ಪುಟ:ಚಂದ್ರಾವಳಿ ವಿಲಾಸಂ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 4 - ವೇಣು-(ನಾವೆಂತಲೆವಾಗಿ ಬರಿದೆ ಇರ್ದಳ್). ಸುಶರ್ಮ೦-ಮಗಳೆ ಲಜ್ಜೆಯಂತಾಳದಿರ್, ನೀಂ ಪೇಳದೆದೆ ನಿನ್ನ ಆಂತರ್ಯಮಂ ಆನಂತರಿವಂ, “ಭಿನ್ನರುಚಿರ್ಹಿಲೋಕಃ” ಎಂಬು ದಂ ನೀನೇನರಿಯದಳೆ? ವೇಣು-(ಲಜ್ಜೆಯಂ ಎಂತಾನುಂ ಸೈಸಿ) ತಾತ! ಇದೇ ನೀನರಿ ಯದರವೊಲ್ ಕೇಳ್ವುದು? ಪಿತಂ ಬಾಲ್ಯದೊಳ, ಪತಿ ಪ್ರಾಯದೊಳ್, ಸುತಂ ವಾರ್ಧಿಕ್ಯದೊಳ್ ರಕ್ಷಕನಲ್ಲದೆ ಅಬಲೆಯರ್ಗೆ ಏಂ ಸ್ವತಂತ್ರ ಮಿರ್ಪುದೆ? ಅಂತುಮಲ್ಲದ ಸ್ವಯಂವರಮದು ರಾಜಕೀಯಮ. ಸುಶರ್ಮ೦-ಮಗಳೆ! ಪಿತಂ ಬಾಲ್ಯದೊಳ್ ಪಾಲಕಂ; ಅಂತಿ ರಲ್ ನಿನಗೆ ಈ ಚೌವನದೊಳುಂ ಆನೆಂತು ಪಾಲಕನಸ್ಸೆಂ? ವೇಣು-ಅಪ್ಪ! ತಂದೆಯಡೆಯ ಮಕ್ಕಳೆ ಎಂದುಂ ಬಾಲ್ಯಾ ವಸ್ಥೆಯೆ. - ಸುಶರ್ಮ೦-ಪುತ್ರಿಯೆ! ಅಂತಾದೊಡೆ ವರನಂ ಫುಡುಕುವಂ, ಬಳಿಯಮೆನ್ನಂದೂರಲಾಗದು ಎಂದು ಆಕೆಯ ಅನುಮತಿಯಿಂ ಪೊರಟಂ ಕೇಳೆನ್ನರಸಿರನ್ನೆ!-ಅತ್ತಮಾ ಕಾಶಿಗೆ ಅನತಿದೂರದೊಳೊರ್ವಂ ಪೊಲೆಯಂ ಸಂಸಾರನುಂ ಪೊರೆಯಲೆಂದು ತನ್ನ ತಡಿಕೆವನೆಯಂ ಬಿಟ್ಟು ಬನದೊಳ್ ಬೇಂಟೆಯಾಡುತ್ತಮಿರ್ದಂ, ಅನ್ನೆಗಂ ಆಪೊಲೆಯಂ ವೇದಾಧ್ಯಯನಂ ಗೆಯ್ಯುತ್ತುಂ, ಶಾಸ್ತ್ರಂಗಳಂ ಪರಿಸುತ್ತುಂ, ಪುರಾಣಂಗಳಂ ಓದುತ್ತುಂ, ಇರ್ಪ ಮುನಿ ಕದಂಬಮಂ ಕಂಡು ಮುಂಜನ್ಮದ ಪುಣ್ಯಬಲದಿಂ ಈ ಮುನಿ ಕೃತ್ಯಮೇ ಸಂಸಾರಶರಧಿಯಂ ದಾಂಟಿಪ ನಾವೆಯೆಂದುಂ ಮುಕ್ತಿಕಾಂತಾ ಗೃಹಮಂ ತೋರ್ಪ ಮುಂದಾಳೆಂದುಂ ತಿಳಿದು, ಬೇರೆಣಿಕೆಯಂ ಮರೆತು ಆಯೆಡೆಯೊಳೆ ನಿಗಮಾಧ್ಯಯವಾದಿಗಳ ಪಾಠಪ್ರವಚನಂಗಳಂ ಕೇಳುತ್ತ ಮಿರ್ದಂ, ಅಂತೆ ಕೆಲಗಾಲಂ ಕಳೆಯೆ, ಸಜ್ಜನಸಂಗದಿಂ ತನ್ನೊಳ್ ಬ್ರಹ್ಮಜ್ಞಾನಂ ಮೊಳೆಯ, ಬ್ರಾಹ್ಮಣನಾಗಿ ಕಲಾವತಂಸನೆಂಬ ಪೆಸರಾಂತು ಅತಿತೇಜಸ್ವಿಯುಮಾಗಿ, ಆರುಷಿಗಳೊಡನಿರ್ದ೦