ವಿಷಯಕ್ಕೆ ಹೋಗು

ಸದಸ್ಯ:Sarvagnya

ವಿಕಿಸೋರ್ಸ್ದಿಂದ

1-100

ಜಾತಿಸ್ಮರಣ ಪದ್ದತಿ

೧. ಮುನ್ನ ಪೂರ್ವದಲಾನು | ಪನ್ನಗಧರನಾಳು
ಎನ್ನಯ ಪೆಸರು ಪುಷ್ಪದತ್ತನು-ಎಂದು
ಮನ್ನಿಪರು ನೋಡ ಸರ್ವಜ್ಞ

೨. ಅಂದಿನಾ | ಪುಷ್ಪದತ್ತ || ಬಂದ ವರರುಚಿಯಾಗಿ
ಮುಂ ದೇವಸಾಲೆ ಸರ್ವಜ್ಞ - ನೆಂದೆನಿಸಿ
ನಿಂದವನು ತಾನೇ ಸರ್ವಜ್ಞ

೩. ಮಕ್ಕಳಿಲ್ಲವು ಎಂದು | ಅಕ್ಕಮಲ್ಲಮ್ಮನು
ದುಕ್ಕದಿ ಬಸವ | ಗರಿಪಲ್ಲವ | - ಕಾಶಿಯ
ಮುಕ್ಕಣ್ಣಗೆ ಹೋದ ಸರ್ವಜ್ಞ

೪. ಮಾಸನೂರ ಬಸವರಸ | ಕೊಸನಿಶನ ಕೇಳಲು
ಕಾಶಿಯೀಶನೊಳು ಪಡೆದ ವರ - ವಧು ನಡುವೆ
ಸೂಸಿತೆಂತಲು ಸರ್ವಜ್ಞ

೫. ಗಂಡಾಗಬೇಕೆಂದು | ಪಿರಿಂಡವ ನುಂಗಲು
ಲಂಡೆ ಮಾಳ್ವೆಯೊಳು ಜನಿಸಿ - ಲೋಕದೊಳು
ಕಂಡುದನೆ ಪೇಳ್ವೆ ಸರ್ವಜ್ಞ

೬. ಗಡಿಗೆ-ಮಡಕೆಯ ಕೊಂಡು | ಅಡುವಡಾವಿಗೆಯೊಳಗೆ
ಬಿಡದೆ ಮಳೆಮೋಡ ಹಿಡಿಯಲವ - ರಿಬ್ಬರಿಗು
ತಡೆ ಬಿಡಲಾಯ್ತು ಸರ್ವಜ್ಞ

೭. ಅಂಬಲೂರೊಳಗೆಸೆವ | ಕುಂಬಾರಸಾಲೆಯಲಿ
ಇಂದಿನ | ಕಳೆಯ | ಮಾಳಿಯೊಳು - ಬಸವರಸ
ನಿಂಬಿಟ್ಟನೆನ್ನ ಸರ್ವಜ್ಞ

೮. ಬಿಂದುವ ಬಿಟ್ಟು ಹೋ | ದಂದು ಬಸುರಾದಳವ
ಳಂದದಿಯಷ್ಟಾದಶ ಮಾಸ - ಉದರದಲಿ
ನಿಂದು ನಾ ಬೆಳೆದೆ ಸರ್ವಜ್ಞ

೯. ಹೆತ್ತವಳು ಮಾಳಿ ಎನ್ನ | ನೊತ್ತಿ ತೆಗೆದವಳು ಕೇಶಿ
ಕತ್ತು ಬೆನ್ನ ಹಿಡಿದವಳು ಕಾಳಿ - ಮೊರಿದೊಳೆನ್ನ
ಬತ್ತಲಿರಿಸಿದಳು ಸರ್ವಜ್ಞ

೧೦. ಬೆಳೆದೆನವರಿಂದೆನ್ನ | ಕಳೆಯ ಕಂಡವರೆಲ್ಲ
ಮೊಳೆಯಲ್ಲಿ ಸಸಿಯನರಿವಂತೆ - ಮಾಳಿಯ
ತಿಳಿದವರರೆಗು ಸರ್ವಜ್ಞ

೧೧. ಗಂಡ ತನ್ನಯದೆಂಬ | ಲಂಡೆ ತನ್ನಯದೆಂಬ
ಖಂಡಪರಶುವಿನ ವರಪುತ್ರ - ನಾನು ನೆರೆ
ಕಂಡುದೆನೆ ಪೇಳ್ವೆ ಸರ್ವಜ್ಞ

೧೨. ಮಾಳನು ಮಾಳಿಯು | ಕೊಳ್ ತಿಂದ ಹೆಮ್ಮೆಯಲಿ
ಕೇಳೆ ನೀನಾರ ಮಗನೆಂದು - ನಾ ಶಿವನ
ಮೇಳದಣುಗೆಂಬೆ ಸರ್ವಜ್ಞ

೧೩. ತಂದೆ ಹಾರುವನಲ್ಲ | ತಾಯಿ ಮಾಳಿಯು ಅಲ್ಲ
ಚಂದ್ರಶೇಖರನ ವರಪುತ್ರ - ನಾ ನಿಮ್ಮ
ಕಂದನಲ್ಲೆಂಬೆ ಸರ್ವಜ್ಞ

೧೪. ನೊಕಿದವರಾಗ | ಕುಕಟಿಯವನು
ಲೋಕದೊಳಗೆಲ್ಲ ಕಂಡುದ - ನುಡಿವುತ
ಏಕವಾಗಿಹೆನು ಸರ್ವಜ್ಞ

೧೫. ಮೀರಿ ಬೆಳೆಯಲ್ಕೆನಗೆ | ಅರಿ ಬಣ್ಣವನುಡಿಸಿ
ಮೂರು ರುಚಿದೋಳು ಶಿವ - ತನ್ನನು
ತೋರದೇ ಹೋದ ಸರ್ವಜ್ಞ

೧೬. ಕ್ಷೀರದೊಳು ಘೃತವಿದ್ದು | ನೀರೊಳು ಶಿಖಿಯಿದ್ದು
ಆರಿಗೆಯು ತೋರಿದಿಹುದಂತೆ - ಎನ್ನೊಳಗೆ
ಸಾರಿಹನು ಸಿವನು ಸರ್ವಜ್ಞ

೧೭. ಹೊಲಸು ಮಾಂಸದ ಹುತ್ತ | ಎಲುವಿನ ಹಂಜರವು
ಹೊಲೆ ಬಲಿದು ತನುವಿನೊಳಗಿರ್ದು - ಮತ್ತದರಿ
ಕುಲವನೆಣೆಸುವರೆ ಸರ್ವಜ್ಞ

೧೮. ಎಲುವಿನ ಕಾಯಕ್ಕೆ | ಸಲೆ ಚರ್ಮವನು ಹೊದಿಸಿ
ಮಲ-ಮೂತ್ರ-ಕ್ರಿಮಿಯು ಒಳಗಿರ್ಪ - ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ

೧೯. ಬೆಂದಾವಿಗೆಯ ಭಾಂಡ | ಒಂದೊಂದು ಭೋಗವನು
ಅಂದಂದಿಗುಂಡು ಒಡೆದು ಹಂಚಾದಂತೆ
ಬಿಂದುವಿನ ದೇಹ ಸರ್ವಜ್ಞ

೨೦. ಮಗಳಕ್ಕ ತಂಗಿಯು | ಮಿಗೆ ಸೊಸೊಯು ನಾದಿನಿಯು
ಜಗದ ವನಿತೆಯರು ಜನನಿ ಮಂತಾದವರು
ಜಗಕೊಬ್ಬಳೈಸೆ ಸರ್ವಜ್ಞ

೨೧. ಪಂಚವಿಂಶಶಿತತ್ವ | ಸಂಚದ ದೇಹವನು
ಹಂಚೆಂದು ಕಾಣಲರಿಳೆಯದೋಡೆ - ಭವ ಮುಂದೆ
ಗೊಂಚಲಾಗಿಹುದು ಸರ್ವಜ್ಞ

೨೨. ನೋಡಿರೇ ಎರಡೊರು | ಕೂಡಿದ ಮಧ್ಯದಲಿ
ಮೂಡಿಹ ಸ್ಮರನ ಮನೆಯಲ್ಲಿ -
ನಾಡೆಯುದಯಿಸಿತು ಸರ್ವಜ್ಞ

೨೩. ಊರಗಳ ಮೂಲದಲಿ | ಮಾರನರಮನೆಯಲ್ಲಿ
ಭೋರಿಜೀವಿಗಳ ಹುಟ್ಟಿಸಿದ - ಅಜನಿಗಿ
ನ್ನಾರು ಸಾಯುಂಟೆ ಸರ್ವಜ್ಞ

೨೪. ಲಿಂಗಯಲ್ಲಿ | ಸಂಗಿಸಿ ಚರಿಸಲು
ಜಂಘೆಯಲಿ ನಡವ ಸರ್ವ ಜೀವಂಗಳು
ಲಿಂಗದಿಂ ಜನನ ಸರ್ವಜ್ಞ

೨೫. ಲಿಂಗ ಉಳ್ಳನೆ ಪುರುಷ | ಲಿಂಗ ಉಳ್ಳನೆ ಸರಸ
ಲಿಂಗ ಉಳ್ಳವಗೆ ರತಿಭೋಗ - ವತುಳಸುಖ
ಲಿಂಗದಿಂ ಜನನ ಸರ್ವಜ್ಞ

೨೬. ಮಾಸಿನೊಳು ಮುಸುಕಿರ್ದು | ಮೂಸಿ ಬರುತಾಸನವ
ಹೇಸಿಕೆಯ ಮಲವು ಸೂಸುವುದ - ಕಂಡು ಕಂ
ಡಾಸೆ ಬಿಡದು ಸರ್ವಜ್ಞ

೨೭. ಬ್ರಹ್ಮ ಗಡ | ಸ್ಥಿತಿಗೆ ಆ ವಿಷ್ಣು ಗಡ
ಹತವ ಮಾಡುವಡೆ ರುದ್ರ ಗಡ - ಎಂದೆಂಬ
ಸ್ಥಿತಿಯ ತಿಳಿಯೆಂದ ಸರ್ವಜ್ಞ
೨೮. ದಿಟವೆ ಪುಣ್ಯದ ಪುಂಜ | ಸಟೆಯೆ ಪಾಪದ ಬೀಜ
ಕುಟಿಲ ವಂಚನೆಯ ಪೊಗದಿರು - ನಿಜವ ಪಿಡಿ
ಘಟವ ನೆಚ್ಚದಿರು ಸರ್ವಜ್ಞ

