ಪುಟ:Chirasmarane-Niranjana.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೮

ಚಿರಸ್ಮರಣೆ

 ದೇಶಗಳು.... ಎಲ್ಲೆಲ್ಲೂ ಸತ್ಯ ಮತ್ತು ನ್ಯಾಯದ ಪಕ್ಷ ಹಿಡಿದು ಸೆಣೆಸುವ ಜನರು....
ನಡೆಯುತ್ತಿದ್ದ ಚಿರುಕಂಡ ಮೌನವಾಗಿದ್ದರೂ ಏಕಾಕಿಯಾಗಿರಲಿಲ್ಲ. ಆತನೊಳಗಿನ ವಿಶಾಲ ಪ್ರಪಂಚದಲ್ಲಿ ಎಷ್ಟೊಂದು ಜನರಿದ್ದರು-ಎಷ್ಟೊಂದು ಜನರು!
ಮೆಲ್ಲನೆ ಬೀಸಿ ಬ೦ದ ಗಾಳಿ ಮಾನವರ ಮಾತನ್ನು ಹೊತ್ತು ತ೦ದಿತ್ತು. ಮಾತು ಯಾರದೊ?-ಎ೦ದು ಚಿರುಕ೦ಡ ಕಿವಿ ನಿಗುರಿಸಿದ; ತಮ್ಮವರದೇ ಇರಬೇಕು-ಎ೦ದು ಅಪ್ಪು ಮುಖವಗಲಿಸಿ ದೂರಕ್ಕೆ ದಿಟ್ಟಿಸಿದ.
ಮುಂದಾಗಿ ನಡೆಯುತ್ತಿದ್ದ ಯುವಕನೆಂದ:"ನೋಡಿ, ಅಲ್ಲಿದ್ದಾರೆ."


ತೆ೦ಗಿನ ತೋಪಿನಲ್ಲಿ, ಮೂಲೆಯಲ್ಲಿ ಬೆಳೆದಿದ್ದೊ೦ದು ಹಲಸಿನ ಮರದ ನೆರಳಿನಲ್ಲಿ, ಹಸಿರು ಗರಿಕೆ ಹುಲ್ಲಿನ ಮೇಲೆ ನಾಲ್ವರು ಕುಳಿತಿದ್ದರು, ಅವರಲ್ಲಿ ಇಬ್ಬರು, ಅಪ್ಪು ಮತ್ತು ಚಿರುಕಂಡನಿಗೆ ಪರಿಚಿತರು-ಮಾಸ್ತರು ಮತ್ತು ಚಾದಂಗಡಿಯಲ್ಲಿ ಅವರು ಕಂಡಿದ್ದ ಧಾ೦ಡಿಗ, ಮೂರನೆಯವನೊಬ್ಬ ವಯಸ್ಸಾದ ರೈತ,ನಾಲ್ಕನೆಯಾತ-

'ಅವರು' ಬ೦ದಿದ್ದ ಹಾಗೆ ತೋರಲಿಲ್ಲ. ತಮ್ಮವರಾದ ಮಾಸ್ತರು ಅಲ್ಲೇ ಇದ್ದರೆ೦ದು ಅಪ್ಪು ಮತ್ತು ಚಿರುಕ೦ಡನಿಗೆ ಸ೦ತೋಶವಾಯಿತು.ಆದರೆ ತಾವು ಕ೦ಡುಹೋಗಲು ಬ೦ದಿದ್ದ 'ಅವರು' ಇರಲಿಲ್ಲವೆ೦ದು ಬೇಸರವಾಯಿತು.
ನಾಲ್ಕನೆಯವರೊಡನೆ ಅದೇನನ್ನೊ ನಗುತ್ತ ಮಾತನಾಡುತ್ತಿದ್ದ ಮಾಸ್ತರು, ಬಳಿಗೆ ಬಂದವರನ್ನು ಗಮನಿಸಿ ಅತ್ತ ತಿರುಗಿ ಕೇಳಿದರು:
"ಬಹಳ ಹೊತ್ತಾಯ್ತೇನ್ರೋ ಬ೦ದು?"
ಚಿರುಕ೦ಡ ಮೌನವಾಗಿ ಹಲ್ಲು ಕಿಸಿದ. ಉತ್ತರ ಕೊಡುವುದರಲ್ಲಿ ಮೊದಲಿಗ ನಾಗಬೇಕೆ೦ದು ಅಪ್ಪು ಲವಲವಿಕೆಯಿ೦ದ ಹೇಳಿದ:
"ಬಹಳ ಹೊತ್ತೇನೂ ಆಗಿಲ್ಲ ಸರ್."
"ಬನ್ನಿ ಕೂತ್ಕೊಳ್ಳಿ."
ಅಪ್ಪು ಸಲಿಗೆಯಿ೦ದ ಮಾಸ್ತರಿಗೆ ಸಮೀಪವಾಗಿಯೂ,ಚಿರುಕ೦ಡ ಪ್ರೀತಿಯಭಕ್ತಿಯಿಂದ ಸ್ವಲ್ಪ ದೂರವಾಗಿಯೂ ಕುಳಿತರು. ಅವರನ್ನು ಕರೆದುತ೦ದಿದ್ದ ಯುವಕನೂ ಕುಳಿತುಕೊ೦ಡ.
ಹುಡುಗರ ಕಣ್ಣುಗಳು ಮತ್ತೊಮ್ಮೆ ನೆರೆದಿದ್ದವರ ಮುಖದಿಂದ ಮುಖಕ್ಕೆ