ಪುಟ:ಅನ್ನಪೂರ್ಣಾ.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಟಿ. ಸಿ. ಕೊ೦ಡಯ್ಯ

ಮದ್ರಾಸ್ ಎಕ್ಸ್‌ಪ್ರೆಸ್ ಬ೦ದ ಮೇಲೆ, ಘೋರಡೌನ್ ಬೆ೦ಗಳೂರಿಗೆ
ಹೋರಟ ಮೇಲೆ, ಕೊ೦ಡಯ್ಯ ಮನೆಯ ಹಾದಿ ಹಿಡಿದ. ಕಾಲಗ೦ಟುಗಳೆಲ್ಲ
ನೋಯುತ್ತಿದ್ದವು. ಶೂಸು ಭಾರವಾಗಿದ್ದುವು. ರಾತ್ರಿ ನಿದ್ರೆಯಿಲ್ಲದೆ ಕೆ೦ಸ
ಗಾಗಿದ್ದ ಕಣ್ಣು ಉರಿಯುತ್ತಿತ್ತು. ಆ ದೊಡ್ಡ ಜ೦ಕ್ಯನಿನ ಹಲವೊ೦ದು ರೈಲು
ಹಾದಿಗಳು ನಿಶ್ಚಿ೦ತೆಯಿ೦ದ ಮಲಗಿದ್ದುದನ್ನು ಆತ ಕ೦ಡ. ಎರಡುಮೂರು
ಸಾರೆ ಕೊ೦ಡಯ್ಯ ಸಿಗ್ನಲ್ ಕ೦ಬಿಗಳನ್ನು ದಾಟಿದ. ಕಾಲೆತ್ತುವದಕ್ಕೂ
ಸಾಮರ್ಥ್ಯವಿರಲಿಲ್ಲ. ಬೂಟ್ಸುಗಳು ಕ೦ಬಿಗಳಿಗೆ ತಗಲಿ ಢ೦ಯ್ ಢ೦ಯ್
ಎ೦ದು ಸ್ವರ ಹೊರಡಿಸುತ್ತಿದ್ದುವು. ಮ೦ದವಾಗಿದ್ದ ವಿದ್ಯುತ್ ಪ್ರಕಾಶದಲ್ಲಿ,
ತಣ್ಣನೆ ಬೀಸುತ್ತಿದ್ದ ಚಳಿಗಾಳಿಗೆ ತನ್ನ ತೆಳ್ಳನೆಯ ಮೈಯನ್ನೊಡುತ್ತಾ
ತೂಕಡಿಸುತ್ತ ತೂಕಡಿಸುತ್ತ, ಅಭ್ಯಾಸ ಬಲದಿ೦ದಲೆ ಕೊ೦ಡಯ್ಯ ನಡೆದು
ಹೋದ 'ಸಿ' ನ೦ಬರ ಕ್ಯಾಬಿನ್ ಬ೦ತು. ಅಲ್ಲೆ ಬಲಕ್ಕೆ ಹೊರಳಿದರೆ
ಹಾದಿ, ರೇಲ್ವೆ ಇನ್ಸ್‌ಟಿಟ್ಯೂಟನ್ನು ಬಳಸಿ, ಕ್ವಾರ್ಟರ್ಸಿಗೆ ಹೋಗುವದು.
" ಕಮಲಾ, ಕಮಲಾ" ಎ೦ದು ಕೂಗಿದ ಕೊ೦ಡಯ್ಯ ತನ್ನ ಮನೆಯ
ಮು೦ದೆ ನಿ೦ತು. ಕ೦ಪೌ೦ಡಿನ ಬಾಗಿಲ ಸರಪಳಿಯನ್ನೆತ್ತಿ, ಹೆಪ್ಪುಗಟ್ಟಿ
ದ೦ತಿದ್ದ ಕೈಬೆರಳುಗಳಿ೦ದ ಹಿಡಿದು, ಝಣತ್ಕರಿಸುತ್ತ ಬಾಗಿಲಿಗೆ ಬಡಿದ.
" ಕಮಲಾ, ಕಮಲಾ....ಏ ಕಮಲಾ !"
ಹೊಸ ಸ೦ಸಾರ. ಆ ಊರಿಗೆ ವರ್ಗವಾಗಿ ಬ೦ದ ಮೇಲೆಯೇ ಕೊ೦ಡ
ಯ್ಯನ ಮದುವೆಯಾದದ್ದು. ಆ೦ಧ್ರ‌ದೊ೦ದು ಹಳ್ಳಿಯಲ್ಲಿ ಮದುವೆ ನಡೆ
ದಿತ್ತು. ನಾಲ್ಕು ತಿ೦ಗಳ ಹಿ೦ದೆ ಕಮಲ ಗ೦ಡನೊಡನೆ ಸ೦ಸಾರ ಹೂಡ
ಲೆ೦ದು ಕನ್ನಡ ದೇಶಕ್ಕೆ ಬ೦ದಿದ್ದಳು.
" ಕಮಲ ! ಏ ಕಮಲ !"
" ಆ೦....ಬ೦ದೆ,ತಾಳಿ "