೨೯. ಪರಮನೈಮೊಗ ಉಳಿದು | ನೆರವಿಯನೊಲ್ಲದೆ
ನರರೊಪ ಧರಿಸಿ ಗುರುವಾಗಿ - ಬೋಧಿಪಗೆ ಸರಿ ಯಾರ ಕಾಣೆ ಸರ್ವಜ್ಞ

೩೦. ಪರತತ್ವ ತನ್ನೊಳಗೆ | ಎರವಿಲ್ಲದಿರುತಿರಲು
ಪರದೇಶಿಯಾಗಿ ಇರುತಿರು - ವಾತನ ಪರಮ ಗುರುವೆಂಬೆ ಸರ್ವಜ್ಞ

೩೧. ಸುರತರು ಮರನಲ್ಲ | ಸುರಭಿಯೊಂದಾವಲ್ಲ
ಪರುಷ ಪಾಷಾಣದೊಳಗಲ್ಲ - ಗುರುವು ತಾ ನರರೊಳಗಲ್ಲ ಸರ್ವಜ್ಞ

೩೨. ದರುಶನವಾರಿರಃ | ಪುರುಷರು ಮೂವರಿಂ
ಪರತತ್ವದಿರವು ಬೇರೆಂದು - ತೋರಿದ ಗುರು ತಾನೆ ದೈವ ಸರ್ವಜ್ಞ

೩೩. ಜ್ಯೋತಿಯಿಂದವೆ ನೇತ್ರ | ರಾತ್ರಿಯಲಿ ಕಾಂಬಂತೆ
ಸೂತ್ರದಲಿ ಧಾತನರೆವಂತೆ - ಶಿವನ ಗುರು ನಾಥನಿಂದರಿಗು ಸರ್ವಜ್ಞ

೩೪. ಬ್ರಹ್ಮವೆಂಬುದು ತಾನು | ಒಮ್ಮಾರು ನೀಳವೇ
ಒಮ್ಮೆ ಸದ್ಗುರುವಿನುಪದೇಶ - | ವಾಲಿಸಲು | ಗಮ್ಮನೆ ಮುಕ್ತಿ ಸರ್ವಜ್ಞ

೩೫. ಹರ ತನ್ನೊಳಿರ್ದುದ | ಗುರುತೋರಿ | ದಿರಲಹುದೆ |
ಮರನೊಳಗ್ನಿ ಇರುತಿರ್ದು - ತನ್ನ ತಾ ನುರಿವುದ ಕಂಡ ? ಸರ್ವಜ್ಞ

೩೬. ನರಕ ಪಾಪಿಷ್ಠರಿಗೆ | ಸುರಲೋಕ ( ದಿಟ್ಟರಿಗೆ )
ಗುರುಬೋಧೆಯಲ್ಲಿ ಜಗ ಉಳಿಗು - ಮಲ್ಲದೊಡೆ ಉರಿದು ಹೋಗುವುದು ಸರ್ವಜ್ಞ

೩೭. ಮರಹುಳ್ಳ ಮನುಜರಿಗೆ | ತೆರನಾವುರೆವುದಕೆ
ಕರಿಗೊಂಡ ಭ್ರಮೆಯ ಪರೆವ - ಗುರುವಿನ ಭೋಧೆ ಕರಿಗೊಳ್ಳಬೇಕು ಸರ್ವಜ್ಞ

೩೮. ಮಂಡೆ ಬೋಳಾದೊಡಂ | ದಂಡು ಕೋಲ್ವಿಡಿದೊಡಂ
ಹೆಂಡತಿಯ ಬಿಟ್ಟು ನಡೆದೊಡಂ - ಗುರುಮುಖವ ಕಂಡಲ್ಲದಿಲ್ಲ ಸರ್ವಜ್ಞ

೩೯. ಮೂರುಕಣ್ಣೀಶ್ವರನ | ತೋರಿಕೊಡಬಲ್ಲ ಗುರು
ಬೇರರಿವುದೊಂದು ತೆರನಿಲ್ಲ - ಗುರುಕರಣ ತೋರಿಸುಗು ಶಿವನ ಸರ್ವಜ್ಞ

೪೦. ಊರಿಗೆ ದಾರಿಯ | ನಾರು ತೋರಿದರೇನು
ಸಾರಾಯಮಪ್ಪ ಮತವನರಿಹಿಸುವ ಗುರು ಆರಾದೊಡೇನು ಸರ್ವಜ್ಞ

೪೧. ಮನವು ಮುಟ್ಟಲು ಗಂಡು | ತನವು ಸೋಂಕಲು ಪಾಪ
ಮನವೇಕದಿಂದ ಗುರುಚರಣ - ಸೋಂಕಿದೊಡೆ ತನು ಶುದ್ದವಯ್ಯ ಸರ್ವಜ್ಞ

೪೨. ತುಪ್ಪವಾದಾ ಬಳಿಕ | ಹೆಪ್ಪನೆರೆದವರುಂಟೆ
ನಿಃಪತಿಯಾದ ಗುರುವಿನುಪದೇಶದಿಂ ತಪ್ಪದೇ ಮುಕ್ತಿ ಸರ್ವಜ್ಞ

೪೩. ಪರುಷ ಲೋಹವ ಮುಟ್ಟಿ | ವರುಷವಿರಬಲ್ಲುದೇ
ಪರಷವೆಂತಂತೆ ಶಿಷ್ಯಂಗೆ - ಗುರುವಿನ ಸ್ಪರುಶನವೆ ಮೋಕ್ಷ ಸರ್ವಜ್ಞ

೪೪. ತಾಪದ ಸಂಸಾರ | ಕೊಪದಲಿ ಬಿಳ್ದವರು
ಆಪತ್ತನುಳಿದು ಪೊರಮಡಲು - ಗುರುಪಾದ ಸೋಪಾನ ಕಂಡು ಸರ್ವಜ್ಞ

೪೫. ಮೊಸರ ಕಡೆಯಲು ಬೆಣ್ಣೆ | ಒಸೆದು ತೋರುವ ತೆರದಿ
ಹಸನುಳ್ಳ ಗುರುವಿನುಪದೇಶ - ದಿಂ ಮುಕ್ತಿ ವಶವಾಗದಿಹುದೆ ಸರ್ವಜ್ಞ

೪೬. ಗುರುಪಾದಸೇವೆ ತಾ | ದೊರೆಕೊಂಡಿತಾದೊಡೆ
ಹರೆವುದು ಪಾಪವರಿದೆನಲು - ವಜ್ರಾಯುಧದಿ ಗಿರಿಯ ಹೊಯ್ದಂತೆ ಸರ್ವಜ್ಞ

೪೭. ಗುರುವಿನ ಸೇವೆಯು | ದೊರಕೊಂಡಿತಾದೊಡೆ
ಹರೆವುದು ಪಾಪವರಿದೆನಲು - ವಜ್ರಾಯುಧದಿ ಗಿರಿಯ ಹೊಯ್ದಂತೆ ಸರ್ವಜ್ಞ

೪೮. ಎತ್ತಾಗಿ ತೊತ್ತಾಗಿ | ಹಿತ್ತಿಲದ ಗಿಡವಾಗಿ
ಮತ್ತೆ ಪಾದದ ಕೆರವಾಗಿ - ಗುರುವಿನ ಹತ್ತಿಲಿರು ಎಂದು ಸರ್ವಜ್ಞ

೪೯. ಸಾಣೆಕಲ್ಲೊಳು ಗಂಧ | ಮಾಣದೆ ಎಸೆವಂತೆ
ಜಾಣ ಶ್ರೀಗುರುವಿನುಪದೇಶ - ದಿಂ ಮುಕ್ತಿ ಕಾಣೆಸುತಿಹುದು ಸರ್ವಜ್ಞ

೫೦. ಬೆಟ್ಟ ಕರ್ಪುರ ಉರಿದು | ಬೊಟ್ಟಿಡಲು ಬೂದಿಲ್ಲ
ನೆಟ್ಟನೆ ಗುರುವನರಿದನ - ಕರ್ಮವು ಮುಟ್ಟಲಂಜುವವು ಸರ್ವಜ್ಞ

೫೧.ದುರ್ಗಿ(ಮಾರಿಯ ಮುಂಡಿ) | ಯಗ್ಗದ ಶಕ್ತಿಗಳು
ಸದ್ಗುಣ ಸತ್ಯ ಮುಸುರಿಹರ - ಮುಟ್ಟವು ಸದ್ಗುರುವಿನಾಜ್ಞೆ ಸರ್ವಜ್ಞ

೫೨. ವಿಷಯಕ್ಕೆ ಕುದಿಯದಿರು | ಆಶನಕ್ಕೆ ಹದೆಯದಿರು
ಅಸಮಾಕ್ಷನಡಿಯನಗಲದಿರು - ಗುರುಕರುಣ ವಶವರ್ತಿಯಹುದು ಸರ್ವಜ್ಞ

೫೩. ತಂದೆಗೆ ಗುರುವಿಗೆ | ಒಂದು ಅಂತರವುಂಟು
ತಂದೆ ತೋರಿವನು ಶ್ರೀಗುರುವ - ಗುರುರಾಯ ಬಂಧನವ ಕಳೆವ ಸರ್ವಜ್ಞ

೫೪. ಹುಸಿವನ ಬೇಹಾರ | ಕಸ ಹತ್ತಿದಾರಂಬ
ವಿಷಯ ಉಳ್ಳವನ ಗುರುತನ - ಇವು ಮೂರು ಮಸಿವಣ್ಣ ಕಂಡ ಸರ್ವಜ್ಞ

೫೫. ಹಂದಿ ಚಂದನಸಾರ | ಗಂಧವ ಬಲ್ಲುದೇ
ಒಂದುವ ತಿಳಿಯಲರಿಯದನ - ಗುರುವಿಗೆ ನಿಂದ್ಯವೇ ಬಹುದು ಸರ್ವಜ್ಞ

