ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ) ಚಂದ್ರಮ 371

                                  ಚ೦ದ್ರವು  1646  

ಇವನು ಕಾರ್ಕಳದ ಗೊಮ್ಮಟೇಶ್ವರಚರಿತೆಯನ್ನು ಬರೆದಿದ್ದಾನೆ. ಈತನು ಜೈನಕನಿ, ಇವನ ವಿದ್ಯಾಯ​ರು ಶ್ರುತಸಾಗರ, ವ್ರತಗುರು ಮಹೇಂ ದ್ರಕೀರ್ತಿ. ಅರಿರಾಯರಗಂಡರ​ದಾವಣೇಯೆಂಬ ಬಿರುದಾಂತ ಭೈರವನ್ರುಪನ ಕರುಣಸಹಾಯದಿಂದ ಲಲಿತಕೀರ್ತಿಯ ಆಜ್ಞಾನುಸಾರವಾಗಿ ಈ ಗ್ರಂಥವನ್ನು ಬರೆದಂತೆ ಹೇಳುವುದರಿಂದ ಕವಿ ತುಳುವದೇಶದವನೆಂದೂ ಭೈರ ವರಾಯನ ಆಶ್ರಿತನೆಂದೂ ತಿಳಿಯುತ್ತದೆ. ಈ ಗ್ರಂಧದ ಕೊನೆಯ ಸಂಧಿಯಲ್ಲಿ ಅರಿರಾಯರಗಂಡರದಾವಣಿ ಇಮ್ಮಡಿಭೈರವರಾಯನು ತನ್ನ ತಂದೆ ಭೈರವರಾಯನಿಗೆ ಪುಣ್ಯಖ್ಯಾತಿಗಳಾಗಲೆಂದು ಕುಲಗುರು ಲಲಿತಕೀರ್ತಿಯ ಉಪದೇಶದಿಂದ ಮಹೇಂದ್ರಕೀರ್ತಿಯನ್ನು ಮುಂದಿರಿಸಿಕೊಂಡು ಗೊಮ್ಮ ಟೇಶ್ವರನಿಗೆ ಶಕ 1568 ಪಾರ್ಧಿವದಲ್ಲಿ-ಎಂದರೆ 1616 ರಲ್ಲಿ- ಅಭಿಷೇಕ ಪೂಜಾದಿಗಳನ್ನು ಮಾಡಿಸಿದನೆಂದು ಕವಿ ಹೇಳುತ್ತಾನೆ ಇವನೂ ಆಕಾಲದವನೆಂದು ತೋರುತ್ತದೆ. ತನ್ನ ವಿಷ​ಯವಾಗಿ ಹೀಗೆ ಹೇಳಿಕೊಂಡಿದ್ದಾನೆ--- ಜಿನಮತವಾರ್ಧಿವರ್ಧನ ಚಂದ್ರನು ಭವ್ಯ | ಹ್ರ​ತ್ಕುವಲಯಚಂದ್ರಮನು || ಅನುಪಮವಿಬುಧಚಕೋರಚಂದ್ರಮನೆಂದು | ಜನರೊಬ್ಬು ಒಣ್ಣಿಸರವನ | ಇವನ ಗ್ರಂಧ

                            ಕಾರ್ಕಳದ ಗೊಮ್ಮಟೇಶ್ವರಚರಿತೆ 

ಇದು ಸಾಂಗತ್ಯದಲ್ಲಿ ಬರೆದಿದೆ, ಸಂಧಿ 17, ಪದ್ಯ 2185. ಇದರಲ್ಲಿ ಬಾಹುಬಲಿಯ ಅಧವಾ ಗೊಮ್ಮಟೇಶ್ವರನ ಚರಿತ್ರವೂ ಕಾರ್ಕಳದಲ್ಲಿ ಆತನ ವಿಗ್ರಹವನ್ನು ಪ್ರತಿಷ್ಠ್ ಮಾಡಿದ ವಿಷಯವೂ ಹೇಳಲ್ಪಟ್ಟಿವೆ. ಅರಿರಾಯರಗಂಡ​ರದಾವಣಿ ಎಂಬ ಬಿರುದುಳ್ಳಉತ್ತಮಧುರಾನಾಧನಾದ ಪಾಂಡ್ಯನೃಪನು ತೌಳವದೇಶದ ಕಾರಕಳದಲ್ಲಿ ಲಲಿತಕೀರ್ತಿಯ ಉಪದೇಶದಿಂದ ಗೊಮ್ಮ​ಟೇಶ್ವರನ ವಿಗ್ರಹವನ್ನು ಮಾಡಿಸಿ ಅದನ್ನು ಇಪ್ಪತ್ತುಚಕ್ರಗಳುಳ್ಳ ಭಂಡಿಯಮೇಲಿಟ್ಟು ಒಂದು ತಿಂಗಳವರೆಗೂ ಬೆಟ್ಟದಮೇಲಕ್ಕೆ ಎಳೆಯಿಸಿ ಸಾಗಿಸಿ ಶಕ 1353 ವಿರೋಧಿ ಕೃತುವಿನಲ್ಲಿ, ಎಂದರೆ 1431ರಲ್ಲಿ, ಪ್ರತಿಷ್ಠೆ ಮಾಡಿಸಿದನು-ಎಂದು ಹೇಳಿ ತನ್ನ ಪೋಷ ಕನಾದ ದೊರೆಯುವಿಷಯವಾಗಿ ಕವಿ ಹೀಗೆ ಬರೆದಿದ್ದಾನೆ - 1 ಮತ್ತೊಂದು ಪ್ರತಿಯಲ್ಲಿ ಸದ್ಯಸಂಖ್ಯೆ 2313 ಎಂದಿದೆ.