ಕುಂಡಲಿಯ ತಂಡತಂಡದ ಬಾಗಿಲಲ್ಲಿ

ವಿಕಿಸೋರ್ಸ್ದಿಂದ



Pages   (key to Page Status)   


ಕುಂಡಲಿಯ ಬಾಗಿಲಲ್ಲಿ ಕೆಂಡವ ಪುಟಮಾಡಿ
ಉದ್ದಂಡವಿಕಾರದ ಉಪಟಳವನುರುಹಿ
ತಂಡತಂಡದ ನೆಲೆಗಳ ದಾಟಿ ದಂಡನಾಳವ ಪೊಕ್ಕು ಮಂಡಲತ್ರಯದ ಮೇಲೆ ಚಂಡ ರವಿಕೋಟಿಪ್ರಭೆಯಿಂದೆ ಬೆಳಗುವ ಅಖಂಡಮೂರ್ತಿಯ ಕಂಡು ಕೂಡಬಲ್ಲಾತನೆ ಪ್ರಚಂಡ ಪ್ರಾಣಲಿಂಗಿಯೆಂಬೆನಯ್ಯಾ ಅಖಂಡೇಶ್ವರಾ.