ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

180 ಕರ್ನಾಟಕ ಕವಿಚರಿತೆ. [16 ನೆಯ

ಅಂಗಜರಿಪುನೇಮಿವೀರೇಶಚರಿತವ | ಪೊಂಗಿ ಪೊಗಳ್ದ ಕಣ್ಣಪನ |

ಶೃಂಗಾರಕಾವ್ಯಲೀಲಾವತಿಯನು ಪೇ| ಟ್ರಾಂಗಿಕನೇಮಿಯ ನೆನೆವೆ ||
ಬಂಧುರಭರತಯಾದವವಂಶವನು ಕೃತಿ| ಬಂಧದೊಳಗೆ ಸೇರಿಸಿದ |
ಬಂಧುವರ್ಮನ ನೆನೆದು ನೇಮಿಚರಿತಪ್ರ| ಬಂಧವನಿರದುಸಿರುವೆನು ||

ಇತರಗ್ರಂಥಗಳಲ್ಲಿ ಸುಜನೋತ್ತಂಸ, ಅಗ್ಗಳ ಇವರನ್ನೂ ಸಹ ಸ್ಮರಿ

ಸಿದ್ದಾನೆ. ತನ್ನ ಕವಿತಾಚಾತುರಿಯನ್ನು ಈಪದ್ಯಗಳಲ್ಲಿ ಹೇಳಿಕೊಂಡಿದ್ದಾನೆ:

ತಕ್ಕರ ಗೋತ್ರಿ ತನೂದರಿಯರ ಪೊಸ|ತಕ್ಕೆ ತೊಡಂಬೆಯಲರ್ ಪೊಸ ಜೇನೆಯ್ |

ಸಕ್ಕರೆ ತೀವಿದ ತನಿವಾಲೂದುವ ಕೆoಕಣ ತೆಳ್ಳೆಲರು || 

ಮಕ್ಕಳ ಮುದ್ದು ವೆರೆದ ನುಡಿ ಮದುರಿತು |ಜೊಕ್ಕಳಿಕೆಯ ನವಚಂದ್ರಿಕಯೆನೆ ಹೃದ|

ಯಕ್ಕೆ ವಿಲಾಸಮನೀವುದು ಸತ್ಪ್ರುಭುರಾಜನ ಸವಿವಾತು ||
ರಸದಾಳಿಯಂತೆ ರಮಣಿಯರ ಚೆಂದುಟಿಯಂತೆ|ವೊಸ ಜೇನ ಕೊಡದಂತೆ ಪೊಣ್ಮು
                                                                                             ವೆಳಜವ್ವನೆಯ |
ರೊಸೆದೀವ ತಾಂಬೂಲದಂತೆ ಕಾದಿಳುಯಾದ ಒಟ್ಟವಾಲಿನಂತೆ ||

ಅಸಿಯಳೊಡನಾಟದಂತರ ಮಾವಿನಿನಿವಣ್ಣ | ರಸದಂತೆಯಮೃತದಂತತಿರುಚಿಯ ಪಡೆ

                                                                                                                     ದುದತಿ | 

ರಸಿಕನತಿನಿಪುಣಮಂಗರಸನೊಪ್ಪುವ ವಾಕ್ಪ್ರುಗುಂಫನಂ ಭಾವಿಸುವೊಡೆ ||

 ಇವನ ಗ್ರಂಥಗಳಲ್ಲಿ
                               1. ಜಯನೃಪಕಾವ್ಯ 

ಇದು ಪರಿವರ್ಧಿನೀಪಟ್ಟದಿಯಲ್ಲಿ ಬರೆದಿದೆ; ಸಂಧಿ 16, ಪದ್ಯ 1037.

ಇದರಲ್ಲಿ ಕುರುಜಾಂಗಣವಿಷಯದ ರಾಜನಾದ ರಾಜಪ್ರಭದೇವನ ಮಗ
ಜಯನೃಪನ ಕಥೆ ಹೇಳಿದೆ. ಈ ಚರಿತೆಯನ್ನು ಹಿಂದೆ ಜಿನಸೇನನು ರಚಿ
ಸಿದ್ದಂತೆಯೂ ಅದನ್ನು ತಾನು “ಪಾಲೊಳಗಯಿದಾರೆಯ ಸಕ್ಕರೆಯಂ ಒಡವೆ
ರಸುವ ತಆದಿಂ ಸಕ್ಕದದೊಳು ಕನ್ನಡವಾತಂ ಬೆರಸಿ” ರಚಿಸಿದಂತೆಯೂ 

ಕವಿ ಹೇಳುತ್ತಾನೆ. ಗ್ರಂಥಾವತಾರದಲ್ಲಿ ಜಿನಸ್ತುತಿ ಇದೆ. ಅನಂತರ ಕವಿ

ಸಿದ್ಧಾದಿಗಳು, ಯೋಗಿಗಳು, ಸರಸ್ವತಿ ಇವರನ್ನು ಸ್ತುತಿಸಿ ಬಳಿಕ ಗುಣ 

ಭದ್ರನಿಂದ ಶ್ರಮುನಿಯವರೆಗೆ ಗುರುಗಳನ್ನು ಹೊಗಳಿದ್ದಾನೆ. ______________________________________________________________________________________________________

ಗುಣಭದ್ರ, ಕವಿಪರಮೇವಿ, ಬಾಹುಬಲಿ, ಆಕಳಂಕ, ಜಿನಸೇನ, ಪೂಜ್ಯ ಸಾದೆ, ಸಭೇಂದು, ತಪ್ಪುತ್ರ ಶತಮುನಿ,