ನಾ ಮೆಚ್ಚಿದ ಹುಡುಗ - ಬೆಳದಿಂಗಳಿನಾ ನೊರೆ ಹಾಲು
ಚಿತ್ರ: ನಾ ಮೆಚ್ಚಿದ ಹುಡುಗ
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಗಾಯಕರು: ಎಸ್.ಜಾನಕಿ ಮತ್ತು ಪಿ.ಬಿ.ಶ್ರೀನಿವಾಸ್
ಸಂಗೀತ: ವಿಜಯಭಾಸ್ಕರ್
ಬೆಳದಿಂಗಳಿನಾ ನೊರೆ ಹಾಲು ಕೊಡದಲಿ ತುಂಬಿ ತಂದವಳೇ
ಹೊಳೆಯುವ ತಾರೆಯ ಹೊಂಬೆಳಕೂ ಕಣ್ಣಲಿ ಸೂಸಿ ನಿಂದವಳೇ
ಬಾ ಬಾರೆ
ಬಾ ಬಾರೆ ಓ ಗೆಳತೀ ಜೀವನ ಸಂಗಾತಿ....
ಮಲ್ಲಿಗೆ ಹಂಬಿನ ತೋಟದಲೀ ತಂಬೆಲರಂತೆ ಬಂದವನೇ
ಅರಿಯದ ಹೆಣ್ಣಿನ ಹೃದಯದಲೀ ಸುಮಧುರ ನೋವನು ತಂದವನೇ
ಬಾ ಬಾರೋ
ಬಾ ಬಾರೋ ಓ ಗೆಳೆಯಾ ಜೀವನ ಸಂಗಾತಿ...
....||ಪಲ್ಲವಿ||
ವಸಂತ ಕಾಲದ ಪ್ರಥಮ ಕುಸುಮವೋ ಪ್ರೇಮಪಲ್ಲವಿಯೋ ||೨||
ಅನುರಾಗಾಮೃತ ಝರಿಯಲಿ ಮಿಂದಾ ಚಲುವ ಚೆನ್ನಿಗನೋ
ಹೂವಿನ ತೇರಲಿ ಮೆರೆಯುತ ಬಂದಾ ದೇವಕನ್ನಿಕೆಯೋ....||ಮಲ್ಲಿಗೆ ಹಂಬಿನ ತೋಟದಲೀ||
ಆಸೆಗಳೆಂಬ ಕಾರಂಜಿಗಳೂ ಹೊಮ್ಮುವ ನಂದನವೋ||೨||
ನಿನ್ನಾ ಕಿರುನಗೆಯೆಂಬ ಹೂವುಗಳಿಂದ ನಲಿಯುವ ಹೂಬನವೋ
ಪ್ರಣಯಿಗಳಾ ಮಧುರವಿಹಾರವೋ ಪ್ರೇಮಕಾಶ್ಮೀರವೋ
....||ಬೆಳದಿಂಗಳಿನಾ ನೊರೆಹಾಲು||
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