ಹರಿಯ ನುಂಗಿತ್ತು ಮಾಯೆ,
ಗೋಚರ
ಲೇಖಕರು: ಅಕ್ಕ ಮಹಾದೇವಿ
ಶೀರ್ಷಿಕೆ: vachana saahitya
ವರ್ಷ: 1130-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಹರಿಯ ನುಂಗಿತ್ತು ಮಾಯೆ
ಅಜನ ನುಂಗಿತ್ತು ಮಾಯೆ ಇಂದ್ರನ ನುಂಗಿತ್ತು ಮಾಯೆ
ಚಂದ್ರನ ನುಂಗಿತ್ತು ಮಾಯೆ ಬಲ್ಲೆನೆಂಬ ಬಲುಗೈಯರ ನುಂಗಿತ್ತು ಮಾಯೆ
ಅರಿಯೆನೆಂಬ ಅಜ್ಞಾನಿಗಳ ನುಂಗಿತ್ತು ಮಾಯೆ
ಈರೇಳುಭುವನವನಾರಡಿಗೊಂಡಿತ್ತು ಮಾಯೆ
ಚೆನ್ನಮಲ್ಲಿಕಾರ್ಜುನಯ್ಯಾ
ಎನ್ನ ಮಾಯವ ಮಾಣಿಸಾ ಕರುಣಿ.