೫೬. ಹೊಲಬನರಿಯದ ಗುರುವು | ತಿಳಿಯಲರಿಯದ ಶಿಷ್ಯ
ನೆಲೆಯನಾರಯ್ಯದುಪದೇಶ - ವಂಧಕನು ಕಳನ ಹೊಕ್ಕಂತೆ ಸರ್ವಜ್ಞ

೫೭. ಶ್ವಾನ ತೆಂಗಿನ ಕಾಯ | ತಾನು ಮೆಲಬಲ್ಲುದೇ
ಜ್ಞಾನವಿಲ್ಲದಗೆ ಉಪದೇಶ - ವಿತ್ತಡೆ ಹಾನಿ ಕಂಡಯ್ಯ ಸರ್ವಜ್ಞ

೫೮. ಭಕ್ತಿಯಿಲ್ಲದ ಶಿಷ್ಯ | ಗೊತ್ತಿ ಕೊಟ್ಟುಪದೇಶ
ಬತ್ತಿದ ಕೆರೆಯ ಬಯಲಲ್ಲಿ - ರಾಜನವ ಬಿತ್ತಿ ಬೆಳೆವಂತೆ ಸರ್ವಜ್ಞ

೫೯. ಹಸಿಯ ಸೌದೆಯ ತಂದು | ಹೊಸೆದರುಂಟೇ ಕಿಚ್ಚು
ವಿಷಯಂಅಗಳುಳ್ಳ ಮನುಜರಿಗೆ - ಗುರುಕರುಣ ವಶವರ್ತಿಯಹುದೆ ಸರ್ವಜ್ಞ

೬೦. ಒಂದೂರ ಗುರುವಿರ್ದು | ವಂದನೆಯ ಮಾಡದೆ
ಸಂದಿಸೆ ಕೊಳ ತಿನಿತಿಪರ್ವನ - ಇಅರವು ಹಮ್ದಿಯ ಇಅರವು ಸರ್ವಜ್ಞ


ಲಿಂಗಾತಿಶಯ ಪದ್ಧತಿ ೬೧. ಕಲ್ಲಿನೊಳ್ ಕುಚದಲ್ಲಿ | ಬಳ್ಳದೊಳ್ ಪಿಕ್ಕೆಯಲಿ
ಎಲ್ಲಿ ಭಾವಿಸಿದೊಡಲ್ಲಿರ್ಪ - ಭರಿತನನು
ಬಲ್ಲವೇ ನಿಗಮ ಸರ್ವಜ್ಞ

೬೨. ಲಿಂಗದ ಗುಡಿಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ
ಲಿಂಗದೆ ಜಗವು ಅಡಗಿಹುದು - ಲಿಂಗವನು
ಹಿಂಗಿ ಪರ ಉಂಟೆ ಸರ್ವಜ್ಞ

೬೩. ಓಂಕಾರ ತಾನಲ್ಲ | ಹ್ರಾಂಕಾರ ಮುನ್ನಲ್ಲ
ಆಂಕಾಶತಳವ ಮೀರೆಹುದು - ಹರಿಯಜರು
ತಾಂ ಕಾಣರಯ್ಯ ಸರ್ವಜ್ಞ

೬೪. ಓರ್ವನಲ್ಲದೆ ಮತ್ತೆ | ಇರ್ವರುಂಟೇ ಮರುಳೆ
ಸರ್ವಜ್ಞನೊರ್ವ ಜಗಕೆಲ್ಲ - ಕರ್ತಾರ
ನೊರ್ವನೇ ದೇವ ಸರ್ವಜ್ಞ

೬೫. ಉಣಲಡಿಗೆ ಹಲವಾಗಿ | ಕಣಿಕ ತಾನೊಂದಯ್ಯ
ಮಣಲೇಸು ದೈವ ಘನವಾಗಿ - ಲೋಕಕ್ಕೆ
ತ್ರಿಣಯನ ಸರ್ವಜ್ಞ

೬೬. ಹರಿಬ್ರಹ್ಮರೆಂಬವರು | ಹರನಿಂದಲಾದವರು
ಅರಸಿಂಗೆ ಆಳು ಸರಿಯಹನೆ - ಪಶುಪತಿಗೆ
ಸರಿ ಯಾರ ಕಾಣೆ ಸರ್ವಜ್ಞ

೬೭. ಹಿರಿಯ ಬೊಮ್ಮನು ಕೆಂಚ | ಹಿರಿಯ ಹರಿ ತಾ ಕರಿಕ
ಪುರಹರನು ಶುದ್ಧ ಧವಳಿತನು - ಇರೆ ಬೇರೆ
ಹರಗೆ ಸರಿಯಹರೀ ಸರ್ವಜ್ಞ

೬೮. ಹರಿದ ತಲೆ ಬ್ರಹ್ಮಂಗೆ \ ಕುರೆಯ ತಲೆ ದಕ್ಷಂಗೆ
ನೆರೆ ಹತ್ತು ಜನನವಾ ಹರಿಗೆ - ಇವರುಗಳು
ಕರೆಗೊರಲಗಣೆಯೆ ಸರ್ವಜ್ಞ

೬೯. ಹುಟ್ಟಿಸುವನಜನೆಂಬ | ಕಷ್ಟದ ನುಡಿ ಬೇಡ
ಹುಟ್ಟಿಸುವವ ತನ್ನ ಶಿರ ಹರೆಯೆ - ಮತ್ತೊಂದು
ಹುಟ್ಟಿಸಿಕೊಳನೇಕೆ ಸರ್ವಜ್ಞ

೭೦. ಬ್ರಹ್ಮ ನಿರ್ಮಿಪನೆಂಬ | ದುರ್ಮತಿಯೆ ನೀಂ ಕೇಳು
ಬ್ರಹ್ಮನಾ ಸತಿಗೆ ಮೂಗಿಲ್ಲ - ವಾ ಮೂಗ
ನಿರ್ಮಿಸನೇಕೆ ಸರ್ವಜ್ಞ

೭೧. ನರಹರಿಯ ಕೊಲುವಂದು | ಎರಳೆಯನೆಸುವಂದು
ಮರಳಿ ವರಗಳನು ಕೊಡುವಂದು - ಸ್ಮರಹರೆಗೆ
ಸರಿಯಾರ ಕಾಣೆ ಸರ್ವಜ್ಞ

೭೨. ಷಡುದರುಶನಾದಿಗಳು | ಮೃಡ ಮಾಡಲಾದುವು
ಹೊಡವಡುತೆ ನಿಗಮವರಿಸುವವು - ಅಭವನ
ಗಡಣಕೇಕೆ ಯಾರು ಸರ್ವಜ್ಞ

೭೩. ದೇಶಕ್ಕೆ ಸಜ್ಜನನು | ಹಾಸ್ಯಕ್ಕೆ ಹನುಮಂತ
ಕೇಶವ ಭಕ್ತರೊಳಗೆಲ್ಲ - ಮೂರು ಕ
ಣ್ಣೇಶನೇ ದೈವ ಸರ್ವಜ್ಞ

೭೪. ಶೇಷನಿಂ ಬಲರಿಲ್ಲ | ಮೋಸದಿಂ ಕಳರೆಲ್ಲ
ನೇಸರೆಂ ಜಗಕೆ ಹಿತರಿಲ್ಲ - ದೇವ ತಾ
ಈಶನಿಂದಿಲ್ಲ ಸರ್ವಜ್ಞ

೭೫. ಸಂಗದಿಂ ಕೆಳೆಯಿಲ್ಲ | ಬಿಂಗದಿಂ ಹೊರೆಯಿಲ್ಲ
ಗಂಗೆಯಿಂದಧಿಕ ನದಿಯಿಲ್ಲ - ಪರದೈವ
ಲಿಂಗದಿಂದಿಲ್ಲ ಸರ್ವಜ್ಞ

೭೬. ಉಂಬಳಿ ಇದ್ದಂತೆ | ಕಂಬಳಿಯ ಹೊದೆವರೆ
ಶಂಭುವಿದ್ದಂತೆ ಮತ್ತೊಂದು - ದೈವವ
ನಂಬುವನೆಗ್ಗ ಸರ್ವಜ್ಞ

೭೭. ಎಂಜಲು ಶೌಚವು | ಸಂಜೆಯೆಂದೆನ ಬೇಡ
ಕುಂಜರ ವನವ ನೆನೆವಂತೆ - ಬಿಡದೆ ನಿ
ರಂಜನನ ನೆನೆಯ ಸರ್ವಜ್ಞ delete


