ಪುಟ:ನೋವು.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೧೧೯ ಖಾಲಿ ಮಾಡಪ್ಪ ಅಂತ ಅವನಿಗೆ ಹೇಳಿ ಅದರಲ್ಲಿ ಒಂದು ವಾಚನಾಲಯ ಶುರು ಮಾಡ್ಬೇಕು. ನಗರದಲ್ಲಿ ಯಾರನ್ನಾದರೂ ಹಿಡಿದು ಈ ಹಳ್ಳಿಗೆ ಸರಕಾರದಿಂದ ಒಂದು ರೇಡಿಯೋ ದೊರಕಿಸ್ಬೇಕು." - " ಒಂದು ಟ್ರಾನ್ ಸಿಸ್ಪರ್ ತಗೊಂಬರಿಡ್ತೀನಿ, ಗೋವಿಂದರಾವ್." " ಅದಿರ್ಲಯ್ಯ ! ನಮ್ಮ ಹಳ್ಳೀ ಮಹಾಜನಗಳಿಗೆ ಅಂತ ಬೇರೇನೇ ಒಂದು ಬೇಕು.

ಸರಕಾರದ್ದು ಸಿಗದಿದ್ದರೆ ಇಲ್ಲೇ ಚಂದಾ ಎತ್ತಿ ಒಂದನ್ನ ಕೊಂಡು ತರಬೇಕು."

"ನನ್ನ ಗುರುತ್ನೋನು ಒಬ್ಬ ರೇಡಿಯೋ ಡೀಲರ್ ಇದಾನೆ, ಗೋವಿಂದರಾವ್." “ಕಮಿಾಷನ್ ಕೊಡ್ತಾನೊ ?” “ಕೊಡಿಸೋಣ, ಅದಕ್ಕೇನು?” ಇನ್ನು ಆ ರಸ್ತೆ, "ಆ ವಿಷಯ ಯೋಚಿಸಿದಷ್ಟೂ ನನಗೆ ನಿದ್ದೆ ಬರೊಲ್ವಪ್ಪ, ಬ್ಲಾಕ್ ಡೆವಲಪ್ಮೆಂಟ್ನಲ್ಲಿ ಅದನ್ನ ಸೇರ್ಸೊಕಾಗುತ್ಯೆ, ನೋಡ್ಬೇಕು." " ಕಂಟ್ರಾಕ್ಟ್ ನೇವೇ ತಗೊಳೊಕಾಗೊಲ್ವೆ ಗೋವಿಂದರಾವ್ ?"

" ಹಣ ಸಾಂಕ್ಷನಾಗ್ಲಿ ಮೊದು,"

" ಏನೋಂತಿದ್ದೆ. ನೀವು ಪ್ರಚಂಡರು ಗೋವಿಂದರಾವ್." "ಹೀಗೆಲ್ಲಾ ಇದೆ, ನೋಡಪ್ಪ." ಗಜಾನನ ತಲೆದೂಗಿ, ಮುಗುಳ್ನಕ್ಕು, ಕೇಳಿದ : " ಈಗ ನೀವು ಕೈಹಿಡಿಯೋದು ಯಾವ ಕನ್ಯಾಮಣೀನ ಅಂತ ? ನಾವು ಹೋಗೋದ ರೊಳಗೆ ನಿಮ್ಮ ತಂದೆ ಜಾತಕಗಳನ್ನು ನೋಡಿ ಇಟ್ಟಿರ್ತಾರೆ." " ಆ ಲಾಯರಿ ಮಗಳ್ನ ಬಿಟ್ಟಿಡು. ಅದು ಪದ್ಮನಿಗೆ. ಅಲ್ಲೋ, ನೀನು ನೋಡಿದಿಯಾ ಅವಳ್ನ ?" " ಓಹೋ ?" “ ಹ್ಯಾಗಿದಾಳೆ ?” " ಅಂದರೆ ?" " ನಿಮ್ಹತ್ರ ಹೇಳೋಕೇನಂತೆ ? ಫ್ಯಾಶನ್ ವಿಷಯದಲ್ಲಿ ಪರವಾಗಿಲ್ಲ. ಆದರೆ, ಮೈಯಲ್ಲಿ ಮಾಂಸ ಸಾಲ್ದು." “ನಿನ್ನೆ ಕಡೆಯವರದು ಹೇಳಯ್ಯ." " ಕಾಮಾಕ್ಷಿ, ಕನಕಲತಾ, ಕನಕಲತಾ ಅನ್ನೋದಂತೂ ಸರಿಯಾದ ಹೆಸರೇ ಅಲ್ಲ. ಕನಕವೃಕ್ಷ ಅಂತಿಡ್ಟೇಕು !" " ಹಹ್ಹ!" " ಕಾಮಾಕ್ಷೀನೇ ನಿಮಗೆ ಹೇಳಿ ಮಾಡಿಸಿದ ಹೆಣ್ಣು, ಮನೇಲಿ ಅವಳಿಗೊಂದು ಅಡ್ಡ ಹೆಸರಿದೆ. ಗೊತಾ, ಗೋವಿಂದರಾವ್ ?"

  • ಏನೂಂತ ?"

" ತಿಂಡಿಪೋತಿ ಅಂತ." - . " ಅಷ್ಟೇ ತಾನೆ? ಏನು ಬೇಕೋ ಅದನ್ನ ಮಾಡ್ಕೊಂಡು ತಿನ್ತಾಳೆ."