ಪುಟ:ನಡೆದದ್ದೇ ದಾರಿ.pdf/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಿಡುಗಡೆ / ಮರೀಚಿಕೆ ೩೧೩

       "ಆಞ ?" ಏನು ಉತ್ತರಿಸುವುದೆಂದು ತಿಳಿಯದೆ ಆಕೆ ಹೇಳಿದಳು."ಹೂಞ ."
        ತಾನಿನ್ನೂ ಕಾಲೇಜು ಹುಡುಗಿಯ ಹಾಗೆ ಕಾಣುವೆನೆಂದು ಆಕೆ ಬಹಳ ಜನರಿಂದ
   ಕೇಳಿದ್ದಾಳೆ.ಪ್ರಕಾಶನಂತೂ ಯಾವಾಗಲೂ ಅನ್ನುತ್ತಾನೆ.ಆದರೆ ಈ ಅಪರಿಚಿತನಿಂದ
   ಈ ಮಾತು ಕೇಳಿದಾಗ ಬೇರೆಯೇ ಏನೋ ಅನಿಸುತ್ತಿದೆ- ಈವರೆಗೆ ಎಂದೂ
   ಅನಿಸಲಾರದ್ದು.ಆಕೆ ಕಾಳಜೀಪೂರ್ವಕವಾಗಿ ಮಂಗಲಸೂತ್ರವನ್ನು ಬ್ಲೌಜಿನೊಗಡೆ
   ತೂರಿ ಮರೆ ಮಾಡಿದಳು.
        "ನಿಮ್ಮ ಹೆಸರು ?"
        "ಮಿನಿ"-ಅಂದಳು ಮಿಸೆಸ್ ಮೀನಾಕ್ಷಿ ಪುಣೇಕರ ಅನ್ನದೆ.
        "ಓ,sweet  name."
        "ಚಾಕಲೇಟ್ ?"-ಆತ ಕ್ಯಾಡ್ ಬರೀಸ್ ತುಂಡನ್ನು ಕೈಯಲ್ಲಿ ಹಿಡಿದು ಕೇಳಿದ.
   ಆಕೆ ಒಂದನ್ನೆತ್ತಿಕೊಂಡಾಗ,"sweets to the sweet,"ಅಂದ.
        ಎಷ್ಟು polished,ಎಷ್ಟು smart,ಇದ್ದಾನೆ...
        "ವಿಪರೀತ ಗಾಳಿ,ಅನ್ನುತ್ತ ಕಿಟಕಿಯ  ಗಾಜು ಸರಿಸಹೋದಳು ಆಕೆ. ಅಧ೯ 
   ಸರಿಸಿ ಅವನ ಕಡೆ ನೋಡಿ,"ಬಹಳ ಬಿಗಿ,"ಅಂದಳು. 
        "ಬಿಡ್ರಿ,ನಾ ಹಾಕ್ತೀನಿ,"ಅಂದು ಆತ ತನ್ನ ಎಡಗೈಯನ್ನು ಅವಳಿಗೆ ಅಡ್ಡವಾಗಿ
   ಕಿಟಕಿಯವರೆಗೆ ಚಾಚಿ ಗಾಜು ಸರಿಸಿದ.ಈಗ-ತಾನಾದರೂ ಅಧ೯ ಇಂಚು ಈ ಮುಂದೆ
   ಬಾಗಬೇಕು,ಇಲ್ಲ ಅವನ ಕೈಯಾದರೂ ಅಧ೯ ಇಂಚು ಈ ಕಡೆ ಸರಿಯಬೇಕು...
   ಏನಾಯಿತೋ ಅಂತೂ ಒಟ್ಟು ಮರುಕ್ಷಣದಲ್ಲಿ ಆತನ ಮೊಳಕೈ  ಮೃದುವಾಗಿ ಅವಳ
   ಎದೆ ಸವರಿಕೊಂಡು ಹೋಯಿತು 'oh, sorry','oh it's all right'ಗಳ ನಂತರ
   ಆಕೆಗೆ ಅನಿಸಿತು -ಎಷ್ಟು ವರ್ಷಗಳ ನಂತರ ಇಂದು ತಾನು ಎಷ್ಟು ಬೇರೇಯೇ
   ಆಗಿದ್ದೇನೆ...ಹೈಸ್ಕೂಲಿನಲ್ಲಿದ್ದಾಗಂತೂ ಮೂದೇವಿಯಾಗಿದ್ದೆ.ಕಾಲೇಜಿನಲ್ಲಿದ್ದದ್ದು
   ಎರಡೇ ವರ್ಷ.ತಲೆ ಎತ್ತಿ ಯಾರನ್ನೂ ನೋಡಿರಲಿಲ್ಲ ಸಹ ,ಹಿಡಿದು ಲಗ್ನ
   ಮಾಡಿಬಿಟ್ಟರು .ಹತ್ತು ವರ್ಷವಾಯೆತು ಪುಣೆಯಲ್ಲಿ ಸಂಸಾರ ಹೂಡಿ.ದಿನ
   ಬೆಳಗಾದರೆ ಅದೇ ರಾಡಿ.ಒಮ್ಮೆ,ಒಂದೇ ಒಂದು ಸಲ,ಗಟ್ಟಿ ಮನಸ್ಸು ಮಾಡಿ ಗಂಡ
   ಮಕ್ಕಳು ,ಮನೆ,ಹಾಲಿನ ಭಾಂಡಿ ಎಲ್ಲ ಅವರವರ ಪಾಡಿಗೆ ಬಿಟ್ಟು ಬೆಳಕಿಗೆ ಬಂದು
   ನೋಡಬೇಕೆಂದು ಹೊರಟಾಗಿತ್ತು.ಮೂರು ದಿನವಂತೂ ಕೊಲ್ಹಾಪುರದಲ್ಲಿ ವ್ಯರ್ಥ
   ಕಳೆದಾಗಿತ್ತು.ಇನ್ನು ತನಗುಳಿದಿರುವುದು ನಾಳೆ ಮುಂಜಾನೆಯ ತನಕದ ಅವಧಿ ಮಾತ್ರ.
   ಮುಂಜಾನೆ ಆದ ಕೂಡಲೇ ಬರುವುರದು ಪುಣೆ.ಮತ್ತೆ ಅದೇ ಅದೇ .ಈ ಅವಕಾಶ
   ತಿರುಗಿ ಸಿಗುವುದಿಲ್ಲ...ಈ ನಾಲ್ಕೈದು ತಾಸಿನಲ್ಲೇ ಏನಾದರೂ ಆಗಬೇಕು .ಎಷ್ಟೋ