ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ 11 - 44 - ಸದ್ಯಃ ಪ್ರಾಣಹರವಾದ ಮರ್ಮದ ಸಮಿಾಪದಲ್ಲಿ ಚುಚ್ಚಿದರೆ, ಕಾಲಾಂತರದಿಂದ ಮರಣವು ಸಂಭವಿಸುತ್ತದೆ. ಕಾಲಾಂತರದಿಂದ ಪ್ರಾಣ ತೆಗೆಯತಕ್ಕ ಮರ್ಮದ ಸಮೀಪ ಚುಚ್ಚಿದರೆ ಅಂಗವೈರೂಪ್ಯ ಉಂಟಾಗುವದು. ಶಲ್ಯ ತೆಗೆದೊಡನೆ ಪ್ರಾಣ ತೆಗೆಯತಕ್ಕ ಮರ್ಮದ ಸಮಿಾಪದಲ್ಲಿ ಚುಚ್ಚಿದರೆ ಕಾಲಾಂತರದಿಂದ ನೋವು ಮತ್ತು ರೋಗವುಂಟಾ ಗುವವು. ರೋಗ ಉಂಟುಮಾಡತಕ್ಕದ್ದು ಮಂದವಾದ ನೋವು ಆಗುತ್ತದೆ. ಷರಾ 3 ನೇ 4ನೇ ವಾಕ್ಯಗಳ ಪಾರಾಂತರವಿರುತ್ತದೆ ಅದರ ಪ್ರಕಾರ ವಿಶಲ್ಯ ಪ್ರಾಣಹರದ ಅಂತವೇಧದಿಂದ ವೈ ಕಲ್ಯವು, ಮತ್ತು ವೈಕಲ್ಯ ಕರದ ಅಂತವೇಧದಿಂದ ನೋವು ಮತ್ತು ರೋಗ, ಮತ್ತು ರುಜಾಕರದ ಅಂತವೇಧದಿಂದ ತೀವ್ರ ವಲ್ಲದ ನೋವು ಉಂಟಾಗುತ್ತದೆಂತ ಅರ್ಥವಾಗುತ್ತದೆ 111. ತತ್ರ ಸದ್ಯಃಪ್ರಾಣಹರಾಣಿ

                   ಸಪ್ತರಾತ್ರಾಭ್ಯಂತರಾನ್ಮಾರಯಂತಿ |         

ಮರ್ಮಭೇದ ಕಾಲಾಂತರಪ್ರಾಣಹರಾಣಿ

  ಫಲಿಸುವ    ಪಕ್ಷಾನ್ಮಾಸಾಧಾವ | ತೇಷ್ವಪಿ 
ವಿಧಾನಗಳು  ತುಕ್ಷಿಪ್ರಾ ಣಿ ಕದಾಚಿದಾಶು ಮಾರಯಂತಿ | ವಿಶಲ್ಯಪ್ರಾಣಹರಾಣಿ ವೈಕಲ್ಯ, ಕರಾಣಿ 
                     ಚ ಕದಾಚಿದತ್ಯಭಿಹತಾನಿ ಮಾರಯಂತಿ 
                    | (ಸು. 340 )

ಸದ್ಯದಲ್ಲಿ ಪ್ರಾಣಹರವಾದ ಮರ್ಮಗಳು ಏಳು ರಾತ್ರಿಗಳೊಳಗೆ ಕೊಲ್ಲುತ್ತವೆ; ಕಾಲಾಂತರ ಪ್ರಾಣಹರಗಳು ಒಂದು ಪಕ್ಷ ಅಧವಾ ಮಾಸದಲ್ಲಿ, ಅವುಗಳಲ್ಲಿ ಕ್ಷಿಪ್ರ ಎಂಬ ಮರ್ಮಗಳು ಒಂದಾನೊಂದು ವೇಳೆ ಬೇಗನೇ ಮರಣವನ್ನು ಪ್ರಾಪಿಸುತ್ತವೆ. ವಿಶಲ್ಯಪ್ರಾಣ ಹರಗಳು ಮತ್ತು ವೈಕಲ್ಯ ಕರಗಳು ಒಂದೊಂದು ಸಾರಿ, ಅತಿಯಾಗಿ ಗಾಯಪಟ್ಟರೆ, ಮರಣ ವನ್ನು ಉಂಟುಮಾಡುತ್ತವೆ. ಕತೆ 112. ತ್ವಕ್ಪರ್ಯಾಂತಸ್ಯ ದೇಹಸ್ಯ

