ಪುಟ:ನಡೆದದ್ದೇ ದಾರಿ.pdf/೩೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮೪

          ಶೋಷಣೆ, ಬಂಡಾಯ ಇತ್ಯಾದಿ

ಬೆಳಗಿನ ಜಾವದ ಸಕ್ಕರೆನಿದ್ದೆಯಲಲ್ಲಿದ್ದ ಆಕೆಗೆ ಒಂದೇ ಸಮನೆ ಕಿರಚತೊಡಗಿದ ಕರಗಂಟೆಯ ಸದ್ದಿನಿಂದ ಎಚ್ಚರಾಗಿ, ಸಹಜವಾಗಿ ಸಿಟ್ಟು ಬರುತ್ತದೆ.ಹಾಸಿಗೆಯಿಂದಿಳಿದು ಹೊರಬಾಗಿಲ ಕಡೆ ನಡೆದಾಗ ಹಾಲ್ ನಲ್ಲಿದ್ದ ಗೋಡೆಯ ಗಡಿಯಾರದ ಮೇಲೆ ಕಣ್ಣು ಬಿದ್ದು ಅರೆ, ಇದೇನು.ಆಗಲೆ ಎಂಟಾಯಿತಲ್ಲ,ದಿನಾ ಆರೂವರೆಗೇ ಕೆಲಸಕ್ಕೆ ಬರುವ ರೂಶನ್ ಬಿ ಇಂದೇಕೆ ಇಷ್ಹು ತಡಮಾಡಿದಳು -ಅನಿಸುತ್ತದೆ.ಇನ್ನು ಹತ್ತರ ಲೋಕಲ್ ಟ್ರೇನು ಹಿಡಿಯಲು ಮಾಡಬೇಕಾದ ಅವಸರ,ಪಡಬೇಕಾದ ಅವಸ್ಥೆ ನೆನೆದು ಸಿಟ್ತಿನೊಂದಿಗೆ ಬೆಸರವೂ ಬರುತ್ತದೆ.ತಡವಾಗುವುದಿದ್ದರೆ ಹಿಂದಿನ ದಿನವೇ ಹೇಳಿ ಹೋಗಲು ಏನು ಧಾಡಿ ಈ ರೂಶನ್ ಗೆ? ತಾನು ಅಲಾರಂ ಆದರು ಇಟ್ಟುಕೊಳ್ಳಬಹುದಿತ್ತು. ಈಗೆಷ್ಟು ಫಜೀತಿ.... ರೊಶನ್ ಳನ್ನು ಬ್ಯೆಯಲು ಸಿದ್ದಳಾಗಿ ಆಕೆ ಬಾಗಿಲು ತೆರೆದಾಗ ಎದುರಿಗೆ ಕಂಡದ್ದು ರೋಶನ್ ಅಲ್ಲ , ಕೈಯಲ್ಲಿ ಸೂಟ್ ಕೇಸ್ ಹಿಡಿದು ಎಲ್ಲೋ ಹೊರಡಲು ಸಿದ್ಧಳಾಗಿದ್ದ ಅಚೆ ಬ್ಲಾಕಿನ ಕಮಲಾ. "ಸಾರಿ ಶಶಿ , ನಿನ್ನ ನಿದ್ದೀ ಡಿಸ್ತರ್ಬ್ ಮಾಡಿದೆನೋ ಏನೊ. ಪಾಪ , ನಿನ್ನೆ ರಾತ್ರೀ ೧೨ರ ತನಕಾ ಯಾವುದೊ ಡೆಲಿವ್ಹರಿ ಕೇಸ್ ಆಟೆಂಡ್ ಮಾಡೀದ್ದಿ ಅಂತ.ಆದರ ನನಗ ಈಗ ಹನ್ನೊಂದ ಘಂಟೇಕ್ಕ ಗಾಡೀ ಅದ. ಆಷ್ಟರಾಗ ಇನ್ನೂ ಒಂದೆರಡ ಕಡೆ ಹೋಗ್ಬೇಕಾಗೇದ. ಅದಕ್ಕs ನಿನಗ ಹೇಳಿ ಹೋಗ್ಲಿಕ್ಕೆ ಬಂದೆ." -ಕಮಲಾನ ದ್ವನಿಯಲ್ಲಿ ಎಂದಿನ ಆದೇ ಮ್ರುದುತೆ.

"ನೀ ಎಬ್ಬಿಸಿದ್ದು ಛಲೋನೇ ಆತು ಕಮಲಾ , ಒಳಗ ಬಾ.ಅಲ್ಲ,

ಇದೇನು ಒಮ್ಮಿಂದೊಮ್ಮೆಲೆ ಊರಿಗೆ ಹೊರಟಿ ? ಯಾವೂರಿಗೆ ?" ಒಳಗೆ ಬಂದರು ಕೂತುಕೊಳದೆ ನಿಂತೆ ಮಾತನಾಡಿದಳು ಕಮಲಾ,"ಬೆಂಗಳೂರಿಗೆ , ಅಲ್ಲಿಂದ ಮುಂದ ಮ್ಯಸೂರಿಗೆ." "ಓಹೊ, ಅಂದರ ಆ ಪ್ರೊಡ್ಯೂಸರ್ ನ ಅಫರ್ ಒಪ್ಪಿಗೊಂಡಬಿಟ್ಟೇನು ? ಗುಡ್.ನ ನೀ ಈ ಕೆಲ್ಸಾ ಎಂದೋ ಮಾಡಬೇಕಿತ್ತು. ಹೋಗಲಿ,ಈಗರೇ ಹೊರಟೀಯಲ್ಲ.