ವಿಷಯಕ್ಕೆ ಹೋಗು

ಉರಿಯ ಗಗನದೊಳಗೆ ಶರೀರವಿಲ್ಲದ

ವಿಕಿಸೋರ್ಸ್ದಿಂದ



Pages   (key to Page Status)   


ಉರಿಯ ಗಗನದೊಳಗೆ ಶರೀರವಿಲ್ಲದ ತರುಣಿ ಉದಯವಾಗಿ ಉರಿಯ ಮಣಿಯ ಪವಣಿಗೆಯ ಮಾಡುವುದ ಕಂಡೆನಯ್ಯಾ. ಉರಿಯನುಂಡು
ಶರೀರವಿಲ್ಲದಾಕೆಯ ನೆರೆದು ಪರಮಾಮೃತವ ಸೇವಿಸಿ ಪರಮ ಪರಿಣಾಮದೊಳಗೋಲಾಡಿದೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.