ಪುಟ:ನಡೆದದ್ದೇ ದಾರಿ.pdf/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಿಡುಗಡೆ / ಬಿಡುಗಡೆ                                      ೨೪೯

ಸರೋಜಗೆ ಯಾರೂ ಎಬ್ಬಿಸಬೇಕಾಗಿರಲಿಲ್ಲ. ಆಕೆಗೆ ಎಚ್ಚರವಾಗುತಿತ್ತು.ಕನಸುಗಳ ಲಾಕದಿಂದ ಆಕೆ ಹೊರಬರಿದಿದ್ಡ ಳು. ವಾಸ್ತವದ ಲೋಕದಿಂದಆಕೆ ಎಚ್ಚರವಾಗಿದ್ದಳು.

ಮೈ –ಮನಸ್ಸು ಹಗುರವಾದರಿತಹ ಭವ  ಆದೆಂಥದೋ ಬಿಡುಗಡೆಯ ಸುಖದ ಭಾವ. ಎಲ್ಲ ನೋವುಗಳಿಂದ, ಆಪಮಾನಗಳಿಂದ,  ಹಿಂಸೆಯಿಂದ, ನಿರಾಶೆಯಿಂದ, ಆನ್ಯಾಯದಿಂದ, ದಬ್ಭಾಳಿಕೆಯಿಂದ ಕಳಚಿಕೊಂಡಂತಹ ಭಾವ. ತನಗೆ ದು:ಖವಾಗುತ್ತಿಲ್ಲ ಎ೦ದು ಆಕೆಗೆ ತಿಳಿಯುತ್ತಿದೆ, ದು:ಖವೇಕೆ ಆಗುತ್ತಿಲ್ಲವೆರಿದು ಕಸಿವಿಸಿಯೂ ಆಗುತ್ತಿಲ್ಲ. ದು:ಖವಾಗುತ್ತಿದ್ದರೆ –ಕಸಿವಿಸಿಯಾಗುತ್ತಿದ್ದರೆ ಸಂತಾಪವಾಗುತ್ತಿದ್ದರೆ ಅದು ಈ ಗಂಡ ಸತ್ತು  ಹೋದದ್ದಕ್ಕಾಗಿ ಅಲ್ಲ . ಆತ ಸಾಯಿಸಿದ ತನ್ನ ಅಸಂಖ್ಯ ಕನಸುಗಳಿಗಾಗಿ....

ತಲೆ ಕೊಡವಿಕೊಂಡು  ಸರೋಜಾ ಎದ್ದಳು. ಕೂದಲ ನ್ನು ಸೀರೆಯನ್ನು  ಸರಿಪಡಿಸಿಕೊಂಡಳು. ಒಳಗಿನ ಬಾಗಿಲಿಂದ ಒಬ್ಬಳೇ ಅಡಿಗೆ ಮನೆಗೆ ಹೋಗಿ ಕಾಯಿಸಿಟ್ಚೆದ್ದ ಹಾಲನ್ನು ಗ್ಲಾಸಿಗೆ ಬಗ್ಗಿಸಿಕೊಂಡು ಸಕ್ಕರೆ ಬೆರೆಸಿ ಗಟಗಟ ಕುಡಿದಳು. ನಂತರ, ಮಗ ತನ್ನನ್ನು ಕರೆಯಲು ಬರುವ ಮೊದಲೇ, ಹಗುರವಾದ ದಿಟ್ಟವಾದ ಹೆಜ್ಜೆಗಳನ್ನಿಡುತ್ತ ಪಡ ಸಾಲೆಗೆ ಬಂದಳು.

                                                           (೧೯ ೯ ೪)