸಿ ಯ ಪಲಿತಾಂಷಚವು ಹೊರಬಿದ್ದಂತ ದಿನ. ನನಗೆ ೯೪% ಸಿಕ್ಕಿತ್ತು. ಆ ದಿನವನ್ನು ನಾನು ಇಂದೂ ಮರೆಯಲು ಸಾದ್ಯವಾಗೊದಿಲ್ಲ. ಆ ದಿನದ ದಿನಪತ್ರಿಕೆಯಲ್ಲಿ ನನ್ನ ಮಿತ್ರರೊಂದಿಗೆ ನನ್ನ ಭಾವಚಿತ್ರವು ಪ್ರಕಟವಾಗಿತ್ತು. ಆ ಪತ್ರಿಕೆಯನ್ನು ನನ್ನ ತಂದೆಯವರು ಅವರ ಮಿತ್ರರಿಗೆ, ಬಂಧುಗಳಿಗೆ, ನೆರೆಹೊರೆಯವರಿಗೆ,ಎಲ್ಲರಿಗೂ ತೋರಿಸಿ, ಸಿಹಿ ಹಂಚಿ, ಖುಷಿಪಟ್ಟಿದ್ದನ್ನು ಇಂದೂ ಮರೆಯಲಾರೆ. ಬಹುಷಃ ನಾನು ಆ ಒಂದು ದಿನವಾದರು...... ನನ್ನ ತಂದೆ ತಾಯಿಯನ್ನು ಖುಷಿಪಡಿಸಿದೆನಲ್ಲಾವೆಂಬ ಮನಃಶಾಂತಿ ಸಿಕ್ಕಿತ್ತು. ಇವೆಲ್ಲದರೊಡನೆ ನನಗೆ ಹಲವಾರು ಕನಸು ಅಥವಾ ಗುರಿಗಳೂ ಸಹ ಇವೆ. ಅದೇನೆಂದರೆ, ಮೊದಲಿಗೆ ೧.ನಾನು ಯಶಸ್ವಿಯಾಗಿ ನನ್ನ ಪದವಿ ಮುಗಿಸಬೇಕೆಂದು.

                ೨.ನಾನು ಓದಿದ ಶಾಲೆಯಲ್ಲೇ ನಾನು ಒಬ್ಬ ಶಿಕ್ಷಕಿಯಾಗಬೇಕೆಂದು.
                ೩.ಕವಿಗಳ ನಾಡು ಎಂದು ಕರೆಯುವ ಶಿವಮೊಗ್ಗದ, ಮಲೆನಾಡಿನ ಹಚ್ಚ ಹಸಿರಿನಲ್ಲಿ ನನ್ನ ಪೂರ್ಣ ಪರಿವಾರದೊಂದಿಗೆ ಒಮ್ಮೆ ಜೀವಿಸಬೇಕೆಂದು.......
        ಮತ್ತೊಂದು ಮುಖ್ಯವಾಗಿ, ಹೇಳಬೆಕಾದರೆ ಹೇಗೆ ನನ್ನ ತಂದೆ ತಾಯಿ ಇಬ್ಬರೂ ಇಂದಿಗೂ ನನ್ನನ್ನು ಪುಟ್ಟ ಮಗುವೆಂದು ನೋಡಿಕೊಳ್ಳುವ ಹಾಗೆ ನಾನು ಸಹ ಅವರ ವೃಧಾವಸ್ಥೆಯಲ್ಲಿ ಅವರನ್ನು 
               ನಾನು ಪುಟ್ಟ ಮಕ್ಕಳ ಹಾಗೆಯೇ ಅವರ ಜವಬ್ದ್ದಾರಿಗಳನ್ನು ನನ್ನ ಹೆಗಲೇರಿಸಿಕ್ಕೊಳ್ಳಬೇಕು. 

ಇವೆಲ್ಲಾ ಕನಸುಗಳು ಒಂದೊಂದೂ ಕ್ಷಣವೂ ನನ್ನನ್ನು ಕಾಡುತ್ತವೆ. ಹಾಗು ಇವೆಲ್ಲಾ ಕನಸುಗಳು ಇಂದೂ ನನ್ನ ಮನದಲ್ಲಿ ಒಂದು ಜ್ವಾಲಾಗ್ನಿಯಾಗಿ ಬಿಡದಂತೆ ಉರಿಯುತ್ತಿರುತ್ತದೆ. ಹಾಗು ನಾನೆಂದಿಗೂ ಆ ಬೆಂಕಿಯನ್ನು ನನ್ನ ಮನಸ್ಸಲ್ಲಿ ಆರಲು ಬಿಡುವ ಸಾಧ್ಯತೆಯೇ ಇಲ್ಲ.


This user is a member of WikiProject Education in India

ಉಪಪುಟಗಳು[ಸಂಪಾದಿಸಿ]

In this ಸದಸ್ಯspace:

ಸದಸ್ಯ:
Priyanka.M 573
ಸದಸ್ಯರ ಚರ್ಚೆಪುಟ:
Priyanka.M 573