೭೮. ಹರಭಕ್ತಿಹಲ್ಲದೆ | ಹರೆದು ಹೋಗದು ಪಾಪ
ಹರಭಕ್ತಿಯುಳ್ಳ ಗುರುವರ - ನೆನ್ನೆಯ
ಗುರು ದೇವರೆಂಬೆ ಸರ್ವಜ್ಞ
೭೯. ಸುರುತರುವು ಸುರಧೇನು | ಸುರಮಣೆ ಸೌರಲತೆ
ಪರುಷಷ್ಟತನುವು ಹರಿವ ನದಿ - ಯೆಲ್ಲವು
ಪರಮನಿಂ ಜನನ ಸರ್ವಜ್ಞ
೮೦. ಬಾಲ್ಯ - ಯೌವನ ಪ್ರೌಢ | ಲೋಲ ಹಲವಾದ ತನು
ಏಳುತ್ತ ಮಡುವುತಿರ ಬೇಡ - ಅನುದಿನವು
ಶೊಲಿಯ ನೆನೆಯ ಸರ್ವಜ್ಞ
೮೧. ಕುಲಗೆಟ್ಟವರ ಚಿಂತೆ | ಯೊಳಗಿರ್ಪರಂತೆಲ್ಲ
ಕುಲಗೆಟ್ಟು ಶಿವನ ಮರೆಹೊಕ್ಕೆ - ಋಷಿಗಳು
ಕುಲಗೋತ್ರರುಗಳು ಸರ್ವಜ್ಞ
೮೨. ಭೊತೇಶ ಶರಣೆಂಬ | ಜಾತಿ ಮಾದಿಗನಲ್ಲ
ಜಾತಿಯಲಿ ಹುಟ್ಟಿ ಭೊತೇಶ - ಶರಣೆನ್ನ
ದಾತ ಮಾದಿಗನು ಸರ್ವಜ್ಞ
೮೩. ಯಾತರ ಹೂವಾದರು | ನಾತರೆ ಸಾಲದೆ
ಜಾತಿ- ವಿಜಾತಿಯೆನಬೇಡ - ಶಿವನೊಲಿ
ದಾತನೇ ಜಾತಿ ಸರ್ವಜ್ಞ
೮೪. ಹರಭಕ್ತಿಯಿಲ್ಲದ | ಪರಮಋಷಿ ಮುಖ್ಯನೇ
ಹರಭಕ್ತಿಯುಳ್ಳ ಸ್ವಪಚನಾ - ದೊಡೆಯಾತ್
ಪರಮ ಋಷಿ ತಾನೆ ಸರ್ವಜ್ಞ
೮೫. ನಾಲ್ಕು ವೇದವನೋದಿ | ಶೀಲದಲಿ ಶುಚಿಯಾಗಿ
ಶೂಲಿಯ ಪದವ ಮರೆದೊಡೆ - ಗಿಳಿಯೋದಿ
ಹೇಲ ತಿಂದಂತೆ ಸರ್ವಜ್ಞ
೮೬. ಮಾಯಮೋಹವ ನಚ್ಚಿ | ಕಾಯವನು ಕರಗಿಸಿತೆ
ಆಯಾಸಗೊಳುತ ಇರಬೇಡ - ಓಂ ನಮಶ್ಯಿ
ವಾಯಯೆಂದನ್ನಿ ಸರ್ವಜ್ಞ
೮೭. ಸಾಯ್ವುದವಸರವೆ ಮನ | ಠಾಯಿಯಲಿ ನೋವುತ್ತೆ
ನಾಯಾಗಿ ನರಕ ಉಣಬೇಡ - ಓಂ ನಮಶ್ಯಿ
ವಾಯಯೇಂದನ್ನಿ ಸರ್ವಜ್ಞ
೮೮. ಅಕ್ಕರವೀ ಲೆಕ್ಕವು | ತರ್ಕಕ್ಕೆ ಗಣಿತಕ್ಕೆ
ಮಿಕ್ಕ ಓದುಗಳು ತಿರಿಕೆಗೆ - ಮೋಕ್ಷಕಾ
ರಕ್ಕರವೆ ಸಾಕು ಸರ್ವಜ್ಞ
೮೯. ಮುನಿವಂಗೆ ಮುನಿಯದಿರು | ಕನೆಯದಿರು
ಮನಸಿಜಾರಿಯನು ಮರೆಯದಿರು - ಶಿವನ ಕೃಪೆ
ಘ್ನಕೆ ಘನವಕ್ಕು ಸರ್ವಜ್ಞ
೯೦ .ಎಲ್ಲರನು ಬೇಡಿ | ಹಲ್ಲು ಬಾಯಾರುವು ದೆ
ಬಲ್ಲಂತೆ ಶಿವನ ಭಜಿಸಿದೊಡೆ - ಶಿವ ದಾನಿ
ಇಲ್ಲನ್ನಲರೆಯ ಸರ್ವಜ್ಞ
೯೧. ನರರ ಬೇಡುವ ದೈವ | ವರವೀಯ ಬಲ್ಲುದೇ
ತಿರಿವವರನಡರಿ ತಿರಿವಂತೆ - ಅದನರೆ
ಹರನನೆ ಬೇಡು ಸರ್ವಜ್ಞ
೯೨. ಇಂದ್ರನಾನೆಯನೇರೆ | ಒಂದುವನು ಕೊಡಲರೆಯ
ಚಂದ್ರಶೇಖರನು ಮುದಿಯೆತ್ತ - ನೇರೆ ಬೇ
ಕೆಂದುದನು ಕೊಡುವ ಸರ್ವಜ್ಞ
೯೩. ಲಿಂಗವ ಪೂಝಿಸುವಾತ | ಜಂಗಮಕೆ ನೀಡದೊಡೆ
ಲಿಂಗದ ಕ್ಷೋಭ ಘನವಕ್ಕು - ಮಹಲಿಂಗ
ಹಿಂಗುವುದು ಅವನ ಸರ್ವಜ್ಞ
೯೪. ಉಣ ಬಂದ ಲಿಂಗಕ್ಕೆ | ಉಣಲ್ಲಿಕ್ಕದಂತರಿಸಿ
ಉಣದಿರ್ಪ ಲಿಂಗಕ್ಕುಣ ಬಡಿಸಿ - ಕೈಮುಗಿವ
ಬಣಗುಗಳ ನೋಡ ಸರ್ವಜ್ಞ

೯೫. ದೇಹಿಯೆನಬೇಡ ನಿ | ದೇಹಿ ಜಂಗಮ ದೇವ
ದೇಹಗುಣದಾಶೆಯಳಿದರೆ - ಆತ ನಿ
ದೇಹಿ ಕಂಡಯ್ಯ ಸರ್ವಜ್ಞ

೯೬. ಸಾರವನು ಬಯಸುವೊಡೆ | ಕ್ಷಾರವನು ಧರಿಸುವುದು
ಮಾರಸಂಹರನ ನೆನೆದರೆ - ಮೃತ್ಯು ತಾ
ದೊರಕ್ಕೆ ದೊರ ಸರ್ವಜ್ಞ

೨೦೦. ಸತ್ಯಕ್ಕೆ ಸರಿಯಿಲ್ಲ | ಚಿತ್ತಕ್ಕೆ ಸ್ಥಿರವಿಲ್ಲ | ಹಸ್ತದಿಂದಧಿಕಹಿತರಿಲ್ಲ ಪರದೈವ |ನಿತ್ಯನಿಂದಿಲ್ಲ ಸರ್ವಜ್ಞ ||

