ಪುಟ:Chirasmarane-Niranjana.pdf/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



 ಚಿರಸ್ಮರಣೆ                                           ೨೧೩
     

"ಲಾಂಗ್ ಲಿವ್ ದಿ ಕಿಂಗ್." <\p>

ಉಪಾಧ್ಯಾಯರು ಪಾಠ ಒಪ್ಪಿಸಿದರು.<\p>

"ಇನ್ನು ಹೊರಡು!"<\p>

ಬೇರೆಯವರಿಗೆ ಬೇರೆ ರೀತಿಯ ಪ್ರಶ್ನೆ. ಹೆಂಗಸರೇಲ್ಲಿ ಮಾಯವಾದರು?ಎಂದು ಗುಡುಗು. ತಲೆ ತಪ್ಪಿಸಿಕೊಂಡಿದ್ದ ಮುಂಡೇಗಂಡರಿಗಾಗಿ ಗರ್ಜನೆ. <\p>

"ಅಪ್ಪು---ಅಬೂಬಕರ್....ಎಂಥ ಶಿಕ್ಷೆಕೊಟ್ಟರೂ ಸಾಲದು ಅವರಿಬ್ಬರಿಗೆ!"<\p>

ಮತ್ತೊಂದು ದಿನ ಕಳೆಯಿತು. ಬೇಟೆಯ ರೀತಿಯೂ ಬದಲಾಯಿತು. ಸಶಸ್ತ್ರ ದಳದವರು, ನಂಬಿಯಾರರ ಸೇವಕರು ತೋರಿಸಿಕೊಟ್ಟ ಕೆಲವು ಗುಡಿಸಲುಗಳನ್ನು ಸುಟ್ಟ ಹೋಳಿ ಮಾಡಿದರು. ಒಂದೆಡೆ, ಕಾಯಿಲೆಬಿದ್ದು ಓಡಿ ಹೋಗಲಾರದೆ ಉಳಿದಿದ್ದ ಹೆಂಗಸೊಬ್ಬಳ ಮೇಲೆ ನಾಲ್ಕಾರು ಜನ ಸೈನಿಕರಿಂದ ಅತ್ಯಾಚಾರ ನಡೆಯಿತು. ತಮ್ಮನ್ನು ನೋಡಿ ಹತ್ತಿರ ಬಂದು ಬೊಗಳಿತೆಂದು ಒಂದು ನಾಯಿಯನ್ನು ಅವರು ಕೊಂದರು. <\p>

ಹಳ್ಳಿಯ ಹೊರ ವಲಯದಲ್ಲೇ ನಿಂತಿದ್ದ ಹಲವಾರು ಜನ ಹಸಿವನ್ನು ತಾಳಲಾರದೆಹೋದರು. ಗುಡಿಸಲುಗಳಿಂದ ಕಂಡು ಬಂದ ಬೆಂಕಿಯಂತೂ ಅವರನ್ನು ಅಪಾರ ಕಳವಳಕ್ಕೆ ಗುರಿಮಾಡಿತು. ಆ ಕಂಗಾಲ ಪರಿಸ್ಥಿತಿಯಲ್ಲಿ ಅಪ್ಪುವೆಂದ:

"ನೀವು ಹೋಗಿ ಸಂಗಾತಿಗಳೇ!" ಇಲ್ಲಿದು ಏನೂ ಗೊತ್ತಾಗದೆ ಸಂಕಟ ಪಡೋದಕ್ಕಿಂತ ಹಳ್ಳೀಲೇ ನೀವಿರೋಸದು ಮೇಲು." ಕೆಲವರೆಂದರು:

"ನೀವೂ ಬಂದ್ಬಿಡಿ ಅಪ್ಪು. ಅಷ್ಟು ಜನರನ್ನು ಹಿಡ್ಕೊಂಡು ಹೋಗಿದ್ದಾರೆ. ಅವರ ಜತೇಲಿ ನಾವೂ." "ಇಲ್ಲ. ನಾನು ಮತ್ತು ಅಬೂಬಕರ್ ಇನ್ನೊ ಸ್ವಲ್ಪ ದಿವಸ ಹೊರಗಿರ್ತ್ತೆವೆ. ಪಂಡಿತರು-ಮಾಸ್ತರು ಯಾರನ್ನಾದರೂ ನೋಡೋದಕ್ಕೆ ಪ್ರಯತ್ನ ಪಡ್ತೇವೆ." "ಆಗಲಿ--ಹಾಗೇ ಮಾಡಿ." ಆ ಇಬ್ಬರನ್ನುಳಿದು ರೈತರೆಲ್ಲ ಹಳ್ಳಿಗೆ ಮರಳಿ ನುಸುಳಿದರು. ಬೇರೊಂದು ದಿನದ ಬೇಟೆಯಲ್ಲಿ, ಮತ್ತೆ ಹದಿನೈದು ಜನ ರೈತರ ಬಂಧನವಾಯಿತು. ಅಷ್ಟು ಜನ, ಅಪ್ಪು -ಅಬೂಬಕರರ ಸಂಗಡಿಗರೆಂದು ಅತ್ಯಧಿಕ ಹಿಂಸೆಗೆ ಗುರಿಯಾದರು. ಆದರೆ ಅವರಿಂದಲೂ ಅಧಿಕಾರಿಗಳಿಗೆ ಬೇಕಾದ ವಾರ್ತೆ ಸಿಗಲಿಲ್ಲ. "ಅಪ್ಪು -ಅಬೂಬಕರರನ್ನು ಹಿಡಿದುಕೊಟ್ಟವರಿಗೆ ಭಾರಿ ಬಹುಮಾನ ಎಂದು