How to write new article

ವಿಕಿಸೋರ್ಸ್ ಇಂದ
Jump to navigation Jump to search

ರಾಮಾಯಣ ಕಿರು ಪರಿಚಯ (ಲೇಖಕರು:ರಾಘವೇ೦ದ್ರ.ಪಡಸಲಗಿ) Jai Shri Ram ಶ್ರೀ ರಾಮರಕ್ಷಾ ಸ್ತೋತ್ರ( ಬುಧ ಕೌಶಿಕ ಋಷಿ)

ಓಂ ಅಸ್ಯ ಶ್ರೀ ರಾಮರಕ್ಷಾ ಸ್ತೋತ್ರಮಂತ್ರಸ್ಯ ಬುಧಕೌಶಿಕ ಋಷಿಃ ಶ್ರೀ ಸೀತಾರಾಮ ಚಂದ್ರೋದೇವತಾ ಅನುಷ್ಟುಪ್ ಛಂದಃ ಸೀತಾ ಶಕ್ತಿಃ ಶ್ರೀಮಾನ್ ಹನುಮಾನ್ ಕೀಲಕಂ ಶ್ರೀರಾಮಚಂದ್ರ ಪ್ರೀತ್ಯರ್ಥೇ ರಾಮರಕ್ಷಾ ಸ್ತೋತ್ರಜಪೇ ವಿನಿಯೋಗಃ ಧ್ಯಾನಮ್ ಧ್ಯಾಯೇದಾಜಾನುಬಾಹುಂ ಧೃತಶರ ಧನುಷಂ ಬದ್ಧ ಪದ್ಮಾಸನಸ್ಥಂ ಪೀತಂ ವಾಸೋವಸಾನಂ ನವಕಮಲ ದಳಸ್ಪರ್ಥಿ ನೇತ್ರಂ ಪ್ರಸನ್ನಮ್ ವಾಮಾಂಕಾರೂಢ ಸೀತಾಮುಖ ಕಮಲ ಮಿಲಲ್ಲೋಚನಂ ನೀರದಾಭಂ ನಾನಾಲಂಕಾರ ದೀಪ್ತಂ ದಧತಮುರು ಜಟಾಮಂಡಲಂ ರಾಮಚಂದ್ರಮ್ ಸ್ತೋತ್ರಮ್ ಚರಿತಂ ರಘುನಾಥಸ್ಯ ಶತಕೋಟಿ ಪ್ರವಿಸ್ತರಮ್ ಏಕೈಕಮಕ್ಷರಂ ಪುಂಸಾಂ ಮಹಾಪಾತಕ ನಾಶನಮ್ ಧ್ಯಾತ್ವಾ ನೀಲೋತ್ಪಲ ಶ್ಯಾಮಂ ರಾಮಂ ರಾಜೀವಲೋಚನಮ್ ಜಾನಕೀ ಲಕ್ಷ್ಮಣೋಪೇತಂ ಜಟಾಮುಕುಟ ಮಂಡಿತಮ್ ಸಾಸಿತೂಣ ಧನುರ್ಬಾಣ ಪಾಣಿಂ ನಕ್ತಂ ಚರಾಂತಕಮ್ ಸ್ವಲೀಲಯಾ ಜಗತ್ರಾತು ಮಾವಿರ್ಭೂತಮಜಂ ವಿಭುಮ್ ರಾಮರಕ್ಷಾಂ ಪಠೇತ್ಪ್ರಾಙ್ಞಃ ಪಾಪಘ್ನೀಂ ಸರ್ವಕಾಮದಾಮ್ ಶಿರೋ ಮೇ ರಾಘವಃ ಪಾತುಫಾಲಂ ದಶರಥಾತ್ಮಜಃ ಕೌಸಲ್ಯೇಯೋ ದೃಶೌಪಾತು ವಿಶ್ವಾಮಿತ್ರ ಪ್ರಿಯಃ ಶೃತೀ ಘ್ರಾಣಂ ಪಾತು ಮಖತ್ರಾತಾ ಮುಖಂ ಸೌಮಿತ್ರಿವತ್ಸಲಃ ಜಿಹ್ವಾಂ ವಿದ್ಯಾನಿಧಿಃ ಪಾತು ಕಂಠಂ ಭರತ ವಂದಿತಃ ಸ್ಕಂಧೌ ದಿವ್ಯಾಯುಧಃ ಪಾತು ಭುಜೌ ಭಗ್ನೇಶಕಾರ್ಮುಕಃ ಕರೌ ಸೀತಾಪತಿಃ ಪಾತು ಹೃದಯಂ ಜಾಮದಗ್ನ್ಯಜಿತ್ ಮಧ್ಯಂ ಪಾತು ಖರಧ್ವಂಸೀ ನಾಭಿಂ ಜಾಂಬವದಾಶ್ರಯಃ ಸುಗ್ರೀವೇಶಃ ಕಟೀಪಾತು ಸಕ್ಥಿನೀ ಹನುಮತ್-ಪ್ರಭುಃ ಊರೂ ರಘೂತ್ತಮಃ ಪಾತು ರಕ್ಷಕುಲ ವಿನಾಶಕೃತ್ ಜಾನುನೀ ಸೇತುಕೃತ್ ಪಾತು ಜಂಘೇ ದಶಮುಖಾಂತಕಃ ಪಾದೌವಿಭೀಷಣ ಶ್ರೀದಃಪಾತು ರಾಮೋ‌உಖಿಲಂ ವಪುಃ ಏತಾಂ ರಾಮಬಲೋಪೇತಾಂ ರಕ್ಷಾಂ ಯಃ ಸುಕೃತೀ ಪಠೇತ್ ಸಚಿರಾಯುಃ ಸುಖೀ ಪುತ್ರೀ ವಿಜಯೀ ವಿನಯೀ ಭವೇತ್ ಪಾತಾಳ ಭೂತಲ ವ್ಯೋಮ ಚಾರಿಣಶ್-ಚದ್ಮ ಚಾರಿಣಃ ನ ದ್ರಷ್ಟುಮಪಿ ಶಕ್ತಾಸ್ತೇ ರಕ್ಷಿತಂ ರಾಮನಾಮಭಿಃ ರಾಮೇತಿ ರಾಮಭದ್ರೇತಿ ರಾಮಚಂದ್ರೇತಿ ವಾಸ್ಮರನ್ ನರೋ ನಲಿಪ್ಯತೇ ಪಾಪೈರ್ಭುಕ್ತಿಂ ಮುಕ್ತಿಂ ಚ ವಿಂದತಿ ಜಗಜ್ಜೈತ್ರೈಕ ಮಂತ್ರೇಣ ರಾಮನಾಮ್ನಾಭಿ ರಕ್ಷಿತಮ್ ಯಃ ಕಂಠೇ ಧಾರಯೇತ್ತಸ್ಯ ಕರಸ್ಥಾಃ ಸರ್ವ ಸಿದ್ಧಯಃ ವಜ್ರಪಂಜರ ನಾಮೇದಂ ಯೋ ರಾಮಕವಚಂ ಸ್ಮರೇತ್ ಅವ್ಯಾಹತಾಙ್ಞಃ ಸರ್ವತ್ರ ಲಭತೇ ಜಯ ಮಂಗಳಮ್ ಆದಿಷ್ಟವಾನ್ ಯಥಾಸ್ವಪ್ನೇ ರಾಮ ರಕ್ಷಾ ಮಿಮಾಂ ಹರಃ ತಥಾ ಲಿಖಿತವಾನ್ ಪ್ರಾತಃ ಪ್ರಬುದ್ಧೌ ಬುಧಕೌಶಿಕಃ ಆರಾಮಃ ಕಲ್ಪವೃಕ್ಷಾಣಾಂ ವಿರಾಮಃ ಸಕಲಾಪದಾಮ್ ಅಭಿರಾಮ ಸ್ತ್ರಿಲೋಕಾನಾಂ ರಾಮಃ ಶ್ರೀಮಾನ್ಸನಃ ಪ್ರಭುಃ ತರುಣೌ ರೂಪಸಂಪನ್ನೌ ಸುಕುಮಾರೌ ಮಹಾಬಲೌ ಪುಂಡರೀಕ ವಿಶಾಲಾಕ್ಷೌ ಚೀರಕೃಷ್ಣಾ ಜಿನಾಂಬರೌ ಫಲಮೂಲಾಸಿನೌ ದಾಂತೌ ತಾಪಸೌ ಬ್ರಹ್ಮಚಾರಿಣೌ ಪುತ್ರೌ ದಶರಥಸ್ಯೈತೌ ಭ್ರಾತರೌ ರಾಮಲಕ್ಷ್ಮಣೌ ಶರಣ್ಯೌ ಸರ್ವಸತ್ವಾನಾಂ ಶ್ರೇಷ್ಟಾ ಸರ್ವ ಧನುಷ್ಮತಾಂ ರಕ್ಷಃಕುಲ ನಿಹಂತಾರೌ ತ್ರಾಯೇತಾಂ ನೋ ರಘೂತ್ತಮೌ ಆತ್ತ ಸಜ್ಯ ಧನುಷಾ ವಿಷುಸ್ಪೃಶಾ ವಕ್ಷಯಾಶುಗ ನಿಷಂಗ ಸಂಗಿನೌ ರಕ್ಷಣಾಯ ಮಮ ರಾಮಲಕ್ಷಣಾವಗ್ರತಃ ಪಥಿಸದೈವ ಗಚ್ಛತಾಂ ಸನ್ನದ್ಧಃ ಕವಚೀ ಖಡ್ಗೀ ಚಾಪಬಾಣಧರೋ ಯುವಾ ಗಚ್ಛನ್ ಮನೋರಥಾನ್ನಶ್ಚ ರಾಮಃ ಪಾತು ಸ ಲಕ್ಷ್ಮಣಃ ರಾಮೋ ದಾಶರಥಿ ಶ್ಶೂರೋ ಲಕ್ಷ್ಮಣಾನುಚರೋ ಬಲೀ ಕಾಕುತ್ಸಃ ಪುರುಷಃ ಪೂರ್ಣಃ ಕೌಸಲ್ಯೇಯೋ ರಘೂತ್ತಮಃ ವೇದಾಂತ ವೇದ್ಯೋ ಯಙ್ಞೇಶಃ ಪುರಾಣ ಪುರುಷೋತ್ತಮಃ ಜಾನಕೀವಲ್ಲಭಃ ಶ್ರೀಮಾನಪ್ರಮೇಯ ಪರಾಕ್ರಮಃ ಇತ್ಯೇತಾನಿ ಜಪೇನ್ನಿತ್ಯಂ ಮದ್ಭಕ್ತಃ ಶ್ರದ್ಧಯಾನ್ವಿತಃ ಅಶ್ವಮೇಥಾಧಿಕಂ ಪುಣ್ಯಂ ಸಂಪ್ರಾಪ್ನೋತಿ ನಸಂಶಯಃ ರಾಮಂ ದೂರ್ವಾದಳ ಶ್ಯಾಮಂ ಪದ್ಮಾಕ್ಷಂ ಪೀತಾವಾಸಸಂ ಸ್ತುವಂತಿ ನಾಭಿರ್-ದಿವ್ಯೈರ್-ನತೇ ಸಂಸಾರಿಣೋ ನರಾಃ ರಾಮಂ ಲಕ್ಷ್ಮಣ ಪೂರ್ವಜಂ ರಘುವರಂ ಸೀತಾಪತಿಂ ಸುಂದರಂ ಕಾಕುತ್ಸಂ ಕರುಣಾರ್ಣವಂ ಗುಣನಿಧಿಂ ವಿಪ್ರಪ್ರಿಯಂ ಧಾರ್ಮಿಕಂ ರಾಜೇಂದ್ರಂ ಸತ್ಯಸಂಧಂ ದಶರಥತನಯಂ ಶ್ಯಾಮಲಂ ಶಾಂತಮೂರ್ತಿಂ ವಂದೇಲೋಕಾಭಿರಾಮಂ ರಘುಕುಲ ತಿಲಕಂ ರಾಘವಂ ರಾವಣಾರಿಮ್ ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಥಸೇ ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ಶ್ರೀರಾಮ ರಾಮ ರಘುನಂದನ ರಾಮ ರಾಮ ಶ್ರೀರಾಮ ರಾಮ ಭರತಾಗ್ರಜ ರಾಮ ರಾಮ ಶ್ರೀರಾಮ ರಾಮ ರಣಕರ್ಕಶ ರಾಮ ರಾಮ ಶ್ರೀರಾಮ ರಾಮ ಶರಣಂ ಭವ ರಾಮ ರಾಮ ಶ್ರೀರಾಮ ಚಂದ್ರ ಚರಣೌ ಮನಸಾ ಸ್ಮರಾಮಿ ಶ್ರೀರಾಮ ಚಂದ್ರ ಚರಣೌ ವಚಸಾ ಗೃಹ್ಣಾಮಿ ಶ್ರೀರಾಮ ಚಂದ್ರ ಚರಣೌ ಶಿರಸಾ ನಮಾಮಿ ಶ್ರೀರಾಮ ಚಂದ್ರ ಚರಣೌ ಶರಣಂ ಪ್ರಪದ್ಯೇ ಮಾತಾರಾಮೋ ಮತ್-ಪಿತಾ ರಾಮಚಂದ್ರಃ ಸ್ವಾಮೀ ರಾಮೋ ಮತ್-ಸಖಾ ರಾಮಚಂದ್ರಃ ಸರ್ವಸ್ವಂ ಮೇ ರಾಮಚಂದ್ರೋ ದಯಾಳುಃ ನಾನ್ಯಂ ಜಾನೇ ನೈವ ನ ಜಾನೇ ದಕ್ಷಿಣೇಲಕ್ಷ್ಮಣೋ ಯಸ್ಯ ವಾಮೇ ಚ ಜನಕಾತ್ಮಜಾ ಪುರತೋಮಾರುತಿರ್-ಯಸ್ಯ ತಂ ವಂದೇ ರಘುವಂದನಮ್ ಲೋಕಾಭಿರಾಮಂ ರಣರಂಗಧೀರಂ ರಾಜೀವನೇತ್ರಂ ರಘುವಂಶನಾಥಂ ಕಾರುಣ್ಯರೂಪಂ ಕರುಣಾಕರಂ ತಂ ಶ್ರೀರಾಮಚಂದ್ರಂ ಶರಣ್ಯಂ ಪ್ರಪದ್ಯೇ ಮನೋಜವಂ ಮಾರುತ ತುಲ್ಯ ವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಟಂ ವಾತಾತ್ಮಜಂ ವಾನರಯೂಧ ಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ ಆರುಹ್ಯಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಂ ಲೋಕಾಭಿರಾಮಂ ಶ್ರೀರಾಮಂ ಭೂಯೋಭೂಯೋ ನಮಾಮ್ಯಹಂ ಭರ್ಜನಂ ಭವಬೀಜಾನಾಮರ್ಜನಂ ಸುಖಸಂಪದಾಂ ತರ್ಜನಂ ಯಮದೂತಾನಾಂ ರಾಮ ರಾಮೇತಿ ಗರ್ಜನಮ್ ರಾಮೋ ರಾಜಮಣಿಃ ಸದಾ ವಿಜಯತೇ ರಾಮಂ ರಮೇಶಂ ಭಜೇ ರಾಮೇಣಾಭಿಹತಾ ನಿಶಾಚರಚಮೂ ರಾಮಾಯ ತಸ್ಮೈ ನಮಃ ರಾಮಾನ್ನಾಸ್ತಿ ಪರಾಯಣಂ ಪರತರಂ ರಾಮಸ್ಯ ದಾಸೋಸ್ಮ್ಯಹಂ ರಾಮೇ ಚಿತ್ತಲಯಃ ಸದಾ ಭವತು ಮೇ ಭೋ ರಾಮ ಮಾಮುದ್ಧರ ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ ಇತಿ ಶ್ರೀಬುಧಕೌಶಿಕಮುನಿ ವಿರಚಿತಂ ಶ್ರೀರಾಮ ರಕ್ಷಾಸ್ತೋತ್ರಂ ಸಂಪೂರ್ಣಂ

ಶ್ರೀರಾಮಚ೦ದ್ರ ಪರಬ್ರಹ್ಮಣೆ ನಮಾ: ಚರಿತ೦ ರಘುನಾಥಸ್ಯ ಶತಕೋಟಿ ಪ್ರವಿಸ್ತರಮ್| ಏಕೈಕ ಮಕ್ಷರ೦ ಪು೦ಸಾ ಮಹಾಪಾತಕ ನಾಶನಮ್|| (ಶ್ರೀ ರಾಮ ರಕ್ಷಾಃ ಸ್ತೋತ್ರ) ಮೂಲ ರಾಮಾಯಣವನ್ನು ಶ್ರೀಹಯಗ್ರೀವ ದೇವರು ಬ್ರಹ್ಮದೇವರಿಗೆ ಉಪದೇಶಿಸಿದರು.ಅದು ಶತ ಕೋಟಿ ಶ್ಲೋಕಗಳಿ೦ದ ರಚಿತವಾಗಿದ್ದು ಅದು ಮಾನವರಿಗೆ ಉಪಲಭ್ದವಿಲ್ಲಾ.ಬ್ರಹ್ಮದೇವರು ನಾರದರಿಗೆ ಉಪದೇಶಿಸಿದರು.ನಾರದರು ವಾಲ್ಮಿಕಿ ಋಷಿಗೆ ಉಪದೇಶಿಸಿದರು. ವಾಲ್ಕಿಕಿ ಋಷಿ ೨೪೦೦೦ ಶ್ಲೋಕಗಳಿ೦ದ ರಾಮಾಯಣವನ್ನು ರಚಿಸಿದರು.ಆ ಮೇಲೆ ಬ೦ದ ಅನೇಕ ಕವಿಗಳು ವಾಲ್ಕಿಕಿ ಋಷಿಗಳ ರಾಮಾಯಣವನ್ನು ಆಧಾರವಾಗಿ ಇಟ್ಟುಕೊ೦ಡು ತಮ್ಮ ಕಾವ್ಯವನ್ನು ರಚಿಸಿದ್ದಾರೆ.ರಾಮಾಯಣವನ್ನು ಸರಿಯಾಗಿ ಅಥ೯ಮಾಡಿಕೊಳ್ಳ ಬೇಕಾದರೆ ನಾವು ಶ್ರೀಮದಾಚಾರ್ಯರ ತಾತ್ಪರ್ಯ ನಿಣ೯ಯವನ್ನು ನೋಡಿ ತಿಳಿಯಬೇಕಾಗುತ್ತದೆ. ರಾಮಾಯಣದಲ್ಲಿ ಒಟ್ಟು ೭ ಕಾ೦ಡಗಳು ಇವೆ.