೨೦೧. ಶೇಷಿನಿಂ ಬಲರಿಲ್ಲ | ಮೋಸದಿಂ |

    ನೇಸರಿಂ ಜಗಕ ಹಿತರಿಲ್ಲ | ಪರದೈವ |
ಈಶನಿಂದಿಲ್ಲ ಸರ್ವಜ್ಞ ||

೨೦೨. ಭಾಷೆಯಿಂ ಮೇಲಿಲ್ಲ | ದಾಸನಿಂ ಕೀಳಿಲ್ಲಿ |

    ಮೋಸದಿಂದಧಿಕ ಕೇಡಿಲ್ಲ ಪರದೈವ |
ಈಶನಿಂದಿಲ್ಲ ಸರ್ವಜ್ಞ ||

೨೦೩. ಸಂಗದಿಂ ಕೆಳೆಯಿಲ್ಲಿ | ಭಂಗದಿಂ ವ್ಯಥೆಯಿಲ್ಲ |

    ಗಂಗೆಯಿಂದಧಕ ನದಿಯಲ್ಲಿ ಪರದೈವ |
ಲಿಂಗದಿಂದಿಲ್ಲ ಸರ್ವಜ್ಞ ||

೨೦೪. ನಿದ್ರೆಯಿಂ ಸುಖವಿಲ್ಲ | ಪದ್ರದಿಂ ಅರಿಯಿಲ್ಲ ಮುಖ

    ಮುದ್ರೆಯಿಂದಧಿಕ ಮಾತಿಲ್ಲ ದೈವವುಂ |
ರುದ್ರನಿಂದಿಲ್ಲ | ಸರ್ವಜ್ಞ ||

೨೦೫. ಮಾತೆಯಿಂ ಹಿತರಿಲ್ಲಿ | ಕೋತಿಯಿಂ ಮರಳಿಲ್ಲ |

    ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವ |
ಜಾತನಿಂದಿಲ್ಲ ಸರ್ವಜ್ಞ ||

೨೦೬. ಇದ್ದಲಿಂ ಕರಿಯಿಲ್ಲ | ಬುದ್ಢಿಯಿಂ ಹಿರಿದಿಲ್ಲ |

    ವಿದ್ಯದಿಂದಧಿಕ ಧನವಿಲ್ಲ ದೈವತಾ |
ರುದ್ರನಿಂದಿಲ್ಲ ಸರ್ವಜ್ಞ ||

೨೦೭. ಲೀಲೆಯಿಂ ಕಣ್ಣಿಲ್ಲ | ಗಾಲಿಯಿಂ ಬಟುವಿಲ್ಲ |

    ವಾಲಿಯಿಂದಧಿಕ ಬಲರಿಲ್ಲ ಪರದೈವ |
ಶೂಲಿಯಿಂದಿಲ್ಲ ಸರ್ವಜ್ಞ ||

೨೦೮. ನಿಂಬೆಗಿಂ ಹುಳಿಯಿಲ್ಲ | ತುಂಬೆಗಿಂ ಕರಿದಿಲ್ಲ |

    ನಂಬಿಗೆಯಿಂದಧಿಕ ಗುಣ್ವವಿಲ್ಲ | ದೈವವುಂ |
ಶುಭವಿಂದಿಲ್ಲ ಸರ್ವಜ್ಞ ||

೨೦೯. ನಾಲಿಗೆಗೆ ನುಣುಪಿಲ್ಲ | ಹಾಲಿಗಿಂ ಬಿಳಿಪಿಲ್ಲ |

    ಕಾಲನಿಂದಧಿಕ ಅರಿಯಿಲ್ಲ ದೈವವುಂ |
ಶೂಲಿಯಿಂದಿಲ್ಲ ಸರ್ವಜ್ಞ ||

೨೧೦. ಉಂಲಡಿಗೆ ಹಲಾವಾಗಿ | ಕಣಿಕ ತಾನೊಂದಯ್ಯ

    ಮಣಿಯಿಸಿವೆ ದೈವ ಘನವಾಗಿ,
ಜಗಕೆಲ್ಲಿ ತ್ರಿಣಯನೇ ದೈವ ಸರ್ವಜ್ಞ ||

೨೧೧. ಆಡಾದನಾ ಅಜನು | ಕೊಡಗನದಾದನು ಹರಿಯು

    ನೋಡಿದರೆ ಶಿವನು ನರಿಯಾದನೀ ಬೆಡಗೆ
ರೂಢಿಯೊಳು ಬಲ್ಲೆ ಸರ್ವಜ್ಞ ||

೨೧೨. ತೆರೆದ ಹಸ್ತವು ಲೇಸು | ಹರಿಯ ಪೂಜ್ಯವು ಲೇಸು |

    ಅರ ಸೊಲಿಮೇ ಲೇಸು ಸರ್ವಕ್ಕೂ ಶಿವನಿಗೆ |
ಶರಣನೇ ಲೇಸು ಸರ್ವಜ್ಞ ||

೨೧೩. ಖುಲ್ಲ ಮಾನವ ಬೇಡಿ | ಕಲ್ಲುತಾ ಕೊಡುವದೇ |

    ಸೊಲ್ಲರಿವ ಶಿವನ ಬೇಡಿದಡೆ ಬಯಸಿದುದು |
ನೆಲ್ಲವನು ಕೊಡುವ ಸರ್ವಜ್ಞ ||

೨೧೪. ನಿಲ್ಲದಲೆ ಹರಸಿದಡೆ | ಕಲ್ಲು ಭೇದಿಸಲಕ್ಕು |

    ಬಲ್ಲಂತ ಶಿವನ ಭಕ್ತಿಯಿಂ ಭಜಿಸಿಡೆ |
ಇಲ್ಲೆನಲಿಕರಿಯ ಸರ್ವಜ್ಞ ||

೨೧೫. ಭಕ್ತಿಯಿಂದಲೆ ಯುಕ್ತಿ | ಭಕ್ತಿಯಿಂದಲೆ ಶಕ್ತಿ |

    ಭಕ್ತಿವಿರಕ್ತಿಯಳಿವರೀ ಜಗದಲ್ಲಿ |
ಮುಕ್ತಿಯಿಲ್ಲೆಂದ ಸರ್ವಜ್ಞ ||

೨೧೬. ಆಗುಹೋಗುಗಳ ನೆರೆ | ರಾಗ ಭೋಗಗಳು |

    ಸ-ರಾಗವಾಗಿಕ್ಕು ಶಿವನೊಲಿದೊಡಲ್ಲದಿರೆ |
ಹೋಗಿಕ್ಕು ಕಾಣೊ ಸರ್ವಜ್ಞ ||

೨೧೭. ಮುದ್ದು ಮಂತ್ರವು, ಶುಕನು | ತಿದ್ದುವವು ಕುತ್ತಗಳ |

    ತಿದ್ದಿಯೂ ತಿದ್ದಲರಿಯವವು ಶಿವನೊಲಿಯ |
ದಿದ್ದಿಹರೆ ಕಾಣೊ ಸರ್ವಜ್ಞ ||

೨೧೮. ಕಂಡವರು ಕೆರಳುವರು | ಹೆಂಡತಿಯು ಕನಲುವಳು |

    ಖಂಡಿತದ ಲಕ್ಶ್ಮಿ ತೊಲಗುವಳು ಶಿವನೊಲುಮೆ |
ಕಂಡಕೊಳ್ದಿರಕು ಸರ್ವಜ್ಞ ||

೨೨೦. ಜ್ವರ ಬನ್ದ ಮನುಜಂಗೆ | ನೊರೆವಾಲು ವಿಷಕ್ಕು |

    ನರಕದಲಿ ಬೀಳ್ವ ಅಧಮಂಗ ಶಿವಭಕ್ತಿ |
ಹಿರಿದು ವಿಷಪಕ್ಕು ಸರ್ವಜ್ಞ ||

೨೨೧. ಹರನಾವ ಕರೆಯದಲೆ | ಪರಿಶಿವನ ನೆನೆಯದಲೆ |

    ಸ್ಮರಹರನ ಕರುಣವಿಲ್ಲದೆಯೆ ಜಗದೊಳಗೆ 
ಇರುವದೇ ಕಷ್ಟ ಸರ್ವಜ್ಞ ||

೨೨೨. ಎಲ್ಲರೂ ಶಿವನೆಂದಿರಿಲ್ಲಿಯೇ ಹಾಳಕ್ಕು |

    ಎಲ್ಲರೂ ಶಿವನ ಮರೆದಿಹರೆ ಕೈಲಾಸ |
ದಲ್ಲಿ ಹಾಳಕ್ಕು ಸರ್ವಜ್ಞ ||

೨೨೩. ಆವ ಕಾಲವು ವನದಿ | ಜೀವಕಾಲದ ಕಳೆದು |

    ಜೀವಚಯದಲ್ಲಿ ದಯವಿಲ್ಲದಿರುವವನ |
ಕಾಯ್ವ ಶಿವನು ಸರ್ವಜ್ಞ ||

೨೨೪. ಅಡವಿಯಲಿ ತಪದಲ್ಲಿ | ದೃಢತನದೊಳಿದ್ದರೂ|

    ನುಡಿಯಲ್ಲಿ ಶಿವನ ಮರೆಯುವಡೆ ಗುಡವಿಲ್ಲ |
ದಡಗೆಯುಂಡಂತೆ ಸರ್ವಜ್ಞ ||

೨೨೫. ಕಡುಭಕ್ತನಾಗಲೀ | ಜಡೆಧಾರಿಯಾಗಲೀ |

    ನದೆವ ವೃತ್ತಿಯಲಿ ನದೆಯದೊಡೆ ಆ ಭಕ್ತಿ |
ಹೊದೆವ ಶಂಖೆಂದ ಸರ್ವಜ್ಞ ||

೨೨೬. ಗುರಿಯ ತಾಗದ ಕೋಲ | ನೂರಾರುನೆಸೆದೇನು ? |

    ಬರಡಿಂಗ ಭಕ್ತಿ ಭಜಸಿದೊಡೆ ಅದು ತಾನು |
ಇರಲರಿಯದಯ್ಯ ಸರ್ವಜ್ಞ ||

೨೨೭. ಚಿತ್ತವಿಲ್ಲದ ಗುಡಿಯ | ಸುತ್ತಿದೊಡೆ ಫಲವೇನು ? |

    ಎತ್ತು ಗಾಣವನು ಹೊತ್ತು ತಾ ನಿತ್ಯದಲಿ |
ಸುತ್ತಿಬಂದಂತೆ ಸರ್ವಜ್ಞ ||

೨೨೮. ಮನದಲ್ಲಿ ನೆನೆವಂಗೆ | ಮನೆಯೇನು ಮಠವೇನು |

    ಮನದಲ್ಲಿ ನೆನೆಯದಿರುವವನು |
ದೇಗುಲದ ಕೊನೆಯಲ್ಲಿದ್ದೇನು ? | ಸರ್ವಜ್ಞ ||

೨೨೯. ಮನೆಯೇನು ವನವೇನು | ನೆನಹು ಇದ್ದರೆ ಸಾಕು |

    ಮನಮುಟ್ಟಿ ಶಿವನ ನೆನೆಯದವನು ಬೆಟ್ಟದಾ |
ಕೊನೆಯಿಲ್ಲಿದ್ದೇನು ಸರ್ವಜ್ಞ ||

೨೩೦. ಮನದಲ್ಲಿ ನೆನವಿಠಲಿ | ತನುವೊಂದು ಮಠವಕ್ಕು |

