ಪುಟ:Chirasmarane-Niranjana.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೧೬ ಚಿರಸ್ಮರಣೆ

ಬಳಲಿಕೆಯಿಂದ ಬತ್ತಿಹೋಗಿದ್ದ ಮುಖಗಳು ಅವರು ಬಂದ ರೀತಿ ಎಂಥದೆಂಬುದನ್ನು ಸಾರಿ ಹೇಳಿದವು.<\p>

"ನಾವು ಮಾಸ್ತರನ್ನು ಈಗ್ಲೇ ನೋಡಬೇಕಾಗಿದೆ" ಎಂದು ಅಪ್ಪು.,<\p>

ನೀನು ಯಾರು?--ಎಂದು ಆತ ಕೇಳಲಿಲ್ಲ. ತಲೆಯಾಲ್ಲಾಡಿಸಿ ಆತನೆಂದ: "ನೀವು ಬಂದದ್ದು ಒಂದು ದಿನ ತಡವಾಯಿತು. ನಿನ್ನೆಯೇ ಮಾಸ್ತರು ಇಲ್ಲಿಂದ ಹೋದ್ರು." "ಎಲ್ಲಿಗೆ?" ಹೇಳಬೇಕೋ ಬೇಡವೋ ಎಂದು ಅರೆಕ್ಷಣ ಸುಮ್ಮನಿದ್ದು ಆತ ಉತ್ತರವಿತ್ತ: "ಭೂಗತರಾದ್ರು. ನಿಮ್ಮೂರಿನ ಗಲಾಟೆಗೆ ಸಂಬಂಧಿಸಿಯೇ ಅವರ ಮೇಲೆ ವಾರಂಟು ಹೊರಟಿದೇಂತ ತೋರ್ತದೆ." ಅಪ್ಪು, ನೆಲ ನೋಡಿ ತಲೆ ಎತ್ತಿದ. "ಅವರು ನಮಗೆ ಸಿಗೋದು ಸಾಧ್ಯವೇ ಇಲ್ಲ ಅಂತೀರಾ?" "ಅವರು ಈ ಊರಲ್ಲಿಲ್ಲ. ನಿಮ್ಮ ಕಡೆಗೆ ಹೋಗಿರ್ತಾರೆ." ಧೃಢವಾದ ಧ್ವನಿಯಲ್ಲಿ ಉತ್ತರ ಬಂತು: "ಇಲ್ಲ, ಈಗ ಊರಲ್ಲಿ ಯಾರೂ ಇಲ್ಲ ಸಂಗಾತಿ." ಅಪ್ಪು ಅಬೂಬಕರನತ್ತ ನೋಡಿ ಹೇಳಿದ. "ಹಾಗಾದರೆ ಇಲ್ಲೇನೂ ನಮಗಿನ್ನು ಕೆಲಸವಿಲ್ಲ ಹೊರಡೋಣ." ಅಬೂಬಕರನ ಸ್ನೇಹಿತನೆಂದ: "ರಕ್ಷಣೆ ಬೇಕಾದರೆ ಹೇಳಿ. ನೀವಿಬ್ಬರೂ ಇರೋದಕ್ಕೆ ಏರ್ಪಾಟು ಮಾಡ್ತೇವೆ." ಅಪ್ಪು ಕೊಟ್ಟದು ನಿರ್ಧಾರದ ಉತ್ತರ : "ಇಲ್ಲ, ನಾವು ಊರಿಗೆ ಹೋಗ್ಬೇಕು." ಹಾಗೆ ಹೇಳಿದೊಡನೆಯೇ ಏನೋ ಯೋಚಿಸಿ ಆತ ಅಬೂಬಕರನತ್ತ ತಿರುಗಿ ಹೇಳಿದ: "ನೀನು ಬೇಕಾದರೆ ಇಲ್ಲಿರು, ಸಂಗಾತಿ." ಆ ಯೋಚನೆಯ ಅಗತ್ಯವೇ ಇಲ್ಲವೆನ್ನುವಂತೆ ಅಬೂಬಕರ್ ತಕ್ಷಣ ಉತ್ತರವಿತ್ತ:

"ಇಲ್ಲ, ನಾನೂ ಜತೆಯಲ್ಲೇ ಬರ್ತೇನೆ. ನಡಿ."<\p> ..............

ಹಾದಿ ವೆಚ್ಚಕ್ಕೆಂದು ಸ್ವಲ್ಪ ಹಣ ಪಡೆದು ನಡುರಾತ್ರೆಯ ರೈಲಿನಲ್ಲಿ ಅವರು,<\p>