ಪುಟ:ನೋವು.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೧೩೭

                             ೧೮

    " ಇದು ಕಡೇ ವರ್ಷ ದೊಡ್ಡಮ್ಮ. ಈಗಿನಿಂದಲೇ ಅಭ್ಯಾಸ ಶುರು ಮಾಡ್ಬೇಕು. 

ಒಂದು ವಾರ ಮುಂಚಿತವಾಗಿಯೇ ಹೋಗಿ ಹಾಸ್ಟೆಲ್ನಲ್ಲಿ ಸೀಟು ಭದ್ರ ಮಾಡ್ಕೊಬೇಕು. ಇಲ್ದೇ ಹೋದ್ರೆ ಮುಂದೆ ಕಷ್ಟ. ಸ್ವಲ್ಪ ಅಣ್ಣಯ್ಯನಿಗೆ ಹೇಳ್ತೀಯಾ ?"

    ಪದ್ಮನಾಭ ತಿಳಿಸಿದುದು ಇಷ್ಟೇ.
    ದೊಡ್ಡಮ್ಮ ಸಮಾಧಾನದ ನಿಟ್ಟುಸಿರುಬಿಟ್ಟರು. ಹುಡುಗ ಇನ್ನೇನೋ ಹೇಳುತಾನೆ-

ಎಂದು ಅವರು ಅಳುಕಿದ್ದರು. ಮದುವೆಯ ವಿಷಯ. ಖಡಾಖಂಡಿತವಾಗಿ ನನಗಿದು ಬೇಡ- ಅಂತ ಹೀಗೇ ಇನ್ನೇನೋ.

    ಅವರೆಂದರು : 
    " ಅದಕ್ಕೇನೀಗ ? ಹೋಗುವಿಯಂತೆ. ನಿನ್ನ ತಂದೆಗೆ ಎಚ್ಚರವಾಗ್ಲಿ. ಹೇಳ್ತೀನಿ." 
    ಸಂತುಷ್ಟನಾದ ಪದ್ಮನಾಭ ಮುಂದುವರಿದ: 
    " ಇನ್ನೂ ಒಂದು ದೊಡ್ಡಮ್ಮ. ಈ ಸಲ ಫೀಸುಗೀಸು ಇತರೇ ಖರ್ಚು ಜಾಸ್ತಿ. 

ಸ್ವಲ್ಪ ಹಣ ಹೆಚ್ಚು ಕೊಟ್ಟಿರ್ಲಿ."

    " ಹೂ೦. ಹೇಗೂ ಈ ವರ್ಷ ಖರ್ಚೂ ಹೆಚ್ಚೇ. ಎರಡು ಮದುವೆ ಅ೦ದರೆ 

ಸುಮ್ಮಗಾಗುತ್ಯ ? ನಾವು ಗಂಡಿನವರು ಅಂದ ಮಾತ್ರಕ್ಕೆ ಖರ್ಚಿಲ್ಲದೆ ಇರುತ್ಯೆ ?"

    " ಅದೇನೋ ನನಗೆ ತಿಳೀದು ದೊಡ್ಡಮ್ಮ. ನೀನುಂಟು, ಅಣ್ಣಯ್ಯ ಉಂಟು."
    ದೊಡ್ಡಮ್ಮ ಒಂದು ಕ್ಷಣ ಯೋಚಿಸಿದರು. ಹುಡುಗ ಕನ್ಯೆಯನ್ನು ನೋಡುವ ವಿಷಯ 

ಹ್ಯಾಗೆ ? ಈ ಸಂಬಂಧದಲ್ಲಿ ಪದ್ಮ ತೋರುವ ಔದಾಸೀನ್ಯಕ್ಕೂ ಈಗ ಈತ ಹೊರಡುತೇನೆ ಎನ್ನುವುದಕ್ಕೂ ನಂಟೆ ? ಊಹೂಂ. ಹಾಗಿರಲಾರದು. ಹೋದರೆ ಎಲ್ಲಿಗೆ? ನಗರಕ್ಕೆ ತಾನೆ? ಹೇಗೂ ಹುಡುಗಿ ಇರುವುದೇ ಅಲ್ಲಿ.

    ದೊಡ್ಡಮ್ಮ ಸುಮ್ಮನಿದ್ದುದನ್ನು ಕಂಡು ಪದ್ಮನಾಭ ಕೇಳಿದ : 
   " ಹಾಗಾದರೆ ನಾನು ನನ್ನ ಸಾಮಾನೆಲ್ಲ ಟ್ರಂಕಿಗೆ ತುಂಬಿಸ್ಲೆ ?" 
   " ಇಷ್ಟೊಂದು ಅವಸರ ! ಯಾವಾಗ ಹೋಗ್ವೇಕೂ೦ತಿದೀಯಾ?"
   " ನಾಳೆ ಬೆಳಗ್ಗೆ."
   " ನಾಳೆ ತಾನೆ ? ರಾತ್ರೆ ತುಂಬಿಸಿದರಾಯ್ತು."
   " ಹೂ೦."
   " ಬಿಸಿಲಲ್ಲಿ ತಿರುಗಾಡ್ಕೊ೦ಡು ಬಂದಿದೀಯಾ. ಸ್ವಲ್ಪ ಹೊತ್ತು ಮಲಕ್ಕೋ."
   ಪದ್ಮನಾಭ ತನ್ನ ಕೊಠಡಿಗೆ ಹಿಂತಿರುಗಿದ. ವಿಶ್ರಾ೦ತಿಯ ಅಗತ್ಯ ಇರಲಿಲ್ಲ ಅವನಿಗೆ 

ತನ್ನ ಪುಸ್ತಕಗಳನ್ನೂ ಬಟ್ಟೆಬರೆಗಳನ್ನೂ ಒಂದೊಂದಾಗಿ ಜೋಡಿಸಿ ಇಡತೊಡಗಿದ.

   ...ಊಟವಾದ ಬಳಿಕ ಗೋಪಾಲ ಮನೆಯಲ್ಲಿದ್ದುದು ಸ್ವಲ್ಪವೇ ಹೊತು. ಆದರೆ 

ಆ ಕೆಲವೇ ನಿಮಿಷಗಳಲ್ಲಿ ಭಾಗೀರಥಿ ನಗರಕ್ಕೆ ಹೋಗಿ ಮರಳಿದ ಮಾವ ಏನೇನು ಮಾಡಿಕೊಂಡು ಬಂದರೆಂಬುದರ ವಿವರವನ್ನು ಗಂಡನಿಗೆ ನೀಡಿದಳು.

   ಗೋಪಾಲ ಯಾ೦ತ್ರಿಕವಾಗಿ ಹೂಂಗುಡುತ್ತ ಹೊರಡಲು ಅಣಿಯಾದ.