    ಮನಹೋಗಿ ಹಲವ ನೆನೆದಿಹರೆ ಅದು ಹಾಳು |
ಮನೆಯೆಂದು ತಿಳಿಯೋ ಸರ್ವಜ್ಞ ||

೨೩೧. ದೇಹ ದೇವಾಲಯವು | ಜೀವವೇ ಶಿವಲಿಂಗ |

    ಬಾಹ್ಯಾಂಗಳಳಿದು ಭಜಿಪಂಗೆ ಮುಕ್ತಿಸಂ
ದೇಹವಿಲ್ಲೆಂದು ಸರ್ವಜ್ಞ ||

೨೩೨. ಜಂಗಮಕೆ ವಂಚಿಸನು | ಹಿಂಗಿರಲು ಲಿಂಗವನು |

    ಭಕ್ತರೊಳು ಪರಸತಿಗೆ ಒಲೆಯದಗೆ |
ಭಂಗವೇ ಇಲ್ಲ ಸರ್ವಜ್ಞ ||

೨೩೩. ಇಂದುವಿನೊಳುರಿಯುಂಟೆ | ಸಿಂಧುವಿನೊಳರಬುಂಟೆ |

    ಸಂದವೀರನೊಳು ಭಯವುಂಟೇ ? ಭಕ್ತಂಗೆ |
ಸಂದೇಹವುಂಟೆ ಸರ್ವಜ್ಞ ||

೨೩೪. ಆಹಾರವುಳ್ಳಲ್ಲಿ ಬೇಹಾರ ಫನವಕ್ಕು |

    ಆಹಾರದೊಳಗ ನರಿಧಿಪ್ಪ ಸೆಟ್ಟಿಗೇ |
ಬೇಹಾರದಕ್ಕು ಸರ್ವಜ್ಞ ||

೨೩೫. ಜಂಗಮನು ಭಕ್ತತಾ | ಲಿಂಗದಂತಿರಬೇಕು |

    ಭಂಸುತ ಪರರ ನಳಿವ ಜಂಗಮನೊಂದು |
ಮಂಗನೆಂದರಿಗು ಸರ್ವಜ್ಞ ||

೨೩೬. ಸಾಲುವೇದವನೋದಿ | ಶೀಲದಲಿ ಶುಚಿಯಾಗಿ |

    ಶೂಲಿಯಾವದವನರಿಯದೊಡೆ ಗಿಳಿಯೋದಿ |
ಹೇಲ ತಿಂದಂತೆ ಸರ್ವಜ್ಞ ||

೨೩೭. ಈಶ ಭಕ್ತನು ಆಗಿ | ವೇಶಿಯನು ತಾ ಹೋಗೆ |

      ಸಲಾಗಿರ್ದ ಭೋನವನು ಹಂದಿ ತಾ 
ಮೂಸಿ ಹೋದಂತೆ ಸರ್ವಜ್ಞ ||

೨೩೮. ಹಲವು ಸಂಗದ ತಾಯಿ | ಹೊಲಸು ನಾರುವ ಬಾಯಿ |

    ಸಲೆ ಸ್ಮರಹರನ ನೆನೆಯದಾ ಬಾಯಿ ನಾಯ್ |
ಮಲವ ಮೆದ್ದಂತೆ ಸರ್ವಜ್ಞ ||

೨೩೯. ಭಕ್ತರೊಡಗೂಡುವದು | ಭಕ್ತರೊಡನಾಡುವದು |

    ಭಕ್ತಿಯೊಳು ಬಿಡುವ ಬೆರೆದಿರ್ದ ಭಕ್ತತಾ |
ಮುಕ್ತನಾಗಿಹನು ಸರ್ವಜ್ಞ ||

೨೪೦. ಪರುಷ ಕಬ್ಬುನದೆಸೆವ | ಕರಡಿಗೆಯೊಳಡರುವದೆ |

    ಹರ ಭಕ್ತಿಯಿಳ್ಳ ಮಹಿಮೆ ಸಂಸಾರದೊಳು |
ಎರಕವಾಗಿಹನೆ ಸರ್ವಜ್ಞ ||

೨೪೧. ತೆಪ್ಪವನ್ನು ನಂಬಿದಡೆ | ತಪ್ಪದಲೆ ತಡಗಹದು |

    ಸರ್ಪಭೂಷಣನ ನಂಬಿದಡೆ ಭವಪಾಶ |
ತಪ್ಪಿ ಹೋಗುವುದು ಸರ್ವಜ್ಞ ||

೨೪೨. ಶಿವಭಕ್ತಿಯುಳ್ಳಾತ | ಭವಮುಕ್ತನಾದಾತ |

    ಶಿವಭಕ್ತಿಯಿರದ ಭಕ್ತಿಂಗೆ ಎಂದೆಂದು |
ಭವಮುಕ್ತಿಯಿಲ್ಲ ಸರ್ವಜ್ಞ ||

೨೪೩. ಲಿಂಗದಾ ಗುಡಿ ಲೇಸು | ಗಂಗೆಯಾ ತಡಿ ಲೇಸು |

    ಲಿಂಗ ಸಂಗಿಗಳ ನುಡಿ ಲೇಸು ಭಕ್ತರಾ |
ಸಂಗವೇ ಲೇಸು ಸರ್ವಜ್ಞ ||

೨೪೪. ನೋಟ ಶಿವಲಿಂಗದಹಲಿ | ಜೂಟ ಜ್ಂಗಮದಲಿ |

    ನಾಟನಾ ಮನವು ಗುರುವಿನಲಿ,
ಭಕ್ತನಾ ಮಾಟವನು ನೋಡು ಸರ್ವಜ್ಞ ||

೨೪೫. ಲಜ್ಜೆಯನು ತೊರೆದು ನೀ | ಹೆಜ್ಜೆಯನು ಸಾಧಿಪಡೆ |

    ಸಜ್ಜೆಯಲಿ ಶಿವನ ಶರಣರಾ -
ಹೆಜ್ಜೆಯಲಿ ನಡೆಯೋ ಸರ್ವಜ್ಞ ||

೨೪೬. ದೇವರನು ನೆನೆವಂಗ | ಭಾವಿಪುದ ಬಂದಿಹುದು |

    ದೇವರನು ನೆನಯದಧಮಂಗೆ ಇಹಪರದಿ |
ಆಪುದೂ ಇಲ್ಲ ಸರ್ವಜ್ಞ ||

೨೪೭. ನಿತ್ಯವೂ ಶಿವನ ತಾ | ಹೊತ್ತಾರೆ ನೆನೆದಿಹರೆ |

    ಉತ್ತಮದ ಗತಿಯು ಆದಿಲ್ಲದಿಹಪರದಿ |
ಮೃತ್ಯುಕಾಣಯ್ಯ ಸರ್ವಜ್ಞ ||

೨೪೮. ಎರೆಯನ್ನು ಉಳುವಂಗೆ | ದೊರೆಯನ್ನು ಪಿಡಿದಂಗೆ |

    ಉರಗ ಭೂಷಣನ ನೆನೆವಂಗೆ ಭಾಗ್ಯವು |
ಅರಿದಲ್ಲವೆಂದು ಸರ್ವಜ್ಞ ||

೨೪೯. ಹಾಸಾಂಗಿ ಹರೆಯುವಡೆ |

    ದಾಸಿಯರು ದೊರೆಯುವಡೆ ವೀಸಕ್ಕೆ ವೀಸ ಕೊಡುವಡೆ ಅದು ತನಗೆ |
ಈಶನ ಒಲುಮೆ ಸರ್ವಜ್ಞ ||

೨೫೦. ಇಪ್ಪೊತ್ತು ದೇವರನು | ತಪ್ಪದಲೆ ನೆನದಿಹರೆ |

    ತುಪ್ಪ ಒರಗವು ಉಣಲುಂಟು ತನಗೊಬ್ಬ |
ಳಪ್ಪುವಳುಂಟು ಸರ್ವಜ್ಞ ||

೨೫೧. ಕೊಡಲೊಬ್ಬಳು ಸತಿಯು | ನೋಡಲೊಬ್ಬ ನೆಂಟ |

    ಬೇಡಿದ್ದನ್ನು ಕೊಡುವ ನೃಪತಿಯು ಭಕ್ತಿಯನು |
ಮಾಡಿದರಿಗುಂಟು ಸರ್ವಜ್ಞ ||

೨೫೨. ಬಸವನೆಂದರೆ ಪಾಪ ದೆಸೆಗೆಟ್ಟು ಹೋಗುವದು |

    ಬೆಸಿ ಲಿಂಗ ಹಸುರೆಳಸದಿರ್ಪ ಹನಿಯಾರಿ 
ಹಸಿದು ಹೋದಂತೆ ಸರವಜ್ಞ ||

೨೫೩. ಸಾರವನು ಬಯಸುವದೇ | ಕ್ಷಾರವನು ಬೆರಸುವದು |

    ಮಾರಸಂಹರನ ನೆನೆಯುವಡೆ ಮೃತ್ಯು ತಾ |
ದೂರಕ್ಕೆ ದೂರ ಸರ್ವಜ್ಞ ||

೨೫೪. ಕೋಳಿಕೂಗದಮುನ್ನ | ಏಳುವದು ನಿತ್ಯದಲಿ |

    ಬಾಳ ಲೋಚನನ ಭಕ್ತಿಯಿಂ ನೆನೆದರೆ |
ಸರ್ವಜ್ಞ ||

೨೫೫. ಎಂಬಲವು ಸೌಚವು | ಸಂಜೆಯೆಂದೆನಬೇಡ |

    ಕುಂಜರವು ವನವ ನೆನೆವಂತೆ ಬಿಡದೆ ನಿ |
ರಂಜನನ ನೆನೆಯೋ ಸರ್ವಜ್ಞ ||

೨೫೬. ಬಾಲ್ಯಯೌವನದೊಳಗೆ | ಲೋಲುಪ್ತನಾಗಿ ನೀ |

    ನೇಳುತುಲಿ ಮದಿಸುತ್ತಿರಬೇಡ ಅನುದಿನವು |
ಸೂಲಿಯನು ನೆನೆಯೋ ಸರ್ವಜ್ಞ ||

೨೫೭. ಮಾಯಾಮೋಹನ ಮೆಚ್ಚಿ | ಕಾಯವನು ಕರಗಿಸಿತ |

    ಆಯಾಸಗೊಂಡ ಬಳಲದೊನ್ನಮಃ ಶಿ |
ವಾಯವೆಂದೆನ್ನು ಸರ್ವಜ್ಞ ||

೨೫೮. ಕಣ್ಣು ನಾಲಿಗೆ ಮನವ | ಪನ್ನಗಧರ ಕೊಟ್ಟ |

    ಚಿನ್ನಾಗಿ ಮನವ | ತೆರೆದ ನೀ ಬಿಡದೆ ಶ್ರೀ |
ಚಿನ್ನನಂ ನೆನಯೋ ಸರ್ವಜ್ಞ ||

೨೫೯. ಸತಿಯರಿರ್ದಡೇನು ? ಸುತರಾಗಿ ಫಲವೇನು ? |

    ಶತಕೋಟಿಧನವ ಗಳಿಸೇನು ? ಭಕ್ತಿಯಾ |
