ಪುಟ:ಬೆಳಗಿದ ದೀಪಗಳು.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೪

ಸಂಪೂರ್ಣ-ಕಥೆಗಳು

ಸಲು ನಾನು ಸಮರ್ಥವಾಗದಿದ್ದರೆ, ನಿಮ್ಮ ಪ್ರಯತ್ನವು ನಿಷ್ಪಲವಾಗುವದು. ಅದಕ್ಕಾಗಿ ನಾನು ಅನ್ನುವದೇನಂದರೆ, ಶ್ರೀಮಂತನನ್ನು ಮಾಡುವದಕ್ಕಾಗಿ ನೀವು ಬೇರೆ ಮತ್ಯಾವನನ್ನಾದರೂ ಶೋಧಿಸಿರಿ. ನಿರಪರಾಧಿಯ ಜ್ಞಾನಿಯೂ ಆದ ನನ್ನನ್ನು ನಿಷ್ಕಾರಣವಾಗಿ ಯೂಕೆ ಪೀಡಿಸುವಿರಿ ?

ಪು: ಯಾವನನ್ನು ಶ್ರೀಮಂತನನ್ನಾಗಿ ಮಾಡಬೇಕಾಗಿದೆ ಅವನು ಸ್ವಭಾವತಃ ಮರ್ಖನಾಗಿದ್ದರೆ ಒಳಿತಾದದ್ದೆಂಬ ಮಾತು ನಿಜವು; ಯಾಕೆಂದರೆ, ದೊಡ್ಡವರಾದ ಬಳಿಕ ಅವರಲ್ಲಿ ಪ್ರ ಸಂಗವು ಬಂದೊದಗಿದಾಗ, ಮೂರ್ಖತನದ ಗುಣಗಳನ್ನು ಹುಟ್ಟಿ ಸುವದು ಕಠಿಣವಾಗುತ್ತದೆ; ಇದಲ್ಲದೆ, ಮೂರ್ಖತನದಲ್ಲಿ ನಿಷ್ಣಾತರನ್ನಾಗಿ ಮಾಡುವ ಶಾಲೆಗಳನ್ನು ಇನ್ನೂ ಯಾರೂ ವಿಶೇಷವಾಗಿ ಸ್ಥಾಪಿಸಿಲ್ಲ. ಅಂದಮೇಲೆ ತಾರುಣ್ಯ, ಏಷಯೋಪಭೋಗದ ನಿಃಸೀಮವಾದ ಲಾಲಸೆ, ಕುಸಂಗತಿ ಮುಂತಾದ ಸಂಗತಿಗಳಿಂದ ಮನುಷ್ಯರಲ್ಲಿ ಹುಟ್ಟುವ ಆಲ್ಪಸ್ವಲ್ಪವಾದ ಮೂರ್ಖತನದಿಂದಲೇ ಸಂತೋಷವನ್ನು ಹೊಂದಿ ಸ್ವಸ್ಥವಾಗಿ ಕೂಡ ಬೇಕಾಗುತ್ತದೆ. ಆದರೂ ಈ ಸಂಗತಿಗಳಲ್ಲಿ ಸಂಪತ್ತೊಂದು ಕೂಡಿತೆಂದರೆ, ಧನಿಕರ ಬಡಿವಾರಕ್ಕೆ ಸಾಕಾಗುವಷ್ಟು ಮರ್ಖತನವು ಮನುಷ್ಯನಲ್ಲಿ ಹುಟ್ಟೇ ಹುಟ್ಟುತ್ತದೆ. ಮೇಲಾಗಿ ಶ್ರೀಮಂತನು ವಿದ್ಯಾವಂತನಾಗಿರಲೇಬಾರದೆಂದು ಯಾರೂ ನಿಯಮವನ್ನಾದರೂ ಹಾಕಿಕೊಟ್ಟಿಲ್ಲ. ಇಷ್ಟಾಗಿಯೂ ಎಲ್ಲ ನಿಯಮಗಳಿಗೂ ಅಪವಾದಗಳು ಉಂಟೇ ಉಂಟು, ಆಪ್ಪಿ ತಪ್ಪಿ ಒಬ್ಬ ವಿದ್ವಾಂಸನು ಶ್ರೀಮಂತನಾದರೆ, ಅದರಿಂದ ಹಾನಿಯಾದರೂ ಯಾವದು ? ನೀನು ಶ್ರೀಮಂತನಾಗಲು ಒಪ್ಪಿಕೊಳ್ಳು, ಅಂದರೆ ನೀನು ಮೂರ್ಖನಾದಿಯೆಂತಲೇ ತಿಳಿ, ವಿದ್ವತ್ತೆಯನ್ನೆಲ್ಲ ಮುಚ್ಚಿ ಬಿಡುವ ಲೋಕೋಕರವಾದ ಗುಣವು ಸಂಸತ್ತಿನಲ್ಲಿದೆ, ನೀನು ಒಪ್ಪಿಕೊಂಡರೆ ಸಾಕು.

ಬ್ರಹ: ಪ್ರಾಣ ಹೋದರೂ ಶ್ರೀಮಂತನಾಗಲಿಕ್ಕೆ ನಾನು ನನ್ನ ಒಪ್ಪಿಗೆಯನ್ನು ಕೊಡಲಾರೆನು, ನನ್ನನ್ನು ಮೋಸಗೊಳಿಸಿ ಇಲ್ಲವೆ ನನಗೆ ತಿಳಿಯದಂತೆ ನೀವು ನನ್ನನ್ನು ಶ್ರೀಮಂತನನ್ನಾಗಿ ಮಾಡಬಹುದೇ ಹೊರತು, ಶ್ರೀಮಂತನಾಗುವದಕ್ಕೆ ನಾನು ನನ್ನ ಒಪ್ಪಿಗೆಯನ್ನು ಸ್ವಸಂತೋಷದಿಂದ ಎಂದೂ ಕೊಡಲಾರೆನು. ಆದರೆ, ನೀವು ನನ್ನ ಮೇಲೆ ಬಲಾತ್ಕಾರವನ್ನಾದರೂ ಮಾಡುವದೇಕೆ ? ನಿಮಗೆ ನನ್ನ ವಿಷಯಕ್ಕೆ ದಯವು