ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

499 ತಿಮ್ಮ ಕವಿ. ಶತಮಾನ ಮಂತ್ರಿ ಚಿಕ್ಕುಪಾಧ್ಯಾಯನ ಪ್ರೇರಣೆಯಿಂದ ಈ ಗ್ರಂಥಗಳನ್ನು ಬರೆದಂತೆ ಹೇಳುತ್ತಾನೆ. ಇವುಗಳಲ್ಲಿ ಯಾದವಗಿರಿಮಾಹಾತ್ಮ್ಯವನ್ನು ಶಕ 1599ನೆ ಯ ನಳ ವರ್ಷದಲ್ಲಿಯೂ (1677) ವೆಂಕಟಗಿರಿಮಾಹಾತ್ಮ್ಯವನ್ನು ಶಕ 1611 ನೆಯ ಕಾಳಯುಕ್ತಿ ವರ್ಷದಲ್ಲಿಯ (1679) ಬರೆದಂತೆ ಆಗ್ರಂಥಗಳಿಂದ ತಿಳಿಯುತ್ತದೆ. ಪೂರ್ವಕವಿಗಳಲ್ಲಿ ವಾಲ್ಮೀಕಿ, ವ್ಯಾಸ, ಶುಕ, ಕಾಳಿದಾಸ, ಬಾಣ, ರುದ್ರ, ಜಯದೇವ ಇವರುಗಳನ್ನು ಸ್ಮರಿಸಿದ್ದಾನೆ. ಇವನ ಗ್ರಂಥಗಳಲ್ಲಿ

         1 ಯಾದವಗಿರಿ ಮಾಹಾತ್ಮ್ಯ .
ಇದು ಚಂಪೂರೂಪವಾಗಿದೆ ; ಆಶ್ವಾಸ 16, ಇದರಲ್ಲಿ ನಾರದೀಯ ಪುರಾಣಕಥಿತವಾದ ಯಾದವಗಿರಿಯ ಅಥವಾ ಮೇಲುಗೋಟೆಯ ಮಾಹಾತ್ಮ್ಯವು ಹೇಳಿದೆ ಮೊದಲು 4 ಆಶ್ವಾಸಳಲ್ಲಿ ಚಿಕ್ಕದೇವರಾಜನ ವಂಶಾವಳಿಯೂ ದಿಗ್ವಿಜಯಗಳೂ ವಿಸ್ತಾರವಾಗಿ ವರ್ಣಿತವಾಗಿವೆ ; 5 ನೆಯ ಆಶ್ವಾಸದಿಂದ ಕಥೆ ಆರಂಭವಾಗಿದೆ.

ಇವನ ಇತರಗ್ರಂಧಗಳಲ್ಲಿಯೂ ಈ ದೊರೆಯ ವಂಶಾವಳಿ ಮುಂತಾದ ವಿಷಯಗಳು ಹೇಳಿವೆ. ಈ ಅಂಶಗಳನ್ನು ಕ್ರೋಡೀಕರಿಸಿ ಸಂಗ್ರಹವಾಗಿ ಇಲ್ಲಿ ತಿಳಿಸುತ್ತೇವೆ----------- ಯಾದವರೊಳ್ ಕೆಲರ್ ಕೃಷ್ಣನ ಅನುಮತಿಯಿಂ ನಿಜಸಂತತಿದೇವತೆಯಾದ ಯಾದವಗಿರಿನಾರಾಯಣನ ಪಾದಾರವಿಂದದರ್ಶನಾರ್ಧಮೈತಂದು ಸೇವಿಸಿ ತದನು ಜೈವೆತ್ತು ಕರ್ಣಾಟದೇಶಭೂಪತಿವದನಸರೋಜದಂತೆಸೆವ ಮಹಿಷಪುರವರದೊಳ್ ಸಾಮ್ರಾಜ್ಯ ಸಂಪನ್ನರಾಗಿ ಚಾಮುಂಡಿಕಾಪ್ರಸಾದಲಬ್ದೈಶ್ವರ್ಯ ರಾಗಿದ್ರರ್. ಅವರ ಪರಂಪರೆಯೊಳ್ ಬೆಟ್ಟದಚಾಮರಾಜ, ಮಕ್ಕಳು ತಮ್ಮ ರಾಜ, ಕೃಷ್ಣರಾಜ, ಚಾಮರಾಜ. ಈ ತಿಮ್ಮರಾಜನು ಬಿರುದೆಂತೆಂಬರಗಂಡ ಎಂಬ ಬಿರುದನ್ನು ಪಡೆದನು. ಚಾಮರಾಜನಿಗೆ ಸಿಡಿಲೊರ್ಮೆ ತಾಗಿಯಾತನ ಮುಡಿಯಂ ಕೊಂಡೊಯ್ದು ದರಿಂದ ಬೋಳಚಾಮರಾಜ ಎಂಬ ಹೆಸರು ಬಂದಿತು. ಇವನು ರಾಮರಾಜನ ಸೇನಾನಿಯಾದ ರೇಮಟಿ ವೆಂಕಟನನ್ನು ಸೋಲಿಸಿದನು. ಇವನ ಮಕ್ಕಳು ರಾಜನೃಪ, ಬೆಟ್ಟದಚಾಮರಾಜ, ದೇವರಾಜ, ಚೆನ್ನರಾಜ.ರಾಜನೃಪನು ಕಶಾಪ್ರಹಾರದಿಂದ ಕಾರುಗಹಳ್ಳಿಯ ಪ್ರಭು ವಿನ ಮಗನ್ನು ಛೇಧಿಸಿದನು.ಅಂಧಕಿಗೆ ನೇತ್ರಮನೊಂದಂ ಕೊಟ್ಟನು ತಿರುಮಲ.