ಪುಟ:Chirasmarane-Niranjana.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚಿರಸ್ಮರಣೆ

೩೩

ಹೇಳಿಕಳಿಸ್ತಾರೆ."
"ಹ್ಯಾಗೆ ಗೊತ್ತಾಗ್ತದೆ ನಾವು ಬ೦ದಿರೋದು?"
"ಧಾಂಡಿಗ ಆಗಲೆ ಹೋದನಲ್ಲಾ!"
"ಧಾಂಡಿಗ?"
"ಹೂ. ಧಾಂಡಿಗ ಅಂತಲೆ ನಾವು ಅವನನ್ನು ಕರೆಯೋದು."
"ಅವನು-ಅವನೂ ನಮ್ಮವನೆ?"
ಪ್ರಶ್ನೆಯಲ್ಲಿ ಆಶ್ಚರ್ಯ ಬೆರೆತಿತ್ತು. ಅಂಗಡಿಯವನು ನಕ್ಕು ನುಡಿದ:
"ಯಾಕೆ, ಅವನನ್ನ ನೋಡಿ ಭಯವಾಯ್ತೋ?"
ಅಪ್ಪುವಿಗೆ ಆ ಪ್ರಶ್ನೆ ಮೆಚ್ಚುಗೆಯಾಗಲಿಲ್ಲ.ಧಾಂಡಿಗನ ವಿಷಯ ತಾನು ಹಾಗೆ ಕೇಳಲೇಬಾರದಿತ್ತು, ಎನಿಸಿತು.
"ಭಯವೇನಿಲ್ಲ, ಆದರೂ ಒಂದು ಥರ ಆಯ್ತು."
"ಒಳ್ಳೆಯವನು, ಪಾಪ !"
ಇದೆಲ್ಲವೂ ತಾನು ಕಲ್ಪಿಸಿಕೊಂಡಂತೆಯೇ ಇದ್ದಹಾಗೆ ಚಿರುಕಂಡನಿಗೆ ತೋರಿ, ಅವನ ಮುಖದಲ್ಲಿ ಕಳೆಯೇರಿತು.
"ನಾವೇ ಕಯ್ಯೂರಿನೋರೂಂತ ಆತನಿಗೆ ಹ್ಯಾಗೆ ಗೊತ್ತಾಯ್ತು?"
ಪ್ರಶ್ನೆ ಕೇಳಿದ ಚಿರುಕಂಡನಂತೆಯೇ ಅಪ್ಪುವೂ ಆತುರದಿಂದ ಉತ್ತರವನ್ನು ಇದಿರುನೋಡಿದ.
"ಆದೆಲ್ಲಾ ಏನು ದೊಡ್ಡ ವಿಷಯ? ನೀವು ನೋಡೋಕೆ ಹ್ಯಾಗಿದ್ದೀರೀಂತ ಮಾಸ್ತರು ಹೇಳಿಯೇ ಇದ್ರು. ಅಲ್ಲದೆ ಇಂಥಾದ್ದರಲ್ಲೆಲ್ಲ ಧಾಂಡಿಗ ಹಳೇ ಹುಲಿ. ನೀವು ಯಾರೂಂತ ಗೊತ್ತಾದ್ದರಿಂದಲೇ, ದುಡ್ಡಿಲ್ಲಾಂತ ನೀವು ಅಂದಮೇಲೂ ನಾನು ಚಹಾ ಮಾಡೋದಕ್ಕೆ ಹೊರಟೆ. ಅದನ್ನ ನೋಡಿ ಖಾತ್ರಿಯಾಗಿ, ಅವನು ಎದ್ದ."
ಅವರಿಬ್ಬರ ವಿಷಯದಲ್ಲೂ ಅಪ್ಪು ಮತ್ತು ಚಿರುಕಂಡನಿಗೆ ಗೌರವ ಉತ್ಪನ್ನವಾಯಿತು. ಅಪ್ಪುವೆಂದ: "ಮಾಸ್ತರು ಇರೋ ಜಾಗ ಇಲ್ಲಿಂದ ಎಷ್ಟು ದೂರ?"
"ಅದೆಲ್ಲಾ ಕೇಳಬಾರದು. ಹೋದಾಗ ನಿಮಗೇ ಗೊತ್ತಾಗ್ತದೆ."
ಸಣ್ಣ ತಪ್ಪು ಮಾಡಿದ ಬುದ್ಧಿವಂತ ವಿದ್ಯಾರ್ಥಿಯ ಹಾಗಾಯಿತು ಹುಡುಗನ ಸ್ಥಿತಿ.
ಅಂಗಡಿಯವನು ಸಣ್ಣನೆ ನಕ್ಕು, ಡಬ್ಬದ ಬಳಿಯಲ್ಲಿ ಮಡಚಿ ಇರಿಸಿದ್ದ