ಪುಟ:Chirasmarane-Niranjana.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೬೨ ಚಿರಸ್ಮರಣೆ ಅತ್ತೆಯೂ ಅಲ್ಲ. ಅವರನ್ನು ಹೆಸರು ಹಿಡಿದು ಕರೆಯುವುದೆಂದಿಲ್ಲ. ಹಾಗಾದರೆ ಯಾರು?

 ಒಬ್ಬಳು ಹುಡುಗಿ ಬಂದು ದೇವಕಿಯ ಪಕ್ಕದಲ್ಲಿ ನಿಂತು,"ಯಾಕಕ್ಕಾ ಕರೆದೆ?"

ಎಂದಳು.

  ಆಕೆ ಯಾರೆಂಬುದು ಸ್ಪಷ್ಟವಾಯಿತು. ಒಮ್ಮೆಲೆ ಅಪ್ಪು ಅಧೀರನಾದ.ಕಣ್ಣನತ್ತ

ನೋಡಿ ಆತನ ರಕ್ಷಣೆ ಬಯಸಿದ.ಆದರೆ ಕಣ್ಣ ಅಲ್ಲಿದ್ದರಲ್ಲವೆ? ಮೆಲ್ಲನೆ ಧೈರ್ಯ ತಂದುಕೊಂಡು ಅಪ್ಪು, ನಿಂತಿದ್ದವರತ್ತ ನೋಡಿದ. ಬರಿಯ ಅಡ್ಡ ಪಂಚೆ ರವಕೆಯಲ್ಲ. ಈಗಿನ ಪದ್ಧತಿಯಂತೆ ಸೀರೆ-ಸಾದಾ ಸೀರೆ. ಹಣತೆಯ ಬೆಳಕಿನಲ್ಲಿ ಕೆಂಪಗೆ ಕಾಣಿಸುತಿದ್ದ ತುಂಬು ಮುಖ. ತಾನು ಕುಳಿತಿದ್ದುದನ್ನು ಗಮನಿಸಿದೊಡನೆ ಲಜ್ಜೆಯಿಂದ ತಲೆಬಾಗಿ ಕದ್ದು ನೋಡಿದ ನೋಟ. ವಯಸ್ಸು ಹದಿನಾರೋ, ಹದಿನೇಳೂ...

  "ಈಕೆ ನನ್ನ ತಂಗಿ. ಇವತ್ತು ಬೆಳಿಗ್ಗೆ ಅಮ್ಮನ ಜತೆಲಿ ಬಂದ್ಲು."
  ಅಪ್ಪು ನಿದ್ದೆಯಿಂದ ಎಚ್ಚೆತ್ತವನಂತೆ "ಹಾಂ?" ಎಂದು. ಆ ಬಳಿಕ "ಹೂಂ"

ಎಂದ.

ಹುಡುಗಿ ಒಳಕ್ಕೆ ಓಡಿದಳು. ದೇವಕಿಯೆಂದಳು:

  "ಅಪ್ಪು ಬಂದಿದ್ದಾರೆ, ಅತ್ತೇ...."
'ಬಂದಿದ್ದಾನೆ' ಎಂದಿದ್ದುದು ಅಪ್ಪು ಸಂಘದ ಪ್ರಮುಖನಾದಮೇಲೆ 'ಬಂದಿದ್ದಾರೆ'ಯಾಗಿತ್ತು. ಅಪ್ಪುವಿಗಾದುದು ತೀರಾ ಹೊಸ ಅನುಭವ. ಅದು ಸಂತೋಷದ ತಣುಪು

ಎನ್ನೋಣವೆಂದರೆ, ಅಸಮಾಧಾನದ ಕಾವು ಅದರ ಹಿಂಬದಿಯಲ್ಲಿ ಹೆಡೆಯಾಡುತ್ತಿತ್ತು. ಊಟಕ್ಕೆ ತನ್ನೊಬ್ಬನನ್ನೆ ಕರೆದಿರಬೇಕೆಂಬ ಸಂದೇಹ ಈಗ ತಲೆದೋರಿ, ಆತನಿಗೆ ರೇಗಿತು.

 ಊಟಕ್ಕೆಂದು ಕೆಲವೇ ಬಾಳೆ ಎಲೆಗಳನ್ನು ಕುಯ್ದು ಕಣ್ಣ ಒಳಕ್ಕೆ ಬರುತ್ತಿದ್ದಂತೆ

ಅಪ್ಪುವೆಂದ:
"ಇದೇನೋ ಕಣ್ಣ?ನೀನು ಯಾರಿಗೂ ಹೇಳೇ ಇಲ್ಲಾಂತ ತೋರ್ತದೆ." ಒಳಗೊಳಗೇ ನಗುತ್ತಿದ್ದರೂ, ಅಪ್ಪುವಿನ ಮುನಿಸಿನ ಧ್ವನಿಯಿಂದ ನೊಂದು ಕೊಂಡವನಂತೆ ನಟಿಸಿ, ಕಣ್ಣ ಸುಮ್ಮನಿದ್ದ. ಒಂದು ಕ್ಷಣ ಬಿಟ್ಟು, ಶಾಂತವಾದ ಸ್ವರದಲ್ಲಿ ಆತನೆಂದ: "ಅಪ್ಪು, ಅಮ್ಮ ಮಾಡಿದ ಕರಿಗಡುಬು ತಿನ್ನೋದಕ್ಕೇಂತ ಒಮ್ಮೆ ನಿನ್ನನ್ನು