ಎಡದ ಕೈಯಲಿ ಕತ್ತಿ

ವಿಕಿಸೋರ್ಸ್ದಿಂದ


Pages   (key to Page Status)   

ಎಡದ ಕೈಯಲಿ ಕತ್ತಿ
ಬಲದ ಕೈಯಲಿ ಮಾಂಸ
ಬಾಯಲಿ ಸುರೆಯ ಗಡಿಗೆ
ಕೊರಳಲಿ ದೇವರಿರಲು ಅವರ ಲಿಂಗನೆಂಬೆ
ಸಂಗನೆಂಬೆ
ಕೂಡಲಸಂಗಮದೇವಾ
ಅವರ ಮುಖಲಿಂಗಿಗಳೆಂಬೆನು.