ಸದಸ್ಯ:Sharanappa.m

ವಿಕಿಸೋರ್ಸ್ದಿಂದ

ನನ್ನ ಹೆಸರು ಶರಣಪ್ಪ.ಎಂ ನಾನು ಈಗ ಕ್ರೈಸ್ಟ್ ಯೂನಿವರ್ಸಿಟಿನಲ್ಲಿ ೨ನೇ ಬಿಕಾಂನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ನಾನು ಪ್ರಿಯದರ್ಶಿನಿ ಪಿಯು ಕಾಲೇಜಿನಿಂದ ಬಂದಿದ್ದೇನೆ. ನಾನು ೧ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿರೋದು, ಆದ್ದರಿಂದ ನನಗೆ ಈ ಯೂನಿವರ್ಸಿಟಿನಲ್ಲಿ ಓದುವುದಕ್ಕೆ ತುಂಬಾ ಕಷ್ಟ ಆಗುತ್ತಿದೆ. ಕಷ್ಟ ಆದರೂ ಕೂಡ ನಾನು ಕ್ರೈಸ್ಟ್ ಯೂನಿವರ್ಸಿಟಿನಲ್ಲಿ ಓದುತ್ತಿದ್ದೇನೆ ಕಾರಣ ಶಿಕ್ಷಕರು, ಏಕೆಂದರೆ ಕ್ರೈಸ್ಟ್ ಯೂನಿವರ್ಸಿಟಿನಲ್ಲಿ ಶಿಕ್ಷಕರು ನನಗೆ ತುಂಬಾ ಸಹಾಯ ಮಾಡುತ್ತಿದ್ದಾರೆ. ನನಗೆ ಕಾಮರ್ಸ್ ವಿಭಾಗದ "ಸತೀಶ್ ಕುಮಾರ್" ಶಿಕ್ಷಕ(ಲೆಕ್ಕಶಾಸ್ತ್ರ)ರೆಂದರೆ ತುಂಬಾ ಇಷ್ಟ. ನಾನು ಲೆಕ್ಕಶಾಸ್ತ್ರದಲ್ಲಿ ತುಂಭಾ ದಡ್ಡನಾದರೂ ಸಹ ಅವರನ್ನು ತುಂಬಾ ಇಷ್ಟಪಡ್ತೀನಿ ಕಾರಣ ಅವರ ಮನೋಭಾವ ನನಗೆ ತುಂಬಾ ಇಷ್ಟ. ನಾನೊಬ್ಬ ಬಡತನದ ಕುಟುಂಬದಿಂದ ಬಂದಿದ್ದೇನೆ. ನಿಮಗೆ ಗೊತ್ತಾ ನಾನು ಕನ್ನಡ ಮಾಧ್ಯಮದಲ್ಲಿ ಓದಲು ಕಾರಣ ಬಡತನ. ನಿಮಗೆ ಅನ್ನಿಸಬಹುದು "ಇವನು ಬಡತನ ಕುಟುಂಬ ಅಂತ ಹೇಳುತ್ತಿದ್ದಾನೆ ಆದರೆ ಕ್ರೈಸ್ಟ್ ಯೂನಿವರ್ಸಿಟಿಗೆ ಹೇಗೆ ಸೇರಿರಬಹುದೆಂದು? ಅದನ್ನು ಸಹ ನಿಮಗೆ ಹೇಳುತ್ತೇನೆ. ನಮ್ಮ ಮನೆಯಲ್ಲಿ ತುಂಬಾ ಬಡತನ ಇದ್ದರಿಂದ ನಾನು ೫ನೇ ತರಗತಿ ಇದ್ದಾಗ ನನ್ನನ್ನು 'ಅನಾಥ ಆಶ್ರಮ'ಕ್ಕೆ ಸೇರಿಸಿದರು. ನಾನು ಆಶ್ರಮದಲ್ಲಿ ಓದುತಿದ್ದಾಗ ನಮಗೆ ಪಾಠ ಹೇಳಿ ಕೊಡಲು ಒಬ್ಬರು ಟೀಚರ್ ಬರುತ್ತಿದ್ದರು. ಅವರು ಒಂದು ವರ್ಷದ ನಂತರ ಆಶ್ರಮಕ್ಕೆ ಬರುವುದನ್ನು ನಿಲ್ಲಿಸಿದರು. ನನಗೆ ಆ ಟೀಚರ್ ಅಂದ್ರೆ ತುಂಬಾ ಇಷ್ಟ, ನನ್ನ ಹತ್ತಿರ ಯಾವಗಾದರೂ ೧ ರೂಪಾಯಿ ಇದ್ದಾಗ ಫೋನ್ ಮಾಡುತ್ತಿದ್ದೆ. ನಾನು ೧೦ನೇ ತರಗತಿ ಮುಗಿದ ಮೇಲೆ ಅನಾಥ ಆಶ್ರಮ ಬಿಟ್ಟು ಮನೆಗೆ ಬಂದೆನು. ಮನೆಗೆ ಬಂದ ನಂತರ ನನ್ನ ಪೂರ್ಣ ವಿದ್ಯಾಭ್ಯಾಸದ ಜವಬ್ದಾರಿಯನ್ನು ನನ್ನ ಟೀಚರ್(ಆಶ್ರಮ) ವಹಿಸಿಕೊಂಡರು. ನಾನು ದ್ವಿತೀಯ ಪಿಯುಸಿನಲ್ಲಿ ೮೩% ತೆಗೆದಾಗ ನನ್ನ ಟೀಚರಿಗೆ ತುಂಬಾ ಖುಷಿ ಆಯ್ತು. ಅನಂತರ ಅವರು ಕ್ರೈಸ್ಟ್ ಯೂನಿವರ್ಸಿಟಿ ತುಂಬಾ ಒಳ್ಳೆ ಯೂನಿವರ್ಸಿಟಿ ಅಂತ ನನ್ನ ಈ ಕಾಲೇಜಿಗೆ ಸೇರಿಸಿದರು. ನನ್ನ ಹುಟ್ಟೂರು ಗುಲ್ಬರ್ಗ, ನನ್ನ ಕುಟುಂಬ ಇದೇ ಬೆಂಗಳೂರಿನಲ್ಲಿ ನೆಲಮಂಗಲದಲ್ಲಿದ್ದಾರೆ. ನೆಲಮಂಗಲದಿಂದ ಕಾಲೇಜಿಗೆ ಬರಲು ತುಂಬಾ ಸಮಯ ಬೇಕಾಗಿರುವುದರಿಂದ ನನ್ನ ಟೀಚರ್ ಕಾಲೇಜಿಗೆ ಹತ್ತಿರವಿರುವ ಪಿಜಿಯನ್ನು ನೋಡಿದರು. ನಾನು ಇಂದು ಪಿಜಿಯಿಂದ ಕಾಲೇಜಿಗೆ ಬರುತ್ತಿದ್ದೇನೆ. ಪ್ರತೀ ತಿಂಗಳು ಪಿಜಿಗೆ ೫೦೦೦ ಸಾವಿರ ರೂಪಾಯಿ ಕಟ್ಟಬೇಕು. ಇದನ್ನು ಸಹ ನನ್ನ ಟೀಚರ್ ಕಟ್ಟುತ್ತಿದ್ದಾರೆ. ನನ್ನ ಟೀಚರ್ ನನಗೆ ಟೀಚರ್ ಅಷ್ಟೇ ಅಲ್ಲ ನನ್ನ ತಂದೆ ತಾಯಿ ದೇವರು ಎಲ್ಲಾ ನನ್ನ ಟೀಚರೇ ಆಗಿದ್ದಾರೆ.