ಪುಟ:ಚಂದ್ರವದನ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಲ ಸಂ|| ಭಾದ್ರಪದ] ವಿಧವಾತ 08 \/\/\hnnyyy ನಮ್ಮ ವಿದ್ಯಾಭ್ಯಾಸ ವಿಚಾರಕ್ಕೆಂದರೆ, ನಮಗೆ ದೊರೆಯುವ ಸರಿಯಾದ ವಿರಾಮಕಾಲವೆ ನಮಗೆ ಸಕಾಲವಾಗಿಯ, ಆತ್ಮಾನಂದದ ಮನೋಲ್ಲಾಸಕ್ಕೆ ಸಾಧನವಾಗಿಯೂ ಇರುವುದು, ಹಾಗೂ, ವಿದ್ಯಾ ಭ್ಯಸನ ವ್ಯಸನಿಗಳಾಗಿರುವ ನಮ್ಮ ಆಗಿನ ಕರ್ತವ್ಯವೇನೆಂಬುದನ್ನು ಭದ್ರ ವಾಗಿ ತಿಳಿದಿರಬೇಕು. ಇಲ್ಲಿ ಕರ್ತವ್ಯವೆಂದರೆ, ನಮಗೆ ಮತ್ತಾವುದೂ ಅಲ್ಲ. ನಾವು ಮಾಡುವುದು ಶಿಷ್ಯವೃತ್ತಿ; ಗುರುಕುಲವಾಸದಲ್ಲಿ ಶಿಷ್ಯ ರಿಗೆ ಬ್ರಹ್ಮಚಯ್ಯಯ ಏಕನಿಷ್ಠೆಯೇ ಆಲಂಬವು. ಅಂತಹ ಪ್ರತಿಭಾ ಪೂಣ೯ವಾದ ಬ್ರಹ್ಮಹತ್ಯೆಯನ್ನು ವಿದ್ಯಾರ್ಥಿನಿಯರು, ಅದರಲ್ಲಿಯೂ ಪತಿವಿಯೋಗಿನಿಯರಾಗಿರುವ ನಾವು, ತ್ರಿಕಾಲ (ಪ್ರಾತಸ್ಸಂಧ್ಯಾರಾತ್ರಿ) ತ್ರಿಕರಣ, [ಕಾಯವಾಖ್ಯಾನಸ] ಅವಸ್ಥಾತ್ರಯ [ಜಾಗ್ರತೃಪ್ನ ಸು ಮು] ಗಳಲ್ಲಿಯೂ ಪರಿಶುದ್ಧವಾಗಿ ಕಾಪಾಡಿಕೊಂಡು ಬರಬೇಕಾದುದು ನಮ್ಮ ಆದ್ಯ ಕರ್ತವ್ಯ ಕರ್ಮವಾಗಿರುವುದು. ಇಂತಹ ಬ್ರಹ್ಮಚರೆಗೆ ನಮ್ಮಲ್ಲಿ ಮಿತಾಹಾರ, ಮಿತಭಾಷಣ, ಮಿತನಿದ್ರೆ ಎಲ್ಲವೂ ಮಿತವಾಗಿರಬೇಕು. ಮನಸ್ಸನ್ನು ಕೆಡಿಸತಕ್ಕ ನೋಟ, ಕೂಟ, ಊಟ, ಆಟ, ಪಾಟಗಳಿಗೆ ನಾವು ತಿರುಗಿ ನೋಡುವುದಾದರೂ ಸರಿಯಲ್ಲ, ಮತ್ತೂ, ಈ ನಮ್ಮ ಅಭ್ಯಾಸದಲ್ಲಿ, ನಮ್ಮ ಭಾವನೆಗೆ, ನಮ್ಮ ಸ್ವಾಮಿಯು ಮುಖ್ಯಗುರುಪೀಠದಲ್ಲಿರುವರೆಂಬುದು ಖಚಿತವಾಗಿರ ಬೇಕಲ್ಲದೆ, ಇತರ ನಮ್ಮ ಉಪದೇಶಕರೂ, ಹಿತಬೋಧಕರೂ, ಶಿಕ್ಷ ಕರೂ ಆದ ಪುರುಷ ಬಾಂಧವರನ್ನು ನಮ್ಮ ಪಿತೃ ಭಾತೃವರ್ಗದಲ್ಲಿ ಸೇರಿದವರೆಂಬ ಶುದ್ದಭಾವನೆಯು ದೃಢವಾಗಿರಬೇಕು. ಸ್ವಾಮಿಯು ಅಳಿದಮೇಲೆ ಅವನನ್ನು ಗುರುಪೀಠದಲ್ಲಿ ಪ್ರತಿಷ್ಠಿಸು ವುದು ಹೇಗೆಂದು ಆಕ್ಷೇಪವಿರಬಹುದು ! ಹಾಗೆಂದಿಗೂ ಭಾವಿಸಬಾರದು, ಆತನು ತನ್ನ ಸ್ಕೂಲದೇಹಕ್ಕೆ [ಭೌತಿಕದೇಹ] ಅವಸಾನ [ಕೊನೆಗಾe] ಕಾಲವುಂಟಾದುದರಿಂದ ಆ ಜೀಣ೯ದೇಹವನ್ನು ಬಿಟ್ಟು, ದಿವ್ಯದೇಹ [ಜ್ಞಾನರೂಪ] ಧಾರಣದಿಂದ ನಮ್ಮ ಅಂತರಿಂದ್ರಿಯಗಳಿಗೆ ಗಮ್ಯನಾಗಿ,