ಪುಟ:ಕ್ರಾಂತಿವಿಲಾಸ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೬ ಭ್ರಾಂತಿವಿಲಾಸ fyvvvvvvvvvvvvvvvvvv vvvvvvvvvvvvvvvvvvvv yyyyyy/ ಯನ್ನೂ ಬಾಧೆಯನ್ನೂ ಹೇಳುವುದಸಾಧ್ಯವಾಗಿದೆ. ತಾವು ಅವುನ್ನೆಲ್ಲ ನಿಮ್ಮ ಕ್ಷಪಾತವಾಗಿ ವಿಚಾರಿಸಿ ಕಮಪಡಿಸಿದರೆ ಸಮ, ಇಲ್ಲವಾದರೆ ನಾನು ಪಾಣತ್ಯಾಗವ ಮಾಡುವೆನು ” ಎಂದನು. ಚಿರಂಜೀವಿಯು ಹೇಳಿದುದನ್ನೆಲ್ಲ ಕೇಳಿ ವಿಜಯವಲ್ಲಭರಾಯನು “ನಿನ್ನ ವಿಷಯದಲ್ಲಾವ ಅಕ್ರಮವಂನಡೆಯಿಸಿರುವರೋ ಹೇಳು, ಅದು ನಿಜವಾ ಗಿದ್ದರೆ ಅದಕ್ಕೆ ತಕ್ಕ ಪ್ರತಿಕ್ರಿಯೆಯಂ ಮಾಡುವೆನು ' ಎಂದು ಹೇಳಲು ; ಚಿರಂಜೀವಿಯು ೯ ಮಹಾರಾಜನೆ! ಇಂದು ಮಧ್ಯಾಹ್ನ ಭೋಜನಕಾಲದಲ್ಲಿ ಬಾಗಿಲ ಮುಚ್ಚಿ ಕೊಂಡು, ನನ್ನನ್ನು ಒಳಗೆ ಹೋಗಗೊಡಿಸದೆ ಒಳಗೆ ಕೆಲವರು ಪಟಂಗರಂ ಸೇರಿಸಿಕೊಂಡು ಸರಸವಾಡುತಿದ್ದಳು ' ಎಂದು ಹೇ ಳಲು ; ಅರಸನದಂ ಕೇಳಿ, " ನೀನು ಹೇಳುವ ಮಾತುಗಳು ನಿಜವಾಗಿದ್ದರೆ, ಹೆಂಗಸರಿಗೆ ಅದಕ್ಕಿಂತ ಪ್ರಬಲತರವಾದ ಅಪವಾದವಾವದೂ ಇರದು' ಎಂದು ಹೇಳಿ, ಚಂದ ಸಭೆಯನ್ನು ಕುರಿತು, ಎಲೈ ಬಾಲೆ ! ಆ ವಿಷಯದೊಳು ನೀನು ಹೇಳತಕ್ಕುದೇನಾದರೂ ಉಂಟೆ ? " ಎನಲು ; ಚಂದ್ರಪ್ರಭೆಯು, • ಮಹಾರಾಜನೆ ! ಅವರು ನಿರ್ನಿಮಿತ್ತವಾಗಿ ನನ್ನ ಮೇಲೆ ದೋಷವನ್ನು ಹೇಳುತ್ತಾರೆ. ಇಂದಿನ ಮಧ್ಯಾಹ್ನ ಅವರೂ ನಾನೂ, ನನ್ನ ತಂಗಿಯಾದ ವಿಲಾಸಿನಿಯ ಒಂದೇ ಸ್ಥಳದಲ್ಲಿ ಭೋಜನವಂ ಮಾಡಿದೆವು, ಅದು ಸುಳ್ಳಾ ದರೆ ನನಗೆ ಮಹಾನರಕವಾ ಪ್ತಿಯಾಗಲಿ , ಎಂದಳು. ವಿಲಾಸಿನಿಯು, * ಅಹುದು, ನಾವು ಮೂವರೂ ಒಂದೇಸ್ಥಳದಲ್ಲಿ ಭೋಜನವ ಮಾಡಿದೆವು. ನನ್ನ ಅಕ್ಕನೀಗ ತಮ್ಮಲ್ಲಿ ವಿಜ್ಞಾಪಿಸಿದ ಮಾತುಗಳಲ್ಲಿ ಲೇಶವಾದರೂ ಸುಳ್ಳಲ್ಲ ವೆಂದಳು. ಅವರಿಬ್ಬರ ಮಾತುಗಳ೦ ಕೇಳಿ ಅಕ್ಕಸಾಲಿಗ ವಸು ವಿಯನು, “ ಮಹಾರಾಜರೆ ! ಆ ಹೆಂಗಸರಂತೆ ಸುಳ್ಳನ್ನು ಹೇಳುವವ ರನ್ನು ಪ್ರಪಂಚದೊಳು ನಾನೆಲ್ಲಿಯೂ ನೋಡಿಲ್ಲವು. ಅವರಿಬ್ಬರೂ ಸಂಪೂ ರ್®ವಾಗಿ ಸುಳ್ಳನ್ನು ಹೇಳುತ್ತಾರೆ; ಚಿರಂಜೀವಿಯು ಉನ್ಮಾದಗ್ರಸ್ತರಾಗಿ ರಲಿ, ಇಲ್ಲದಿರಲಿ, ಈಗವರು ಹೇಳುವುದೆಲ್ಲ ಸತ್ಯವು, ಕೆಟ್ಟನಡತೆಯುಳ್ಳ ಹೆಂಗಸರ ಮಾತಿನಲ್ಲಿ ವಿಶ್ವಾಸವಿಡಕೂಡದು ” ಎಂದನು. ಆ ಬಳಿಕ ಚಿರಂಜೀವಿಯು ತನಗೆ ಪ್ರಾಪ್ತವಾದ ದುರವಸ್ಥೆಗಳನ್ನೆಲ್ಲ ಆಮೂಲಾಗ್ರವಾಗಿ ತಿಳಿಸತೊಡಗಿ, “ ಮಹಾರಾಜನೆ ; ಇಂದೆನಗೆ ಹುಚ್ಚು M.