                   ಯೋsಯಮಂಗವಿನಿಶ್ಚಯಃ | 
                   ಶಲ್ಯಜ್ಞಾನಾ
                   ದೃತೇ ನೈಷ ವರ್ಣ್ಯತೇsಂಗೇಷು 
                   ಕೇಷುಚಿತ್  
                   ತಸ್ಮಾನ್ನಿಸ್ಸಂಶಯಂ ಜ್ಞಾನಂ                       ಮೃತಶೋಧ

ನೆಯ ಅವಶ್ಯ ಹತ್ರ್ರಾ ಶಲ್ಯಸ್ಯ ವಾಂಛತಾ |

   ಕತೆ            ಶೋಧಯಿತ್ವಾ ಮೃತಂ ಸಮ್ಯಗ್ 
                    ದೃಷ್ಟ   ಆವಶ್ಯ ವ್ಯೋಂಗವಿನಿಶ್ಚಯಃ | ಪ್ರತ್ಯಕ್ಷತೋ ಹಿ ಯದ್ ದೃಷ್ಟಂ ಶಾಸ್ತ್ರದೃಷ್ಟಂ ಚ ಯದ್ಭವೇತ್ : ಸಮಾಸತಸ್ತದುಭಯಂ ಭೂಯೋ ಜ್ಞಾನವಿವರ್ಧನಂ ||

- (ಸು. 335.) ದೇಹದ ಚರ್ಮ ಪರ್ಯಂತವಾದ ಅಂಗಗಳ ನಿಶ್ಚಯವು ಯಾವ ಭಾಗಗಳಲ್ಲಿಯಾದರೂ ಶಸ್ತ್ರಜ್ಞಾನದಿಂದಲ್ಲದೆ ವರ್ಣಿಸಲ್ಪಡುವದಿಲ್ಲ. ಆದ್ದರಿಂದ ಶಸ್ತ್ರ ಹಿಡಿಯುವಂಧವನು ನಿಃಸಂಶಯ ವಾದ ಜ್ಞಾನವನ್ನು ಪಡೆಯುವದಕ್ಕೋಸ್ಕರ ಮೃತನ ಶವವನ್ನು ಚನ್ನಾಗಿ ಶೋಧಿಸಿ ಅಂಗದ ನಿಜಸ್ಥಿತಿಯನ್ನು ನೋಡಬೇಕು. ಹಾಗೆ ಪ್ರತ್ಯಕ್ಷವಾಗಿ ನೋಡಿದ್ದು ಮತ್ತು ಶಾಸ್ತ್ರದಿಂದ ಕಂಡದ್ದು ಸಹ ಎರಡೂ ಒಟ್ಟು ಕೂಡಿದರೆ, ಮತ್ತಷ್ಟು ಜ್ಞಾನವೃದ್ಧಿಯಾಗುತ್ತದೆ.

ಷರಾ ಕೋಷ್ಠದ ಅಂಗಗಳು 15 ಎಂತ ಚರಕನ ಚರಕಸಂಹಿತೆಯಲ್ಲಿ ಹೇಳಲ್ಪಟ್ಟದೆ ಪ್ರಕಾರ ಅಂಗ ಅವುಗಳ ಹೆಸರು 1 ನಾಭಿ, 2 ಹೃದಯ, .ವಿಭಾಗ 3 ಕ್ಲೋಮ 4 ಯಕೃತ್, 5 ಪ್ಲೀಹ,

                     6 ವೃಕ್ಕುಗಳೆರಡು 7 ವಸ್ತಿ 8 ಪುರೀಷಾಧಾರ 9 ಆಮಾಶಯ, 10 ಪಕ್ವಾಶಯ, 11 ಉತ್ತರ ಗುದ, 

12 ಅಧರ ಗುದ, 13 ಕ್ಷುದ್ರಾಂತ್ರ, 14 ಸ್ಥುಲಾಂತ್ರ, 15 ವಪಾವಹನ (ಚ 352)