ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೫೬ ಚಿರಸ್ಮರಣೆ

{gap} "ಇಲ್ಲಿ ಯಾಕೆ ಗುಂಪು ಕೂಡ್ತೀರಾ?ಹೊರಡಿ!"ಎಂದು ಜಮೀನ್ದಾರರು ಗರ್ಜಿಸಿದರು.
{gap} ಘೌಜದಾರರೂ ಸನ್ನೆ ಮಾಡಿದುದನ್ನು ಕಂಡು ಪೋಲೀಸರು, "ಹೋಗಿ, ಮನೆಗ್ಹೋಗಿ!"ಎಂದು ಮೆಲ್ಲಮೆಲ್ಲನೆ ಜನರನ್ನು ಹಿಂದಕ್ಕೆ ತಳ್ಳಿದರು.
{gap} ಗುಂಪು ಅಲ್ಲಿಂದ ಹೊರಟಿತು.ಅಪ್ಪು ಮತ್ತು ಚಿರುಕಂಡರಿಗೆ ಅಂಟಿಕೊಡೇ ಸಂವಾದದ ವಿವರ ಕೇಳುತ್ತ,ಜನ ಮುಂದಕ್ಕೆ ಚಲಿಸಿದರು.
{gap}ಅಪ್ಪುವಿನ ತಂದೆ ಕೇಳಿದ:
{gap}"ಮಾಸ್ತರು ಊರಲ್ಲಿಲ್ವ?"
{gap}ಆ ಪ್ರಶ್ನೆಗೆ ಕೋರ ಉತ್ಸಾಹದ ಧ್ವನಿಯಲ್ಲಿ ಉತ್ತರವಿತ್ತ:
{gap}"ಇಲ್ಲ,ಊರಲಿಲ್ಲ.ಇವರಿಬ್ಬರೂ ಬರೋಕ್ಮುಂಚೆ ಮಾಸ್ತರ ವಿಷಯ ಬಂದಿತ್ತು.ಜಮೀನ್ದಾರರು ಮಾಸ್ತರನ್ನು ಬಾಯಿಗೆ ಬಂದ ಹಾಗೆ ಅಂದ್ರು."ಇವತ್ತು ಊರಲ್ಲಿಲ್ಲ.ಇದ್ದಿದ್ರೆ ನಿಮ್ಮ ಮೂಲಕ ಬಿಸಿ ಮುಟ್ಟಿಸ್ಬಹುದಾಗಿತ್ತು.ಅಂತ ಘೌಜದಾರರಿಗೆ ಹೇಳಿದ್ರು.ಏನು ಧೈರ್ಯ!"
{gap}ಮಾಸ್ತರನ್ನು ಕುರಿತು ಅಷ್ಟು ಹಗುರವಾಗಿ ನಂಬಿಯಾರರು ಮಾತನಾಡಿದರೆಂಬ ವರದಿ ಅಸಹ್ಯವಾಗಿತ್ತು.ಚಿರುಕಂಡನೆಂದ:
{gap}"ಅವರು ಬಿಸಿ ಮುಟ್ಟಿಸೋ ರೀತಿ ಎಂಥದೂಂತ ಇವತ್ತು ನೋಡಿದೆವಲ್ಲ!ತಮ್ಮ ಸಾಮರ್ಥ್ಯ ತೋರಿಸ್ಬೇಕೂಂತ ನಂಬಿಯಾರರೇ ಪೋಲೀಸರನ್ನ ಕರೆಸಿದದ್ದು.ಕಡೆಗೆ ಏನಾಯ್ತು?ನಾವು ಬಗ್ಗಿದ್ದರೆ ಬೆನ್ನಿಗೊಂದು ಗುದ್ದು ಬೀಳ್ತಿತ್ತು.ಬಗ್ಗಲಿಲ್ಲ-ಸುಮ್ಮನಾದ್ರು."

{gap}ಅಷ್ಟರಲ್ಲೆ ಗುಂಪಿನಿಂದ ಒಬ್ಬನೆಂದ: {gap}"ಇನ್ನು ಸ್ವಲ್ಪ ಹೊತ್ತಿನಲ್ಲೇ ಘೌಜದಾರರೂ ಪೋಲೀಸರೂ ರೈಲು ಸ್ಟೇಷನ್ನಿಗೆ ಹೊರಡ್ತಾರೆ.ಮೂರೇ ಜನ.ನಾವು ಅವರಿಗೆ ಬಿಸಿಮುಟ್ಟಿಸೋಣ್ವೇನು?"
{gap}"ಶ್!"ಎಂದು ಚಿರುಕಂಡ,ಯಾರು ಹಾಗೆ ಅಂದರೆಂದು ತಿರುಗಿನೋಡುತ್ತ.
{gap}"ಅಂಥ ವಿಚಾರ ಮಾಡ್ಬೇಡಿ.ಬೀದೀಲಿ ಹೋಗೋ ಮಾರೀನ ಮನಗೆ ಕರೆಯೋದೂಂತ ಅದಕ್ಕೇ ಹೇಳೋದು."
{gap}ಆ ಮಾತು ಒಪ್ಪಿಗೆ ಎಂಬಂತೆ ಇನ್ನೊಬ್ಬನೆಂದ:
{gap}"ಕೈತುರಿಸ್ತದೇಂತ ಕಲ್ಲು ಬಂಡೆಗೆ ಗುದ್ದೋಕಾಗ್ತದೇನಪ್ಪ?"
{gap}ಅಲ್ಲಿಯೇ ಇದ್ದ ಕಣ್ಣ ಮಾತು ಸೇರಿಸಿದ:
{gap}"ಕಲ್ಲುಬಂಡೆ ಕೀಳೋದು ಬರಿ ಕೈಯಿಂದಲ್ಲ;ಅದಕ್ಕೆ ಬೇರೆ ಸಾಮಾನು ಬೇಕು!"