ಸ್ಥಿತಿಯಿಲದನಕ ಸರ್ವಜ್ಞ ||

೨೬೦. ಎಲ್ಲರೂ ಶಿವನೆಂದ | ರೆಲ್ಲಿಹುದು ಭಯವಯ್ಯಾ |

    ಎಲ್ಲರೂ ಶಿವನ ನೆನೆಯುವಡೆ ಕೈಲಾಸ |
ಎಲ್ಲಿಯೇ ಇಹುದು ಸರ್ವಜ್ಞ ||

೨೬೧. ಭಕ್ತಗೆರಡಕ್ಕರವು | ಮುಕ್ತಿಗೆರಡಕ್ಕರವು |

    ಭಕ್ತಿಯಿಂ ಮುಕ್ತಿ ಪಡೆಯುವರೆ ಬಿಡದೆ ಆ |
ರಕ್ಕರವ ಪೇಳಿ ಸರ್ವಜ್ಞ ||

೨೬೨. ಐವರಟ್ಟಾಸವನ | ಯೌವನದ ಹಿಂಡನ್ನು |

    ಹೊಯ್ಯುತ್ತ ವಶಕ್ಕೆ ತಂದಾತ ಜಗದೊಳಗೆ |
ದೈವ ತಾನಕ್ಕು ಸರ್ವಜ್ಞ ||

೨೬೩. ಆರರಟ್ಟುಗಳಿಗಳನು | ಮೂರು ಕಂಟಕರನ್ನು |

    ಏರು ಜವ್ವನವ ತಡೆಯುವರೆ ಶಿವ ತಾನು |
ಬೇರೆ ಇಲ್ಲೆಂದ ಸರ್ವಜ್ಞ ||

೨೬೪. ವಿಷಯದಾ ಬೇರನ್ನು | ಬಿಸಿಮಾಡಿ ಕುಡಿದಾತ ಪಶು

    ಪತಿಯು ಅಕ್ಕ ಶಶಿಯಕ್ಕು ಮೈಯ್ಬಣ್ಣ
ಮಿಸಿನಿಯಂತಕ್ಕು ಸರ್ವಜ್ಞ ||

೨೬೫. ಕಚ್ಚಿ, ಕೈಬಾಯಿಗಳು | ಇಚ್ಛೆಯಲಿ ಇದ್ದಿಹರೆ |

    ಅಚ್ಯುತನಪ್ಪ ಅಜನಪ್ಪ ಲೋಕದಲಿ
ನಿಶ್ಚಿಂತನಪ್ಪ ಸರ್ವಜ್ಞ ||

೨೬೬. ಹರಿವ ಹಕ್ಕಿ ನುಂಗಿ | ನೊರೆವಾಲ ಕುಡಿದಾತ |

    ಹರಿಹರನು ಅಕ್ಕು ಅಜನಕ್ಕು ಲೋಕಕ್ಕೆ |
ಇರುವು ತಾನಕ್ಕು ಸರ್ವಜ್ಞ ||

೨೬೭. ರುದ್ರಾಕ್ಷಿಯ ಮಾಲೆಯ |

    ಭದ್ರದಲಿ ಧರಿಸಿದಗೆ ಹೊದ್ದಿರ್‍ದ ಪಾಪ ಹೋಗಲವ ಸಾಕ್ಷಾತ |
ಮಾಲೆಯ ರುದ್ರನೇ ಸರ್ವಜ್ಞ ||

೨೬೮. ಅಣುರೇಣುವೃಂದ್ಯದಾ | ಪ್ರಣವದಾ ಬೀಜವನು |

    ಅಣುವಿನೊಳಗುಣವೆಂದರಿದಾ ಮಹಾತ್ಮನು |
ತ್ರಿಣಯನೇ ಅಕ್ಕು ಸರ್ವಜ್ಞ ||

೨೬೯. ಆಸನವು ದೃಢವಾಗಿ | ನಾಶಿಕಾಗ್ರದಿ ದಿಟ್ಟು |

    ಸೂಸವ ಮನವ ಫನದಲಿರಿಸಿದನು ಜಗ |
ದೀಶ ತಾನಕ್ಕು ಸರ್ವಜ್ಞ ||

೨೭೦. ಪವನಪರಿಯರಿದಂಗೆ | ಶಿವನ ಸಾಧಿಸಲಕ್ಕು |

    ಭವಮಾಲೆ ಹರಿದು ಸುಖಿಸುವೊಡೆ ಅವ 
ಸದಾಶಿವನು ತಾನಕ್ಕು ಸರ್ವಜ್ಞ ||

೨೭೧. ಮೆಟ್ಟಿಪ್ಪುದಾಶೆಯನು | ಕಟ್ಟಿಪ್ಪುದಿಂದ್ರಿಯವ |

    ತೊಟ್ಟಿಪ್ಪುದುಳ್ಳ ಸಮತೆಯವನು,
ಶಿವಪದವು ಮುಟ್ಟಿಪ್ಪುದಯ್ಯ ಸರವಜ್ಞ ||

೨೭೨. ಜ್ಞಾನದಿಂ ಮೇಲಿಲ್ಲ | ಶ್ವಾನನಿಂ ಕೀಳಿಲ್ಲ |

    ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ |
ಜ್ಞಾನವೇ ಮೇಲು ಸರ್ವಜ್ಞ ||

೨೭೩. ಜ್ಞಾದಿಂದಲಿ ಇಹವು | ಜ್ಞಾನದಿಂದಲಿ ಪರವು |

    ಜ್ಞಾನವಿಲ್ಲದಲೆ ಸಕಲವೂ ತನಗಿದ್ದು |
ಹಾನಿ ಕಾಣಯ್ಯ ಸರ್ವಜ್ಞ ||

೨೭೪. ಅರಿವಿನಾ ಅರಿವು ತಾ | ಧರಯೊಳಗೆ ಮೆರೆದಿಹುದು |

    ಅರಿವಿನಾ ಅರಿವಹರಿವಹರಿಹರರು ಬೊಮ್ಮನೂ |
ಅರಿಯರೈ ಸರ್ವಜ್ಞಾ ||

೨೭೫. ಎತ್ತ ಹೋದರೂ ಮನವ | ಹತ್ತಿಕೊಂಡೇ ಬಹುದು |

    ಮತ್ತೊಬ್ಬ ಸೆಳೆದುಕೊಳಲರಿಯದಾ |
ಜ್ಞಾನದಾ | ಬಿತ್ತು ಲೇಸೆಂದು ಸರ್ವಜ್ಞ ||

೨೭೬. ತತ್ವದಾ ಜ್ಞಾನತಾ | ನುತ್ತಮವು ಎನಬೇಕು |

    ಮತ್ತೆ ಶಿವಧ್ಯಾನ ಬೆರೆದರದು |
ಶಿವಗಿರಿಂ | ದತ್ತಲೆನಬೇಕು ಸರ್ವಜ್ಞ ||

೨೭೭. ನಾಟ ರಾಗವು ಲೇಸು | ತೋಟ ಮಲ್ಲಿಗೆ ಲೇಸು |

    ಕೂಟವದು ಲೇಸು ಹಿರಿಯರೊಳು ಶಿವನ ಅರಿ |
ದಾಟವೇ ಲೇಸು ಸರ್ವಜ್ಞ ||

೨೭೮. ಒಂದರಾ ಮೊದಲೊಳಗೆ ಬಂದಿಹುದು ಜಗವೆಲ್ಲ |

    ಒಂದರಾ ಮೊದಲನರಿಯುವಡೆ ಜಗ ಕಣ್ಣು |
ಮುಂದೆ ಬಂದಿಹುದು ಸರ್ವಜ್ಞ ||

೨೭೯. ವನಧಿಯೊಳಡಗಿ ತೆರೆ | ವನಧಿಯೊಳಗೆಸೆವಂತೆ |

    ಚಿನುಮಯನು ಇಪ್ಪ ನಿಜದೋಳಗೆ ತ್ರೈಜಗತ |
ಜನನ ತಾನೆಂದು ಸರ್ವಜ್ಞ ||

೨೮೦. ಕನಕ ತಾ ಕಂಕಣದ | ಜನಕನೆಂದೆನಿಸಿಹುದು |

    ಕ್ಷಣಿಕವದು ರೂಪವೆಂದರಿಯದಾ ಮನಜ |
ಶುನಕನಲೆದಂತೆ | ಸರ್ವಜ್ಞ ||

೨೮೧. ಭಿತ್ತಯಾ ಚಿತ್ರದಲಿ | ತತ್ವತಾ ನೆರೆದಿಹುದೆ |

    ಚಿತ್ರತ್ವ ತನ್ನ ನಿಜದೊಳಗ ತ್ರೈಜಾಗದ |
ತತ್ವ ತಾನೆಂದ ಸರ್ವಜ್ಞ ||

೨೮೨. ಓಂಕಾರ ಮುಖವಲ್ಲ | ಆಕಾರವದಕಿಲ್ಲ |

    ಆಕಾಶದಂತೆ ಅಡಗಿಹುದು ಪರಬೊಮ್ಮ |
ವೇಕಾಣದಯ್ಯ ಸರ್ವಜ್ಞ ||

೨೮೩. ಕ್ಷೀರದಲಿ ಘ್ರತ, ವಿಮಲ | ನೀರಿನೊಳು ಶಿಖಿಯಿರ್ದು

    ಅರಿಗೂ ತೋರದಿರದಂತೆ ಎನ್ನೊಳಗೆ |
ಸೇರಿಹನು ಶಿವನು ಸರ್ವಜ್ಞ ||

೨೮೪. ಕಲ್ಲಿನಲಿ ಮಣ್ಣಿನಲಿ | ಮುಳ್ಳಿನಾ ಮೊನಯಲಿ

    ಎಲ್ಲ ನೆನೆದಲ್ಲಿ ಶಿವನಿರ್ಪ ಅವನೀ |
ನಿದ್ದಲ್ಲಿಯೇ ಇರ್ಪ ಸರ್ವಜ್ಞ ||

೨೮೫. ಕಲ್ಲು-ಕಾಷ್ಠದೊಳಿರುವ | ಮುಳ್ಳು ಮೊನೆಯಲ್ಲಿರುವ |

    ಸುಳ್ಳು-ಈ ಮಾತು ಎನಬೇಡ ಪರಮಾತ್ಮ |
ನೆಲ್ಲೆಲ್ಲಿಯೂ ಇರುವ ಸರ್ವಜ್ಞ ||

೨೮೬. ತಿಟ್ಟಿಯೊಳು ತೆವರದೊಳು | ಹುಟ್ಟಿಹನೆ ಪರಶಿವನು |

    ಹುಟ್ಟು ಸಾವುಗಳು ಅವಗಿಲ್ಲ ಜಗವನ್ನು |
ಬಿಟ್ಟಿಹನು ನೋಡು ಸರ್ವಜ್ಞ ||

೨೮೭. ಸರ್ವಾಂತರ್ಯಾಮಿ | ಓರ್ವನೆಂಬುವ ತತ್ವ |

    ನಿರ್ದಿಷ್ಟವಾಗಿ ಇರುತಿರಲು ಮೋಕ್ಷವದು |
ಸರ್ವರಿಗೆ ಸುಲಭ ಸರ್ವಜ್ಞ ||

