ವಿಷಯಕ್ಕೆ ಹೋಗು

ಪುಟ:ಕಮಲಕುಮಾರಿ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಎರಡನೆಯ ಮುದ್ರಣದ ಪೀಠಿಕೆ

ಈ ಗ್ರಂಥವು ಮದರಾಸು ಯನಿವರ್ಸಿಟಿಯವರಿಂದ 1918-19ನೆ ಇಸವಿಯ ಐದನೇ ಫಾರಂಗೆ ಪಠ್ಯಪುಸ್ತಕವಾಗಿ ನಿಯಮಿತವಾದುದರಿಂದ ಎರಡನೆಯ ಮುದ್ರಣಕ್ಕೆ ಅವಕಾಶ ದೊರೆಯಿತು. ಇದಕ್ಕಾಗಿ ಗ್ರ೦ಥಕಾರರೂ, ಪ್ರಚಾರಕರೂ ಮದರಾಸು ಸರ್ಕಾರದವರಿಗೆ ಚಿರಕೃತಜ್ಞರಾಗಿರುತ್ತಾರೆ. ಕಾಲವು ಬಹುವಿಷಮದೆಶೆಯಲ್ಲಿ ಸಿಕ್ಕಿ, ಮಹಾಸಮರಕಾರಣದಿಂದ ಕಾಗದದ ಬೆಲೆಯ: ಪಂಚಗುಣವಾಗಿ ಪರಿವರ್ತಿತವಾದ ಪ್ರಯುಕ್ತ ಪೂರ್ವದ ಬೆಲೆಗಿಂತ ಸ್ವಲ್ಪ ಹೆಚ್ಚಿಸಬೇಕಾಗಿ ಬಂದಿತು. ಪಾಠಕರು ಎಂದಿನಂತೆ ಆದರಿಸಿ ಪ್ರೋತ್ಸಾಹಿಸುವರೆಂದು ನಂಬಿಕೆ.

ಕಾಳಾಯುಕ್ತಿ ಸಂವತ್ಸರ
ಆಷಾಢಮಾಸ
ಪ್ರಕಾಶಕ