ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ಭಾಸ್ಕರ ಆಲಿಖಂಡುಗ ಹಿಂಡಿಯಾಹುತಿ | ಮದಬಾವಿಯ ನೀರ ಕುಡಿಯುವೆ | ನಾರು ಎನ್ನನು ದಣಿಸಲಾದರು ಎಂದನವಧೂತ | ಭಾಸ್ಕರ, 1424 ಈತನು ಜೀವಂಧರಚರಿತೆಯನ್ನು ಬರೆದಿದ್ದಾನೆ. ಇವನು ಜೈನ ಬ್ರಾಹ್ಮಣನು, ವಿಶ್ವಾಮಿತ್ರಗೋತ್ರದವನು, ಬಸವಾಂಕನ ಮಗನು, “ಪ ನುಗೊಂಡೆಯ ಶಾಂತೀಶ್ವರನ ಜಿನವಾಸದಲಿ ಜೀವಂಧರಚರಿತೆಯ ರಚಿಸಿ ದನು” ಎಂಬುದರಿಂದ ಪೆನುಗೊಂಡೆ ಈತನ ವಾಸಸ್ಥಳವೆಂದು ತೋರು ತದೆ. ಈ ಗ್ರಂಥವನ್ನು ಶಕ 1345 ನೆಯ ಕೊpವರ್ಷದ ನಾಲ್ಕು ಣ ದಲ್ಲಿ ಎಂದರೆ 1424 ರಲ್ಲಿ, ರಚಿಸಿದಂತೆ ಹೇಳುತ್ತಾನೆ. - ಪೂರ್ವಕವಿಗಳನ್ನು ಕೆಳಗಣ ಪದ್ಯದಲ್ಲಿ ಸ್ಮರಿಸುತ್ತಾನೆ. ವಿನುತನೇಮಿಯ ರೀತಿ ಗುಣವ | ರ್ಮನ ಚಮತ್ಕೃತಿ ನಾಗವರ್ಮನ | ನೆನಹು ಹೊನ್ನನ ದೇಸೆ ವಿಜಯನ ಭಾವವಗ್ಗ ಳನ || ಸನುನಯೋಕ್ತಿ ಗಜಾಂಕುಶನ ಬಿ | ಣ ಯಶಶ್ಚಂದ್ರನ ಬಹುಜ್ಞತೆ | ಯನುಕರಿಸಲೀ ಕಾವ್ಯದೊಳಗೆನಗವರ ಕರುಣದಲಿ || ಇವನ ಗ್ರಂಥ ಜೀವಂಧರಚರಿತೆ ಇದು ಭಾಮಿನೀಷಟ್ಟದಿಯಲ್ಲಿ ಬರೆದಿದೆ, ಸಂಧಿ 18, ಪದ್ಯ 1000. ಇದರಲ್ಲಿ ರಾಜಪುರಿಯ ಸತ್ಯಂಧರರಾಜನ ಮಗನಾದ ಜೀವಂಧರರಾಜನ ಚರಿತ್ರವು ವರ್ಣಿತವಾಗಿದೆ ವಾದೀಭಸಿಂಹಸೂರಿ ಸಂಸ್ಕೃತದಲ್ಲಿ ರಚಿಸಿದ ಜೀವಂಧರಂತರಿತವನ್ನು ತಾನು ಕನ್ನಡಿಸಿದಂತೆ ಕವಿ ಹೇಳುತ್ತಾನೆ. ಗ್ರಂಥಾ ವತಾರದಲ್ಲಿ ಜಿನಸ್ತುತಿ ಇದೆ. ಬಳಿಕ ಕವಿ ನಿಬ್ಬಾದಿಗಳು , ಸರಸ್ವತಿ, ಅನು ಬದ್ಧ ಕೇವಲಿಗಳನಿಸಿದ ಸುಧರ್ಮಗೌತಮ ಜಂಬೂಗಣಧರರು, ಶ್ರುತಕೇವ ಲಿಗಳೆಂಬ ವಿಪರಾಜಿತ ನಂದಿ ಭದ್ರಬಾಹುಗೋವರ್ಧನರು ಇವರುಗ ಇನ್ನು ಸ್ತುತಿಸಿ ಅನಂತರ ಭೂತಬಲಿಯಿಂದ ಚಾರಿತ್ರಭೂಷಣನವರೆಗೆ 2 ಸಿ ದ್ದರು, ಆಚಾರರು, ಉಪಾಧ್ಯಾಯರು, ಸಾಧುಗಳು 2 ಭೂತಬಲಿ, ಪುಷ್ಯ ದಂತ, ವೀರಸೇನ, ಜಿನಸೇನ, ಆಕಳಂಕ, ಕವಿಪರಮೇಷ್ಠಿ, ಸಮಂತಭದ್ರ, ಕುಂಡೆ ಕುಂದ, ವಾದೀಭಸಿಂಹ ಪಂಡಿತದೇವ, ಕುಮಾರಸೇನ, ವರ್ಧಮಾನ, ಧರ್ಮಭೂ ಪn ಕುಮಾರಸೇನನ ಕಿಮ್ಮ ವೀರಸೇನ, ಚಾರಿತ್ರಭೂಷಣ,