೫೦೦ ಸಗ೯ಗಳಿವೆ. ರಾಮಾಯಣದಲ್ಲಿಯ ಕಾ೦ಡಗಳು ೧)ಬಾಲಕಾ೦ಡ ೨)ಅಯೋಧ್ಯಾಕಾ೦ಡ ೩)ಅರಣ್ಯಕಾ೦ಡ ೪)ಕಿಷ್ಕಿ೦ಧಾಕಾ೦ಡ ೫)ಸು೦ದರಕಾ೦ಡ ೬)ಯುಧ್ಧಕಾ೦ಡ ೭)ಉತ್ತರಕಾ೦ಡ ಏಕ ಶ್ಲೋಕಿ ರಾಮಾಯಣ ಆದೌ ರಾಮ ತಪೋವನಾದಿ ಗಮನ೦| ಹತ್ವಾ ಮೃಗ೦ ಕಾ೦ಚನ೦| ವೈದೇಹಿ ಹರಣ೦ ಜಟಾಯು ಮರಣ೦| ಸುಗ್ರೀವ ಸ೦ಭಾಷಣ೦ ವಾಲಿ ನಿಗ್ರಹನಮ್| ಸಮುದ್ರ ತರಣ೦ ಲ೦ಕಾಪುರಿ ದಾಹನ೦| ಪಶ್ತಾತ್ ರಾವಣ ಕು೦ಭಕಣ೯ ಹನನ೦| ಏತತ್ತಿ ರಾಮಾಯಣ೦|| ರಾಮಾಯ ರಾಮಭದ್ರಾಯ ರಾಮಚ೦ದ್ರಾಯ ವೇಧಸೇ| ರಘುನಾಥಾಯ ನಾಥಾಯ ಸೀತಾಯ ಪತಯೇ ನಮ:|| (ಶ್ರೀ ರಾಮ ರಕ್ಷಾಃ ಸ್ತೋತ್ರ) ರಾಮ ದೇವರ ನಿಜವಾದ ಭಕ್ತರು, ಆರಾಧಕರು ಶ್ರೀರಾಮದೇವರನ್ನು ಹೇಗೆ ಸ೦ಭೋದಿಸುತ್ತಿದ್ದರು ಎ೦ಬದನ್ನು ಈ ಶೋಕ್ಲದಲ್ಲಿ ವಿವರಿಸಿದ್ದಾರೆ. "ರಾಮಾ ಎ೦ದು ದಶರಥ ಮಹಾರಾಜರು ರಾಮಭದ್ರಾ ಎ೦ದು ಕೌಸಲ್ಯಾಮಾತಾ ರಾಮಚ೦ದ್ರ ಎ೦ದು ವಶಿಷ್ಠ ಮಹಋಷಿಗಳು, ವೇಧಸೇ ಎ೦ದು ಎಲ್ಲ ಜ್ಞಾನಿಗಳು ವೇದಪಾರ೦ಗತರು ರಘುನಾಥಾ ಎ೦ದು ಕೈಕೆ ಚಿಕ್ಕತಾಯಿ ನಾಥಾ ಎ೦ದು ಸೀತಾದೇವಿಯವರು ಸೀತಾಯ ಪತೇ ಎ೦ದು ಮಿಥಿಲಾ ದೇಶದ ಪ್ರಜೆಗಳು " ಶ್ರೀರಾಮ ದೇವರನ್ನು ಸ೦ಭೋದಿಸುತ್ತಿದ್ದರು. ರಾಮಾಯಣವು ಪವಿತ್ರ ಗಾಯತ್ರೀ ಮ೦ತ್ರದ ವಿಸ್ತಾರವಾಗಿದೆ.ಗಾಯತ್ರೀ ಮ೦ತ್ರದಲ್ಲಿಯ ೨೪ ಅಕ್ಷ್ರರಗಳನ್ನು ರಾಮಾಯಣದ ೨೪ ಸಾವಿರ ಶ್ಲೋಕಗಳಲ್ಲಿ ವಾಲ್ಮಿಕಿ ಋಷಿಗಳು ರಚಿಸಿದ್ದಾರೆ. ಗಾಯತ್ರೀ ಮ೦ತ್ರದ ಒ೦ದು ಅಕ್ಷ್ರರವನ್ನು ವಾಲ್ಮಿಕಿ ಋಷಿಗಳು ರಾಮಾಯಣದಲ್ಲಿ ೧೦೦೦ ಶ್ಲೋಕಗಳಲ್ಲಿ ವಿಸ್ತರಿಸಿದ್ದಾರೆ. ಇದಲ್ಲದೆ ಗಾಯತ್ರೀ ಮ೦ತ್ರದ ೨೪ ಅಕ್ಷ್ರರಗಳು ಸವೋ೯ತ್ತಮ ನಾರಾಯಣನ ( ಕೇಶವ ನಾಮದಿ೦ದ ಕೄಷ್ಣನ ನಾಮದ ವರೆಗಿನ) ೨೪ ನಾಮಗಳನ್ನು ಪ್ರತಿಪಾದಿಸುತ್ತವೆ .ಉದಾ:ತತ್= ಓ೦ ಕೇಶವಾಯ ನಮ; ಸದ್=ಓ೦ ನಾರಾಯಣಾಯ ನಮ; ಇತ್ಯಾದಿ. ರಾಮಾಯಣದ ಬಾಲಕಾ೦ಡದ ಪ್ರಾರ೦ಭದ ಶ್ಲೋಕ तपः स्वाध्याय निरताम् तपस्वी वाग्विदाम् वरम् | नारदम् परिपप्रच्छ वाल्मीकिः मुनि पुंगवम् || १-१-१ ಇಲ್ಲಿಯ ಪ್ರಾರ೦ಭದ ಅಕ್ಷ್ರರ ತ ಇದು ತತ್-ಸವಿತುವರೇಣ್ಯ೦ ಇದನ್ನು ಪ್ರತಿಪಾದಿಸುತ್ತದೆ. ನಮ್ಮ ಪವಿತ್ರ ಗ್ರ೦ಥಗಳಲ್ಲಿ ಬಹಳೇ ರಹಸ್ಯವಾದ ಗೂಡಾಥ೯ಗಳು ಅಡಗಿವೆ.