ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

19 ರಚಿಸಿದನು. ಇದೇ ರಾ ಜನ ಪ್ರೋತ್ಸಾಹದಿಂದ ರಾಮಚಂದ್ರನು ಅಶ್ವಾ ಶಾಸ್ತ್ರವನ್ನೂ ಪದ್ಮಣಪಂಡಿತನು ಹಯಸಾರಸಮುಚ್ಚಯವನ್ನೂ ಬರೆ ದರು. ಭಾರತಿನಂಜ, ಗೋವಿಂದ ವೈದ್ಯ ಇವರು ಕಂಠೀರವನರಸರಾ ಜನ (1638-159) ಆಶ್ರಿತರಾಗಿ ಕಂಠೀರವ ನರಸರಾಜವಿಜಯವನ್ನು ಬರೆದರು. ಇದೇ ರಾಜನಿಂದ ಪೋಷಿತನಾಗಿ ಭಾಸ್ಕರನು ಬೇಹಾರ ಗಣಿತವನ್ನು ರಚಿಸಿದನು. ಚಿಕ್ಕದೇವರಾಜನು (1672 -1704) ಚಿಕ್ಕ ದೇವರಾಜಬಿನ್ನಪ ಮೊದಲಾದ ಗ್ರಂಥಗಳನ್ನು ಬರೆದನು. ಇದೇ

ರಾಜನ ಪ್ರೋತ್ಸಾಹದಿಂದ ತಿರುಮಲಾರ್ಯನು ಅಪ್ರತಿಮ ವೀರಚರಿತ ಮೊದ

ಲಾದ ಗ್ರಂಥಗಳನ್ನೂ, ಚಿಕ್ಕಾಪಾಧ್ಯಾಯನು ಕಮಲಾಚಲಮಾಹಾತ್ಮ್ಯ

ಮುಂತಾದುವನ್ನೂ ತಿಮ್ಮಕವಿ ಯಾದವಗಿರಿಮಾಹಾತ್ಮ್ಯ ಮೊದಲಾದುದ

ನ್ನೂ, ಮಲ್ಲಿಕಾರ್ಜುನನು ಶ್ರೀರಂಗಮಾಹಾತ್ಮ್ಯವನ್ನೂ, ಸಿಂಗರಾರ್ಯನು

ಮಿತ್ರವಿಂದಾಗೋವಿಂದವನ್ನೂ, ವೇಣುಗೋಪಾಲವರಪ್ರಸಾದನು ಚಿಕ ದೇವರಾಜವಂಶಾವಳಿಯನ್ನೂ, ಚಿದಾನಂದಕವಿ ಮುನಿವಂಶಾಭ್ಯುದಯ

ವನ್ನೂ ಮಲ್ಲರಸನು ದಶಾವತಾರಚರಿತೆಯನ್ನೂ, ಹೊನ್ನಮ್ಮನು ಹದಿಬದೆ ಯ ಧರ್ಮವನ್ನೂ, ಶೃಂಗಾರಮ್ಮನು ಪದ್ಮನೀ ಕಲ್ಯಾಣವನ್ನೂ ರಚಿಸಿದರು. ಒಂದನೆಯ ಕೃಷ್ಣರಾಜನ (1713-1731) ಆಶ್ರಿತನಾಗಿ ಬಾಲವೈದ್ಯದ ಚೆಲುವನು ಕನ್ನಡ ಲೀಲವತಿ, ರತ್ನಶಾಸ್ತ್ರ ಇವುಗಳನ್ನು ಬರೆದನು. ರಾಮಾಯಣಂ ತಿರುಮಲೆಯಾಚಾರರ್ಯ ಎಂಬ ಕವಿಯೂ ಈ ದೊರೆಯ

ಆಶ್ರಿತನು , ಇದೇ ರಾಜನ ಮಹಿಷಿಯಾದ ಚೆಲ್ವಾಂಬೆ ವರನಂದೀಕಲ್ಯಾ

ಣ ಮೊದಲಾದ ಗ್ರಂಥಗಳನ್ನು ಬರೆದಿದ್ದಾಳೆ. ರಾಮಯಣ, ಇಂದಿರಾ ಭ್ಯುದಯ ಮೊದಲಾದ ಗ್ರಂಥಗಳನ್ನು ಬರೆದ ವೆಂಕಮಾತ್ಯನು ೨ನೆಯ ಕೃಷ್ಣರಾಜನ (1731-1750) ಆತ್ರಿತನುನ, ಇದೇ ರಾಜನ ಮಾವನಾದ ಕತ್ತಿಗೋಪಾಲ ರಾಜನು ಕಮಲಾಚಲಮಾಹಾತ್ಮವನ್ನು ರಚಿಸಿದ್ದಾನೆ. ಸಿಂಗರಾಚಾರ್ಯನು ಚಾಮರಾಜನ (1770-1776) ಆಶ್ರಿತನಾಗಿ ಶ್ರೀರಂಗ ಮಾಹಾತ್ಮ್ಯವನ್ನು ಬರೆದನು. ಖಾಸಾ ಚಾಮರಾಜನ (1776-1796) ಮಹಿಷಿಯಾದ ದೇವೀರಮ್ಮಣ್ಣಿಯ ಪ್ರೇರಣೆಯಿಂದ ದೇವಚಂದ್ರನು ರಾಜಾವಳೀಕಥೆಯನ್ನು ರಚಿಸಿದನು. ಮುಮ್ಮಡಿ ಕೃಷ ರಾಜನು (799-1868) ಸೌಗಂಧಿಕಾಪರಿಣಯವೇ ಮೊದಲಾದ ಅನೇಕ ಗ್ರಂಥ