ಹುಟ್ಟಿದ ಹೊಲಿಮನಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಹುಟ್ಟಿದ ಹೊಲಿಮನಿ[ಸಂಪಾದಿಸಿ]

  • ಪ್ರಾಪಂಚಿಕ ಜೀವನದ ಈ ಭೂಲೋಕ - ಇದು ಕೇವಲ ಆಟಕ್ಕೆ ತನ್ನ ನಿಜವಾದ ಮನೆ ಪರಮಾತ್ನ ಸಾನ್ಯಿಧ್ಯ. ಪುರಂದರ ದಾಸರು ಅದನ್ನೇ "ಅಲ್ಲಿದೆ ನನ್ನ ಮನೆ ಇಲ್ಲಿಗೆ ಬಂದೆ ಸುಮ್ಮನೆ !" ಎಂದಿದ್ದಾರೆ.

ಹುಟ್ಟಿದ ಹೊಲಿಮನಿ
ಬಿಟ್ಟರೆ ಖಾಲಿಮನಿ
ಎಷ್ಟಿದ್ದರೇನಿದು ಗಳಿಗಿ ಮನಿ.||ಪಲ್ಲವಿ|| (ಗಳಿಗಿ ಮನಿ -ಕ್ಷಣಮಾತ್ರದ್ದು)
 
ವಸ್ತಿ ಇರುವ ಮನಿ
ಗಸ್ತಿ ತಿರುಗೋ ಮನಿ
ಶಿಸ್ತಿಲೆ ಕಾಣುವ ಶಿವನ ಮನಿ.||೧||
 
ಚಿಂತೆ ಕಾಂತೆಯ ಮನಿ
ಸಂತಿ ಸವತಿಯ ಮನಿ
ಅಂತು ಬಲ್ಲವರಿಗೆ ಆಡೂ ಮನಿ.||೨||
 
ಒಂಬತ್ತು ದ್ವಾರ ದಾಟಿ
ಗಂಟಿಕ್ಕಿ ಹೋಗುವಾಗ
ಗಂಟೆ ಬಾರಿಸಿದಂತೆ ಗಾಳಿಮನಿ.||೩||
 
ವಸುಧೆಯೊಳಗೆ ನಮ್ಮ
ಶಿಶುನಾಳಧೀಶನ
ಹಸನಾದ ಪದಗಳ ಹಾಡೂ ಮನಿ.||೪||

ನೋಡಿ[ಸಂಪಾದಿಸಿ]

ಶರೀಫ ಸಾಹಿತ್ಯ

ಉಲ್ಲೇಖ[ಸಂಪಾದಿಸಿ]

  • ಶಿಶುನಾಳ ಶರೀಫರ ಪದಗಳು -ಅನಾಮಿಕ