ವಿಷಯಕ್ಕೆ ಹೋಗು

ಆದಿ ಅನಾದಿಗಳಿಲ್ಲದಂದು, ನಾದ

ವಿಕಿಸೋರ್ಸ್ದಿಂದ



Pages   (key to Page Status)   


ಆದಿ ಅನಾದಿಗಳಿಲ್ಲದಂದು
ನಾದ ಬಿಂದು ಕಳೆ ಮೊಳೆದೋರದಂದು
ದೇಹ ದೇಹಿಗಳುತ್ಪತ್ತಿಯಾಗದಂದು
ಜೀವಾತ್ಮ ಪರಮಾತ್ಮರೆಂಬವರಿಲ್ಲದಂದು
ಸಕಲ ಸಚರಾಚರಂಗಳ ಸುಳುಹಿಲ್ಲದಂದು
ಇವೇನುಯೇನೂ ಇಲ್ಲದಂದು
ನೀನು ಶೂನ್ಯನಾಗಿರ್ದೆಯಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.