ಕಪ್ಪುಕೊಳ
ಗೋಚರ
ಹಾಡುಗಳು
[ಸಂಪಾದಿಸಿ]ನನ್ನ ನಿನ್ನ ಪರಿಚಯ ಹೊಸತು
[ಸಂಪಾದಿಸಿ](ರಚನೆ :- ಆರ್. ಎನ್. ಜಯಗೋಪಾಲ್ )
ನನ್ನ ನಿನ್ನ ಪರಿಚಯ ಹೊಸದು
ಎದೆಯ ಬಡಿತದ ತಾಳವು ಹೊಸದು
ನನ್ನ ನಿನ್ನ ಪರಿಚಯ ಹೊಸದು
ಹೊಸದು ಹೊಸದು ಹೊಸದು
ಎದೆಯ ಬಡಿತದ ತಾಳವು ಹೊಸದು
ಹೊಸದು ಹೊಸದು ಹೊಸದು
ನನ್ನ ನಿನ್ನ ಪರಿಚಯ ಹೊಸದು
ಹೊಸದು ಹೊಸದು ಹೊಸದು
ಕಣ್ಣು ನುಡಿದ ಮಾತಿದು ಹೊಸದು
ಮುಡಿದ ಮಲ್ಲಿಗೆ ಪರಿಮಳ ಹೊಸದು
ಚೈತ್ರವು ತಂದ ಹಸಿರಿದು ಹೊಸದು
ಹರೆಯವು ತಂದ ಬಿಸಿಯಿದು ಹೊಸದು
ಪ್ರೀತಿಯ ಹಾಡಿನ ಪಲ್ಲವಿ ಹೊಸದು
ಹಾಡಿಗೆ ಧಾಟಿಯು ಅನುದಿನ ಹೊಸದು
ಸಂಜೆಯ ರಂಗು ಕೆನ್ನೆಗೆ ಹೊಸದು
ಒಲವಿನ ಗುಂಗು ಹೃದಯಕೆ ಹೊಸದು
ಕೈಬಳೆ ನಾದದ ಕರೆಯಿದು ಹೊಸದು
ನಡೆಯಲಿ ಕಂಡ ಬಳುಕಿದು ಹೊಸದು
ಗೆಳೆತನ ತಂದ ಕನಸಿದು ಹೊಸದು
ಮಿಲನವು ನೀಡಿದ ಹರುಷವು ಹೊಸದು