ವಿಷಯಕ್ಕೆ ಹೋಗು

ಮರಹು ಅರಿವಿನಲ್ಲಡಗಿ, ಅರಿವು

ವಿಕಿಸೋರ್ಸ್ದಿಂದ



Pages   (key to Page Status)   


ಮರಹು ಅರಿವಿನಲ್ಲಡಗಿ
ಅರಿವು ಮರಹ ನುಂಗಿ ತೆರಹಿಲ್ಲದಿರ್ದೆನೆಂಬ ಅಹಂ ಇದೇನೊರಿ ಬ್ರಹ್ಮವನೊಳಕೊಂಡ ಬ್ರಹ್ಮವು ತಾನಾಗಿ ಮತ್ತೆ ಬ್ರಹ್ಮದ ನುಡಿ ಇದೇನೊರಿ ಆದಿಶೂನ್ಯ ಮಧ್ಯಶೂನ್ಯ ಅಂತ್ಯಶೂನ್ಯ ಉಧ್ರ್ವಶೂನ್ಯದಿಂದತ್ತತ್ತ ನಿಂದ [ಘನದ]ನಿಲವ ಕಾಬರಾರೊರಿ ಇದು ಕಾರಣ-ಕೂಡಲಚೆನ್ನಸಂಗನ [ಸಹಜದ] ನಿಲವು ಬಯಲು ಚಿತ್ರಿಸಿದ ರೂಪ
ಬಯಲರಿಯದಂತೆ!