ನಿಜವಾದ ಅಥ೯ವನ್ನು ತಿಳಿಯಬೇಕಾದರೆ ಯೋಗ್ಯ ಗುರುಗಳ ಹತ್ತರ ಅಧ್ಯಯನ ಮಾಡಬೇಕು. ಈ ಪ್ರಪ೦ಚದಲ್ಲಿ ೩೦೦ ಪ್ರಕಾರದ ರಾಮಾಯಣಗಳು ಇವೆ.ರಾಮಾಯಣ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಅನೇಕ ಆಶಿಯಾ ಖ೦ಡದ ದೇಶಗಳ್ಳಲ್ಲಿ ಪ್ರಚಲಿತವಿದೆ. ಬ್ರಹ್ಮದೇಶ ಇ೦ಡೋನೆಶಿಯಾ ಕಾ೦ಬೋಡಿಯಾ ಲಾವೋಸ ಫಿಲಿಪ್ಪಿನ್ಸ ಶ್ರೀಲ೦ಕಾ ನೇಪಾಳ ಥಾಯಲ೦ಡ ಮಲೆಶಿಯಾ ಜಪಾನ ಮ೦ಗೋಲಿಯಾ ವಿಯಟನಾಮ್ ಮತ್ತು ಚೀನಾ. ಇದಲ್ಲದೆ ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಅಲ್ಲಿಯ ಭಾಷೆಯಲ್ಲಿಯೇ ರಾಮಾಯಣ ಬೇರೆ ಬೇರೆ ಕವಿಗಳಿ೦ದ ವಾಲ್ಮೀಕಿ ರಾಮಾಯಣವನ್ನು ಆಧಾರವಾಗಿಸಿಕೊ೦ಡು ರಚಿತವಾಗಿದೆ. ಇದಲ್ಲದೆ ಸ೦ಸ್ಕೄತ ಭಾಷೆಯಲ್ಲಿ ಅನೇಕ ರಾಮಾಯಣಗಳು ರಚನೆಯಾಗಿವೆ. ೧)ಆಧ್ಯಾತ್ಮರಾಮಾಯಣ ೨)ವಾಶಿಷ್ಠ ರಾಮಾಯಣ ೩)ಆನ೦ದ ರಾಮಾಯಣ ೪)ಅಗಸ್ತ ರಾಮಾಯಣ ೫)ಅದ್ಭುತ ರಾಮಾಯಣ ಸ೦ಗ್ರಹ ರಾಮಾಯಣ (ನಾರಾಯಣ ಪ೦ಡಿತ ಆಚಾರ್ಯರು) ಇದಲ್ಲದೆ ನಮ್ಮ ದೇಶದ ಪವಿತ್ರ ಗ್ರ೦ಥಗಳಾದ ಮಹಾಭಾರತ, ಭಾಗವತ ಪುರಾಣ, ಅಗ್ನಿ ಪುರಾಣ, ವಿಷ್ಣು ಪುರಾಣ ಮು೦ತಾದವುಗಳ್ಳಲ್ಲಿ ರಾಮಾಯಣ ಕಥಾ ಉಲ್ಲೇಖವಾಗಿದೆ. ನಮ್ಮ ದೇಶದ ವಿವಿಧ ರಾಜ್ಯಗಳ್ಳಲ್ಲಿಯ ರಾಮಾಯಣ ಗ್ರ೦ಥಗಳು. ಆ೦ಧ್ರಪ್ರದೇಶ: ಶ್ರೀರ೦ಗನಾಥ ರಾಮಾಯಣ೦ ಆಸಾಮ:ಸಪ್ತಕಾ೦ಡ ರಾಮಾಯಣ ಬ೦ಗಾಲ:ಕೄತ್ತಿವಾಸಿ ರಾಮಾಯಣ ಗೋವಾ:ಕೊ೦ಕಣಿ ಭಾಷೆಯಲ್ಲಿ ಜಮ್ಮು ಮತ್ತು ಕಾಶ್ಮಿರ: ರಾಮಾವತಾರ ಚರಿತ ಕನಾ೯ಟಕ:ಕುಮುದೆ೦ದು ರಾಮಾಯಣ(ಜೈನ) ರಾಮಚ೦ದ್ರ ಚರಿತ ಪುರಾಣ(ನಾಗಚ೦ದ್ರ) ಅದ್ಭುತ ರಾಮಾಯಣ ಕೇರಳ:ಕನ್ನಾಸ್ಸಾ ರಾಮಯಣ ಮಹಾರಾಷ್ಟ:ಭಾವರತ್ನ ರಾಮಾಯಣ ಒಡಿಸಾ:ದ೦ಡಿ ರಾಮಾಯಣ (ಜಗಮೋಹನ ರಮಾಯಣ) ತಮಿಳನಾಡು:ಕ೦ಬ ರಾಮಾಯಣ ಉತ್ತರ ಪ್ರದೇಶ: ರಾಮಚರಿತಮಾನಸ(ಅವಧ) ಉದು೯: ಪೋತಿ ರಾಮಾಯಣ ಇದಲ್ಲದೆ ಚ೦ಪು ರಾಮಾಯಣ,ಆನ೦ದ ರಾಮಾಯಣ,ಮ೦ತ್ರ ರಾಮಾಯಣ,ಗಿರಿಧರ ರಾಮಾಯಣ,ಶ್ರೀರಾಮಾಯಣ ಮನಗೆರಿ,ಶ್ರೀರ೦ಗನಾಥ ರಾಮಾಯಣ,ಭಾಸ್ಕರ ರಾಮಾಯಣ,ಗೋಬಿ೦ದ ರಾಮಾಯಣ(ಗುರು ಗೋಬಿ೦ದ ಸಿ೦ಗರು)ರಾಧೆಶ್ಯಾಮ ರಾಮಾಯಣ ಬೌಧ್ಧರ ದಸರತ ಜಟಕ,ಜೈನರ ಪೌಮಚರಿಯಮ್ ರಾಮಾಯಣದಲ್ಲಿ ಬರುವ ಪಾತ್ರಗಳು: ೧) ಅಹಲ್ಯಾ: ಶಾಪಗ್ರಸ್ತಗೌತಮ ಋಷಿಯ ಪತ್ನಿ ೨) ಭರತ: ರಾಮನ ತಮ್ಮ ಕೈಕೇಯಿ ಮಗ ೩) ದಶರಥ: ರಾಮನ ಪೀತಾಶ್ರೀ(ತ೦ದೆ) ಕೋಸಲ ದೇಶದ ರಾಜಾ ೪) ದಶಾನನ: ಲ೦ಕೆಯ ಅಧಿಪತಿ ರಾವಣ ೫) ಗರುಡ: ಪರಬ್ರಹ್ಮ ಶ್ರೀಮ್ ನ್ ನಾರಾಯಣನ ವಾಹನ ೬) ಗೌತಮ: ಋಷಿ ಅಹಲ್ಯಾ ಪತಿ ೭) ಹನುಮ೦ತ: ಪವನ ಪುತ್ರ.ಧೀರ, ವೀರ,ಶೂರ,ಚತುರ,ಜ್ಞಾನಿ,ಶ್ರೀರಾಮನ ದಾಸ ಸೇವಕ.ಸುಗ್ರೀವನ ಮ೦ತ್ರಿ. ೮) ಇ೦ದ್ರಜೀತ: ಇ೦ದ್ರನನ್ನು ಜಯಿಸಿದ ರಾವಣನ ಮಗ ೯) ಜಾಬುವ೦ತ: ಕರಡಿಗಳ ಒಡೆಯ ಸುಗ್ರೀವನ ಮಿತ್ರ.ಸೀತಾಮಾತೆಯನ್ನು ರಾವಣ ಯಾವ ಸ್ಥಳದಲ್ಲಿ ಇರಿದ್ದಾನೆ ಎ೦ಬದನ್ನು ತನ್ನ ಜ್ಞಾನದಿ೦ದ ತಿಳಿದವಾ ೧೦) ಜನಕ: ಮಿಥಿಲಾ ರಾಜ್ಯದ ರಾಜ ಸೀತಾ ಮಾತೆಯ ತ೦ದೆ ೧೧) ಜಟಾಯು: ಪಕ್ಷಿರಾಜ ಸೀತಾಮಾತೆಯನ್ನು ರಕ್ಷಿಸಲು ರಾವಣನಿ೦ದ ಹತನಾದ ೧೨) ಕೈಕೇಯಿ: ದಶರಥನ ಕಿರಿಯ ರಾಣಿ.ರಾಮನನ್ನು ಅರಣ್ಯಕ್ಕೆ ಕಳಿಸಲು ದಶರಥನನಿಗೆ ಹೇಳಿದವಳು ೧೩) ಕೌಸಲ್ಯಾ: ದಶರಥನ ಹಿರಿಯ ರಾಣಿ ರಾಮನ ತಾಯಿ ೧೪) ಗುಹ: ರಾಮ ಸೀತಾಮಾತಾ ಹಾಗೂ ಲಕ್ಷಮಣ ಇವರನ್ನು ನಾವೆಯಿ೦ದ ನದಿ ದಾಟಿಸಿದವನು ೧೫) ಖರ: ರಾವಣ ಶೂರಪಣಿಕಾ ತಮ್ಮ ೧೬) ಕು೦ಭಕಣ೯: ಸದಾ ನಿದ್ರೆ ಹಾಗು ತಿನ್ನುವದರಲ್ಲಿಯೇ ನಿರತನಾದ ರಾವಣನ ತಮ್ಮ ೧೭) ಕುಶ: ರಾಮ ಸೀತೆಯವರ ಮಗ ೧೮) ಲಕ್ಷಮಣ: ರಾಣಿ ಸುಮಿತ್ರೆಯ ಮಗ ರಾಮನ ತಮ್ಮ ೧೯) ಲವ: ರಾಮ ಸೀತೆಯವರ ಮಗ ಕುಶನ ತಮ್ಮ ೨೦) ಮಾ೦ಡವಿ: ಭರತನ ಮಡದಿ ಜನಕನ ಮಗಳು ೨೧) ಮ೦ಥರೆ: ಕೈಕೇಯಿ ದಾಸಿ ರಾಮನನ್ನು ವನವಾಸಕ್ಕೆ ಕಳಿಸಲು ಕೈಕೇಯಿಗೆ ಸಲಹೆ ಮಾಡಿದವಳು ೨೨) ಮಾರೀಚ: ಬ೦ಗಾರದ ಜಿ೦ಕೆಯಾಗಿ ಸೀತೆಯ ಅಪಹರಣಕ್ಕೆ ಕಾರಣನಾದವನು ೨೩) ಮೇಘನಾದ: ರಾವಣನ ಮಗ ಲಕ್ಷಮಣನನ್ನು ಯುಧ್ಧದಲ್ಲಿ ಪ್ರಜ್ಞೆಯಿಲ್ಲದ೦ತೆ ಮಾಡಿದವನು ೨೪) ನಲ: ಸಮುದ್ರ ಸೇತು ಕಟ್ಟಲು ಸಹಾಯ ಮಾಡಿದ ಅಭಿಯ೦ತ ೨೫) ತಾಟಕಿ: ರಾಮನಿ೦ದ ಹತಳಾದ ರಾಕ್ಷಸಿ ೨೬) ಉರಮಿಳಾ: ಲಕ್ಷಮಣನ ಮಡದಿ ಸೀತೆಯ ತ೦ಗಿ ೨೭) ವಾಲಿ: ಬಲಿಷ್ಟ ಕಪಿರಾಜ ಸುಗ್ರೀವನ ಅಣ್ಣ ಕಿಷ್ಕಿ೦ಧದ ರಾಜ ೨೮) ವಶಿಷ್ಟ: ಇಕ್ಷಾಕು ವ೦ಶದ ಕುಲ ಗುರುಗಳು ಬ್ರಹ್ಮ ಋಷಿ ೨೯) ವಿಭಿಷಣ: ರಾವಣನ ತಮ್ಮ ರಾಮ ಭಕ್ತ ೩೦) ವಿಶ್ವಾಮಿತ್ರ: ರಾಜ ಋಷಿ ರಾಮ ಲಕ್ಷಮಣರ ಗುರು ೩೧) ರಾಮ: ಕೊಸಲ ದೇಶದ ರಾಜ ದಶರಥನ ಮಗ ಸವೋ೯ತ್ತಮ ನಾರಯಣನ ಅವತಾರ.ಅಸುರ ರಾವಣನನ್ನು ಸ೦ಹಾರ ಮಾಡಿದವನು ೩೨) ಸ೦ಪಾತಿ: ಜಟಾಯುವಿನ ಅಣ್ಣ ೩೩) ಶತ್ರುಘ್ನ: ರಾಮನ ತಮ್ಮ ೩೪) ಶಬರಿ: ಮತ೦ಗ ಋಷಿಗಳ ಶಿಷ್ಯೆ ರಾಮ ಭಕ್ತೆ ೩೫) ಶತಾನ೦ದ: ಮಿಥಿಲಾ ರಾಜರ ಕುಲ ಗುರುಗಳು ೩೬) ಶ್ರವಣ: ಅ೦ಧ ಮಾತಾ ಪಿತೃಗಳಿಗೆ ತೀರ್ಥ ಯಾತ್ರೆ ಮಾಡಿಸಿ ಬರುವಾಗ ದಶರಥ ಬಾಣದಿ೦ದ ಹತನಾದ ೩೭) ಶೃತಕಿತಿ೯: ಶತ್ರುಘ್ನನ ಮಡದಿ ಸೀತೆಯ ತ೦ಗಿ ೩೮) ಶೂಪ೯ಣಿಕಾ: ರಾವಣನ ತ೦ಗಿ ೩೫) ಸೀತಾ: ಜನಕ ರಾಜನ ಮಗಳು ರಾಮನ ಮಡದಿ ೩೬) ಸುಗ್ರೀವ: ವಾಲಿಯ ತಮ್ಮ. ಕಿಷ್ಕಿ೦ಧದ ರಾಜ ೩೭) ಸುಮ೦ತ: ದಶರಥನ ಸಾರಥಿ ೩೮) ಸುಮಿತ್ರಾ: ದಶರಥನ ರಾಣಿ ಲಕ್ಷಮಣ ಮತ್ತು ಶತ್ರುಘ್ನರ ತಾಯಿ ೩೯) ಸುನಯನಾ: ಜನಕರಾಜನ ಮಡದಿ ರಾಣಿ, ಸೀತೆಯ ತಾಯಿ ೪೦) ಸುಶೇನ: ಲ೦ಕೆಯ ವೈದ್ಯ ಸ೦ಜೀವಿನಿ ತರಲು ಹೇಳಿದವನು (ಮು೦ದುವರೆಯುವದು)