ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧಾಸಂ ಗ್ರಹ-೩ ನೆಯ ಭಾಗ 225 ರಕ್ಕೆ ಬಂದರು, ದಮಯಂತಿಯು ನಾಳೆ ಬೆಳಿಗ್ಗೆ ಸ್ವಯಂವರದಲ್ಲಿ ಎರಡನೆಯ ಗಂಡ ನನ್ನು ವರಿಸುವದಕ್ಕಿದ್ದಾಳೆ ನಿನಗೆ ಅವಳನ್ನು ಹೊಂದಬೇಕೆಂದು ಬಯಕೆ ಇದ್ದರೆ ಬೇಗನೆ ಅಲ್ಲಿಗೆ ಹೋಗಬಹುದು ಎಂದು ಹೇಳಿ ಬಂದು ಬಿಡು ಎಂದು ಹೇಳಿ ಕಳುಹಿ ಸಲು ಆತನು ಹಾಗೆಯೇ ಅಯೋಧ್ಯಾ ಪಟ್ಟಣಕ್ಕೆ ಹೋಗಿ ದಮಯಂತಿ ಹೇಳಿದ ಹಾಗೆ ಋತು ಪರ ನೊಡನೆ ತಿಳಿಸಿ ತಿರಿಗಿ ಕುಂಡಿನ ಪಟ್ಟಣಕ್ಕೆ ಹೊರಟು ಬಂದನು ಆ ಮಾತನ್ನು ಕೇಳಿದ ಋತು ಪರರಾಜನು ತನ್ನ ಮನಸ್ಸಿನಲ್ಲಿ..-ಇದೇನೋ ಬಹಳ ಆಶ್ಚರವಾಗಿದೆ. ಮಹಾ ಪತಿವ್ರತೆಯಾದ ದಮಯಂತಿಯು ನಳನನ್ನು ಬಿಟ್ಟು ಮತ್ತೊಬ್ಬನನ್ನು ವರಿಸುವುದು ಅಂದರೆ ಏನು ? ಇದನ್ನು ನೋಡಿದರೆ ನಳನ ಗುರುತು ಹಿಡಿಯುವುದಕ್ಕೆ ಮಾಡಿದ ಕಪಟೋಪಾಯವಾಗಿ ತೋರುತ್ತದೆ. ಇದರ ಮಲ ವನ್ನು ಅಗತ್ಯವಾಗಿ ತಿಳಿಯಬೇಕೆಂದು ನಿಶ್ಚಯಿಸಿ ತನ್ನ ಸಾರಧಿಯಾದ ಬಾಹುಕ ನನ್ನು ಕರಿಸಿ- ಎಲೈ, ಬಾಹುಕನೇ ! ವಿದಕ್ಷರಾಜನ ಪಟ್ಟಣಕ್ಕೆ ಹೋಗಿ ದಮಯಂ ತಿಯ ಎರಡನೆಯ ಸ್ವಯಂವರವನ್ನು ನೋಡಬೇಕೆಂದು ಎಣಿಸಿ ಇದ್ದೇನೆ, ನೀನು ಕುದುರೆಗಳ ಮನಸ್ಸನ್ನು ತಿಳಿದವನಾದುದರಿಂದ ನಿನ್ನ ಕುಶಲತ್ವವನ್ನು ತೋರಿಸುವು ದಕ್ಕೆ ಇದೇ ಸಮಯವಾಗಿದೆ ನಿನಗೆ ಬೇಕಾದ ಕುದುರೆಗಳನ್ನು ರಥಕ್ಕೆ ಕಟ್ಟಿ ನನ್ನನ್ನು ಒಂದು ದಿವಸದೊಳಗೆ ಕುಂಡಿನ ಪಟ್ಟಣಕ್ಕೆ ಕರಕೊಂಡು ಹೋಗಬೇಕು ಎಂದು ಹೇಳಿದನು. ನಳನು ಆ ಮಾತನ್ನು ಕೇಳಿ ಎದೆಯಲ್ಲಿ ಶೂಲ ನೆಟ್ಟ೦ತೆ ಕೊರಗುತ್ತಾಕ್ಷುದ್ರನೂ ಪಾಪಬುದ್ಧಿಯುಳ್ಳವನೂ ವಂಚಕನೂ ಆಗಿರುವ ನಾನು ತನಗೆ ಬಹಳ ಅಸಕಾರವನ್ನು ಮಾಡಿದುದರಿಂದ ನನ್ನಲ್ಲಿ ನಿರಾಶೆಯಿಂದ ಸ್ನೇಹವನ್ನು ಬಿಟ್ಟು ಇಂಥಾ ಕರ ಕರ್ಮವನ್ನು ಆಚರಿಸಿದಳೊ ಏನೋ ತಿಳಿಯದು, ಹೆಂಗಸರ ಮನಸ್ಸು ಮಿ೦ಚಿ ನಂತೆ ಚಂಚಲವಾದುದು ಎಂದು ಮೊದಲು ತನ್ನ ಮನಸ್ಸಿನಲ್ಲಿ ಯೋಚಿಸಿ ತಿರಿಗಿ-- ಅಕಟಕಟಾ ' ಮಹಾ ಪತಿವ್ರತಾ ಶಿರೋಮಣಿಯಾದ ಆಕೆಯು ಪ್ರಾಣವನ್ನಾದರೂ ತೊರಕೊಳ್ಳುವಳೇ ಹೊರತಾಗಿ ಇಂಧಾ ಕೆಲಸವನ್ನು ಎಂದಿಗೂ ಯೋಚಿಸಳ. ನಾನು ವಸುದೇವನೊಡನೆ ಹೇಳಿ ಕಳುಹಿಸಿದ ಮಾತಿನಿಂದ ನಾನು ಇಲ್ಲಿ ಇರುವುದನ್ನು ತಿಳಿದು ನನ್ನನ್ನು ಕರತರಿಸಬೇಕೆಂದು ಹೀಗೆ ಮಾಡಿರುವಳು ಎಂದು ಎಣಿಸಿ ಋತುಸ ರ್ಇರಾಜನ ಕಾರ್ಯಕ್ಕಾಗಲಿ ನನ್ನ ಕಾರ್ಯಕ್ಕಾಗಿ ಕುಂಡಿನ ನಗರಕ್ಕೆ ಹೋಗಬೇ ಕಲ್ಲಾ ! ಎಂದು ಅಂದುಕೊಂಡು ಕೈಮುಗಿದು ಋತುಪರ್ಣನನ್ನು ಕುರಿತು ಎಲೈ, ಅರಸೇ ! ನಾನು ನಿನ್ನನ್ನು ಒಂದೇ ದಿವಸದಲ್ಲಿ ಕುಂಡಿನ ಪಟ್ಟಣಕ್ಕೆ ಕರಕೊಂಡು ಹೋಗಿ ಬಿಡುವೆನು ಎಂದು ಪ್ರತಿಜ್ಞೆಯನ್ನು ಮಾಡಲು ಆ ಮಾತನ್ನು ಕೇಳಿ ಋತು ಪರ್ಣನು--ಎಲೈ, ಬಾಹುಕನೇ ನಿನ್ನ ಮಾತಿನಿಂದಲೇ ಒಹಳ ಸಂತೋಷವಾಯಿತು. ಸಿನಗೆ ಬೇಕಾದ ವಸ್ತುಗಳನ್ನು ಕೊಡುತ್ತೇನೆ. ಬೇಡೆನಲು ನಳನು--ನೀನು ಎಣಿಸಿ ರುವ ಕಾರ್ಯವನ್ನು ನೆರವೇರಿಸಿ ನಿನ್ನನ್ನು ಮೆಚ್ಚಿಸಿ ಆ ಒಳಿಕ ತೆಗೆದು ಕೊಳ್ಳುತ್ತೇನೆ ಎಂದು ಆತನ ಅಪ್ಪಣೆಯನ್ನು ತೆಗೆದು ಕೊಂಡು ಕುದುರೆಯ ಲಾಯಕ್ಕೆ ಹೋಗಿ