ಹೋಮವ ಮಾಡುವರ ಕಂಡೆ;

ವಿಕಿಸೋರ್ಸ್ದಿಂದ



Pages   (key to Page Status)   


ಹೋಮವ ಮಾಡುವರ ಕಂಡೆ; ಹೊಗೆಯ ನಿಲಿಸುವರ ಕಾಣೆ. ದೂರ ದಾರಿ ನಡೆವರ ಕಂಡೆ; ಕಾಲುಗಳ ನುಂಗುವರ ಕಾಣೆ. ಆಲು (ರು?)ತ್ತ ಬೊಬ್ಬೆಗೊಟ್ಟು ರಣದೊಳಗೆ ಅಳಿದು ಮುಂಡ ಮುಂದೆ ನಡೆದಾಡುವರ ಕಂಡೆ
ಹರಿದ ಶಿರವ ಹಿಡಿದುಕೊಂಡು
ಕುಣಿದಾಡುವರ ಕಾಣೆ ಗುಹೇಶ್ವರಾ.