ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ದೇವರಾಜ ಹದಿನೈದನೆಯ ಶತಮಾನದ ಕವಿಗಳು. ದೇವರಾಜ ಸು 1410 ಈತನು ಸೊಬಗಿನಸೋನೆ, ಅಮರುಕ ಈ ಗ್ರಂಥಗಳನ್ನು ಬರೆದಿ ದ್ದಾನೆ. ಇವನು ವಿಜಯನಗರದ ರಾಜವಂಶಕ್ಕೆ ಸೇರಿದವನು. 'ಸಂಗ ಮಂದ್ರಕುಲದಿಂಗಡಲಿಗೆ ನೆಡೆ | ದಿಂಗಳನಿಪ ಕೆಂಪಸುತನು; ಕಂಪನ ಹೀಪತಿಕುಲರತ್ನಾಲಯರಾ ಕಾಮ್ಪತರುಚಿ” ಎಂದು ಹೇಳಿಕೊಂಡಿದ್ದಾನೆ. ವಿಜಯನಗರದ ರಾಜರ ಮೂಲಪುರುಷನಾದ ಸಂಗಮನಿಗೆ ಕಂಸ ಎಂಬ ಒಬ್ಬ ಮಗನಿದ್ದನು, ಈ ಕಂಪನ ತಮ್ಮನಾದ ಬುಕ್ಕರಾಯನಿಗೂ (13 53-1377) ಕಂಪ ಎಂಬ ಒಬ್ಬ ಮಗನಿದ್ದನು. ಕವಿ ಈ ಎರಡನೆಯ ಕಂಪನ ಮಗನಾಗಿರಬಹುದೆಂದು ತೋರುತ್ತದೆ. ಹಾಗಿದ್ದ ಪಕ್ಷದಲ್ಲಿ ಇವನ ಕಾಲವು ಸುಮಾರು 1410 ಆಗಬಹುದು, ೦ಬಕದೇವನಿಂದ ಕನ್ನಡಚಿತ್ರಾಶುಕವಿತ್ವವನ್ನು ಕಲಿತಂತೆ ಹೇಳುತ್ತಾನೆ, ಒಂದುಕಡೆ “ಸುರ ಭುಜವನಿಪುರಪ್ರಭುವಾಯಿಭೂವರಸೂನು ದೇವೇಂದ್ರ ಕೇಳ್” ಎಂದು ಸಂಬೋಧಿಸಿದ್ದಾನೆ. ಈ ದೇವೇಂದ್ರನಾರೋ ತಿಳಿಯದು. ಪೂರ್ವಕವಿಗಳಲ್ಲಿ ವಾಲ್ಮೀಕಿ, ಕಾಳಿದಾಸ, ಬಾಣಾ ಇವರುಗಳನ್ನು ಸ್ಮರಿಸಿದ್ದಾನೆ, ತನ್ನ ಕವಿತಾಚಾತುರಿಯನ್ನು ಈ ಪದ್ಯಗಳಲ್ಲಿ ಹೇಳಿಕೊಂ ಡಿದ್ದಾನೆ ಪದಪದ್ಧತಿಯ ಪೋಲುವೆ ಬಿನ್ನಣ ರಸ | ಚದುರತೆ ಬೆಂಗು ಬೆಡಗು ರೂಪು | ಒದವಿದುವೆಯೇ ಕಂಪಜದೇಸಭೂಪ ಸೇ | ಖುದ ಕಬ್ಬದೊಳು ಶಿವನೊಲವಿಂದ || ಜಾಣರ ಮಚ್ಚು ರಸಿಕರ ರಸಾಯನ | ವಾಣಿಯ ಸಿರಿ ಭಾವಕರಿಗೆ | ಮಾಣಿಕಗನ್ನಡಿ ಕೇಳ್ಳ ಕೋವಿದರಿಗೆ / ಪ್ರಾಣ ದೇವಭೂಪನೊಳು ಡಿ || ಇವನ ಗ್ರಂಥಗಳಲ್ಲಿ 1. ಸೊಬಗಿನಸೋನೆ ಇದು ಸಾಂಗತ್ಯದಲ್ಲಿ ಬರೆದಿದೆ; ಕಥೆ 7, ಸಂಧಿ 29, ಪದ್ಯ 1992 ಇದರಲ್ಲಿ ಉಕ್ತವಾದ ಕಥೆಗಳನ್ನು ಕವಿ ಈ ಪದ್ಯದಲ್ಲಿ ಸೂಚಿಸಿದ್ದಾನೆ ಸುರಭಾವತಿಯ ಕಂಜರೆಯ ವಸಂತೆಯ | ಹರಭಕ್ತವನಜನಾಗರಪಳ್ಳಿ | ಬರಗೆಯ ಕಥೆಯ ಪತ್ರಿಣಿಯ ಶೃಂಗಾರವ | ವಿರಚಿಸಿದನು ದೇಸನರನಾಧ ||