ಪುಟ:ಬೆಳಗಿದ ದೀಪಗಳು.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೦

ಸಂಪೂರ್ಣ-ಕಥೆಗಳು

ಭೋಜನಕ್ಕಾಗಿ ಆಮಂತ್ರಣವನ್ನು ಕೊಟ್ಟನು. ಭೋಜನಸಮಾರಂಭವೆಲ್ಲ ಮುಗಿದು ಮದ್ಯಪ್ರಾಶನದ ವಿಧಿಯು ಕೂಡ ಸಾಂಗವಾದ ಬಳಿಕ ಈ ಆರು ಜನರಲ್ಲಿ ಒಬ್ಬನು ರಾಸಪುಟನನ ಕೈಯಲ್ಲಿ ರಿವಾಲ್ವರವನ್ನು ಕೊಟ್ಟು ತನ್ನ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಅವನಿಗೆ ಹೇಳಿದನು. ಈ ಅಪ್ಪಣೆಯನ್ನು ಕೊಡುವದಕ್ಕೆ ಮುಂಚಿತವಾಗಿ ರಾಸಪುಟಿನನ ಮಾಪಕೃತ್ಯಗಳ ಪ್ರವಚನಯಾಯಿತು. ಈ ಪಾಪರಾಶಿಯು ಸುಟ್ಟು ಹೋಗಬೇಕಾದರೆ ದೇಹವಿಸವಿರ್ಜನದ ಹೊರತು ಬೇರೆ ಮಾರ್ಗವಿಲ್ಲೆಂತಲೂ, ಪಾಪವರ್ತಿಯಾದ ಅವನನ್ನು ಕೊಂದು ತಮ್ಮ ಕೈಗಳನ್ನು ಅಪವಿತ್ರ ಮಾಡಿ ಕೊಳ್ಳಲು ತಮ್ಮಲ್ಲಿ ಯಾರೂ ಸಿದ್ಧರಿಲ್ಲಂತಲೂ ಅದಕ್ಕಾಗಿ ರಾಸಪುಟವನೇ ತನ್ನ ಆತ್ಮಹತ್ಯವನ್ನು ಮಾಡಿಕೊಳ್ಳತಕ್ಕದ್ದೆಂತಲೂ ಅವನಿಗೆ ಹೇಳಲ್ಪಟ್ಟಿತು.

ರಾಸಪುಟಿತನು ಇದಕ್ಕೆ ಪ್ರತ್ಯುತ್ತರವನ್ನು ಕೊಡದೆ, ರಿವಾಲ್ವರವನ್ನು ಕೈಯಲ್ಲಿ ತೆಗೆದುಕೊಂಡು ಈ ಆರು ಜನ ಗೃಹಸ್ಥರಲ್ಲಿ ಪ್ರಮುಖನಾಗಿದ್ದವನ ಮೇಲೆ ಅದನ್ನು ಹಾರಿಸಿದನು. ಆದರೆ ಆ ಗೃಹಸ್ಥನು ಪೂರ್ಣ ಎಚ್ಚರವುಳ್ಳವನಾದ್ದರಿಂದಲೂ ರಾಸಪುಟನನ ಸ್ವಭಾವವನ್ನು ಆಮೂಲಾಗ್ರವಾಗಿ ಬಲ್ಲವನಾದ್ದರಿಂದಲೂ ಆ ಗುರಿಯನ್ನು ತಪ್ಪಿಸಿಕೊಂಡನು. ತನ್ನ ಪ್ರಯತ್ನವು ನಿಷ್ಪಲವಾದದ್ದನ್ನು ಕಂಡು ರಾಸಪುಟನನು ಪಲಾಯನಹಿಡಿಸಿದನು. ಆದರೆ ಈ ಗೃಹಸ್ಥರು ಆವನನ್ನು ಬೆನ್ನಟ್ಟಿ ತಮ್ಮ ಕೈಯಲ್ಲಿರುವ ರಿವಾಲರಗಳಿಂದ ಅವನನ್ನು ಕೊಂದು, ಅವನ ಪ್ರೇಕವನ್ನು ನದಿಯಲ್ಲಿ ಚೆಲ್ಲಿದರು. ರಾಸಪುಟನನು ಈ ರೀತಿಯಾಗಿ ತಮ್ಮ ಪಾಪಕೃತ್ಯಗಳ ಫಲವನ್ನುಂಡನು.