೨೮೮. ಸಣ್ಣನೆಯ ಮಳಲೊಳಗೆ | ನುಣ್ಣನೆಯ ಶಿಲೆಯೊಳಗೆ

    ಬಣ್ಣಿಸುತ ಬರೆದ ಪಟದೊಳಗೆ ಇರುವಾತ |
ತನ್ನೂಳಗೆ ಇರುನೇ ? ಸರ್ವಜ್ಞ ||

೨೮೯. ಆನೆ ಕನ್ನಡಿಯಲ್ಲಿ | ತಾನಡಗಿ ಇಪ್ಪಂತೆ |

    ಜ್ಞಾನವುಳ್ಳವರ ಹೃದಯದಲಿ ಪರಶಿವನು |
ತಾನಡಗಿ ಇಹನು ಸರ್ವಜ್ಞ ||

೨೯೦. ನಾನು ನೀನು ಭೇದಗ | ಳೇನು ಬೊಮ್ಮಗೆ ಇಲ್ಲ |

    ತಾನೆ ತಾನಾಗಿ ಇಪ್ಪುದೇ ಬೊಮ್ಮದಾ |
ಸ್ಥಾನವೆಂದರಿಗು ಸರ್ವಜ್ಞ ||

೨೯೧. ನಾನು ನೀನು ಭೇದಗ | ಳೇನು ಬೊಮ್ಮಗೆ ಇಲ್ಲ |

    ತಾನೆ ತಾನಾಗಿಪ್ಪುದೆ ಬೊಮ್ಮದಾ |
ಸ್ಥಾನವೆಂದರಿಗು ಸರ್ವಜ್ಞ ||

೨೯೨. ಮೂರು ಖಂಡುಗ ಹೊಟ್ಟ | ತೂರಿದರೆ ಫಲವೇನು |

    ಮೂರರಾ ಮಂತ್ರದಿಂದಲಿ ಪರಬೊಮ್ಮ |
ವಿರಿಹುದು ನೋಡು ಸರ್ವಜ್ಞ ||

೨೯೩. ಕಾಣಿಸಿರುವಂತವನ | ಕಾಣದೇಕಿರುವಿರೋ |

    ಕಾಣಲು ಬಿಡಲು ಕರ್ಮಗಳು ನಿನ್ನಿರವ |
ಆಣೆ ಇಟ್ಟಿಹವು ಸರ್ವಜ್ಞ ||

೨೯೪. ಜೊಳ್ಳು ಮನುಜರು ತಾವು | ಸುಳ್ಳು ಸಂಸಾರದೊಳು

    ಮಳ್ಳಿಡಿದು ಮಾಯೆಯೆಂಬವಳ ಬಲೆಯೊಳಗೆ |
ಹೊರಳಾಡುತಿಹರು ಸರ್ವಜ್ಞ ||

೨೯೫. ಇಲ್ಲದಾ ಮಾಯೆಯದು | ಎಲ್ಲಿಂದಲೆನಹದಲೆ |

    ಬಲ್ಲಿತದು ಮಾಯೆಯೆನಬೇಡ |
ತಿಳಿಯಲ್ಕೆ ಎಲ್ಲಿಹುದು ? ಮಾಯೆ ಸರ್ವಜ್ಞ ||

೨೯೬. ಕಾಯವಿಂದ್ರಯದಿಂದ | ಜೀವವಾಯುವಿನಿಂದ |

    ಮಾಯೆಯದು ಬೊಮ್ಮನಿಂದೆಂಬುವಾ ನಾಯ |
ಬಾಯಿ ನೋಡೆಂದ ಸರ್ವಜ್ಞ ||

೨೯೭. ಇಲ್ಲದನು ಇಲ್ಲೆನಲಿ | ಕಿಲ್ಲಿಯೇ ಕಲಿಯದಲೆ |

    ಇಲ್ಲದಾ ಮಾಯಿ-ಊಂಟೆಂಬ ಮೂಢಾತ್ಮ |
ಗೆಲ್ಲಿಯದು ಮುಕ್ತಿ ಸರ್ವಜ್ಞ ||

೨೯೮. ಪಂಚ ಬೂತಂಗಳೊಳ | ಸಂಚನರಿಯದಲೆ |

    ಹಂಚನೆ ಹಿಡಿದು ತಿರಿದುಂಬ ಶಿವಯೋಗಿ |
ಹಂಚುಹರಿಯಹನು ಸರ್ವಜ್ಞ ||

೨೯೯. ಪಂಚವಿಂಶತಿ ತತ್ವ | ಸಂಚಯದ ದೇಹವನು |

    ಹಂಚಿಂದು ಕಾಣಲರಿಯದಿರೆ ಭವ ಮುಂದೆ |
ಗೊಂಚಲಾಗಿಹದು ಸರ್ವಜ್ಞ ||

೩೦೦. ಬೆಂದ ಆವಿಗೆ ಭಾಂಡ | ಒಂದೊಂದು ಭೋಗವನು |

    ಅಂದದಿಂ ಉಂಡ ಒಡೆದು ಹಂಚಾದಂತೆ |
ಬಿಂದುವನು ದೇಹ ಸರ್ವಜ್ಞ ||

೪೦೧. ಎಣ್ಣೆಯ ಋಣವು | ಅನ್ನ- ವಸ್ತ್ರದ ಋಣವು |

    ಹೊನ್ನು ಹೆಣ್ಣಿನಾ ಋಣವು ತೀರಿದ ಕ್ಷಣದಿ |
ಮಣ್ಣು ಪಾಲೆಂದು ಸರ್ವಜ್ನ್ಯ ||

೪೦೨. ಸತ್ತು ಹೋದರ್‍ಎ ನಿನಗೆ | ಎತ್ತಣವು ಮೋಕ್ಷವೈ ?

    ಸತ್ತು ಹೋಗದರೆ ಜೀವಿಸಲು ಮೋಕ್ಷದಾ |
ಗೊತ್ತು ತಿಳಿಯೆಂದ ಸರ್ವಜ್ನ್ಯ ||

೪೦೩. ಕತ್ತಲೆಯ ಠಾವಿಂಗೆ | ಉತ್ತಮವು ಜ್ಯೋತಿ ತಾ|

    ಮತ್ತೆ ಪ್ರಜ್ವಲಿಸುವ ಠಾವು ಬೆಳಗಲು |
ತ್ಯುತ್ತಮವಕ್ಕುದು ಸರ್ವಜ್ನ್ಯ ||

೪೦೪. ಯೋನಿಜರು ಯೋಗಿಯನು | ಹೀನವೆನ್ನುವದೇನು ? |

    ಅನಂದ ತಾಣದೊಳಗಿರಲು ಯೋಗಿಯಾ  |
ಮಾನ ಘನವಹುದು ಸರ್ವಜ್ನ್ಯ ||

೪೦೫. ನಿಜ ವಿಜಯ ಬಿಂದುವಿನ | ಧ್ವಜಪತಾಕೆಯ ಬಿರುದು |

    ಅಜ ಹರಿಯು ನುತಿಸಲರಿಯರಾ ಮಂತ್ರವನು |
ನಿಜಯೋಗಿ ಬಲ್ಲ ಸರ್ವಜ್ನ್ಯ ||

೪೦೬. ಯೋಗವನು ಮನಮುಟ್ಟಿ | ಭೋಗವನು ತೊರೆದಿಹರೆ |

    ಮಾಗಿಯ ಮಳೆಯು ಸುರಿದಂತೆ ಆ ಯೋಗ |
ಸಾಗುತ್ತಲಿಹುದು ಸರ್ವಜ್ನ್ಯ ||

೪೦೭. ದಾಸಿಯಾ ಕೊಡದಂತೆ | ಸೋರದಿಪ್ಪುದೆ ಯೋಗ |

    ದಾಸಿ ಸಾಸಿರದ ಒಡನಾಡುತಾ ಕೊಡದೊ |
ಳಾಶೆ ಇಪ್ಪಂತೆ ಸರ್ವಜ್ನ್ಯ ||

೪೦೮. ಅಷ್ಟದಳಕಮಲದಲಿ | ಕಟ್ಟಿತಿರುಗುವ ಹಂಸ |

    ಮೆಟ್ಟುವಾ ದಳವ ನಡುವಿರಲಿ ಇರುವದನು |
ಮುಟ್ಟುವನೆ ಯೋಗಿ ಸರ್ವಜ್ನ್ಯ ||

೪೦೯. ಅಷ್ಟದಲ ಕಮಲವನು | ಮೆಟ್ಟಿಪ್ಪ ಹಂಸ ತಾ |

    ಮುಟ್ಟಿಪ್ಪ ಗತಿಯನರಿಯದಾ ಯೋಗಿ ತಾ |
ಕೆಟ್ಟನೆಂದರಿಗು ಸರ್ವಜ್ನ್ಯ ||

೪೧೦. ಗುರುವಿನಾ ಸೇವೆಯನು | ಹಿರಿದಾಗಿ ಮಾಡದಲೆ |

    ಹಿರಿಯ ತವರಹುದೆ ಸರ್ವಜ್ನ್ಯ ||

೪೧೧. ಹುಲಿಯ ಬಾಯಲ್ಲಿ ಸಿಕ್ಕ | ಹುಲ್ಲೆಯಂದದಿ ಮೊರವೆ |

    ಬಲಿಯ ಬಿಡಿಸೆನ್ನ ಗುರುರಾಯ ಮರೆಹೊಕ್ಕೆ |
ಕೊಲುತಿಹಳು ಮಾಯೆ ಸರ್ವಜ್ನ್ಯ ||

೪೧೨. ಮನವೆಂಬ ಮರ್ಕಟವು |
ತನುವೆಂಬ ಮರನೇರಿ ತಿನುತಿಹುದು ವಿಷಯ ಫಲಗಳನು |
ಕರುಣೆ ನೀ ತನುಮನ ಕಾಯೋ ಸರ್ವಜ್ನ್ಯ ||

೪೧೩. ಹೃದಯದಲ್ಲಿ ಕತ್ತರಿಯು | ತುದಿಯ ನಾಲಿಗೆ ಬೆಲ್ಲ !
ಕುದಿದು ಹೋಗುಹೆನು ಎನ್ನೊಡೆಯ ಇದ ನೋಡಿ |
ಒದೆದು ಬಿಡ ಬೇಡ ಸರ್ವಜ್ನ್ಯ ||

೪೧೪. ಸೊಣಗನಂದಣವೇರಿ | ಕುಣಿದು ಪೋಪುದು ಮಲಕೆ |
ಟೊಣೆಯದೆನ್ನೊಡೆಯ ಕಾಯನ್ನ ಪಾದಕ್ಕೆ |
ಮಣಿದು ಬೇಡುವೆನು ಸರ್ವಜ್ನ್ಯ ||

೪೧೫. ಪಾಪವೆನ್ನದು ಕಾಯ | ಪುಣ್ಯ ನಿನ್ನದು ರಾಯ |
ಕೂಪದೊಳು ಬಿದ್ದು ಕೊರಹುತಿಹೆ ಗುರುರಾಯ |
ರೂಪುಗೊಳಿಸಯ್ಯ ಸರ್ವಜ್ನ್ಯ ||

೪೧೬. ಕೋಪಕ್ಕ್ ಯಮರಜಬ್ | ಪಾಪಕ್ಕ್ ಜವರಾಜ |

    ಕೋಪ ಪಾಪಗಳ ಆಳಿದಂಗೆ ತಾ |
ಕೊಪನಾಗಿಹನು ಸರ್ವಜ್ನ್ಯ ||