ವಿಷಯಕ್ಕೆ ಹೋಗು

ಮಿಂಚು ಮಿಂಚಿದಡೆ, ಮಿಂಚಿನಲುಳ್ಳ

ವಿಕಿಸೋರ್ಸ್ದಿಂದ



Pages   (key to Page Status)   


ಮಿಂಚು ಮಿಂಚಿದಡೆ
ಮಿಂಚಿನಲುಳ್ಳ ಪ್ರಯೋಗವನಾಕ್ಷಣವೆ ಪ್ರಯೋಗಿಸಬೇಕು. ಇಂದ್ರಚಾಪ ತೋರಿದಡೆ ಇಂದ್ರಚಾಪದಲುಳ್ಳ ಪ್ರಯೋಗವನಾಕ್ಷಣವೆ ಪ್ರಯೋಗಿಸಬೇಕು. ಮಹಾನುಭಾವಿಗಳು ಮನದೆರೆದು ಮಾತನಾಡಿದಡೆ ಅನುಭಾವದೊಳಗುಳ್ಳ ಪ್ರಯೋಗವನಾಕ್ಷಣವೆ ಪ್ರಯೋಗಿಸಬೇಕು. ಕೂಡಲಚೆನ್ನಸಂಗಯ್ಯನಲ್ಲಿ ಸ್ವಾಯತವಾದ ಶರಣರು ಸ್ವೇಚ್ಛಾಪರರು.