ಪುಟ:ಬೆಳಗಿದ ದೀಪಗಳು.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೮

ಸಂಪೂರ್ಣ - ಕಥೆಗಳು

ಕದಾಚಿತ್ ಈ ಸ್ಥಳದಲ್ಲಿ - ಕದಾಚಿತ್ ಆ ಸ್ಥಳದಲ್ಲಿ-ಮೇಲೆ-ಕೆಳಗೆ- ಎಲ್ಲಿ ಎಂಬುದನ್ನು ಯಾರು ಹೇಳಬೇಕು ? -ಬಂದು ನಿಂತಿರಬಹುದು ! ಆವರನ್ನು ನೀವು ನಿರಾಶರನ್ನಾಗಿ ಮಾಡುವಿರಾ ? ಅವರ ಕೋಪಾಗ್ನಿಗೆ ನೀವು ಗುರಿಯಾಗುವಿರಾ ?

ಪುರೋಹಿತನ ಈ ಭಾಷಣವನ್ನು ಕೇಳಿ ಬ್ರಹ್ಮಚಾರಿಯು ತೀರ ಗಾಬರಿಗೊಂಡನು. ದಯೆ, ಭೀತಿ, ಪರೋಪಕಾರ ಮುಂತಾದ ಮನೋವಿಕಾರಗಳ ಜೊಂಜಾಟದಿಂದ ಅವನ ಹೃದಯವು ಕಲ್ಲೋಲವಾಯಿತು. ಹಿತನ ಮಾತಿಗೆ ಒಪ್ಪಿಗೆಯನ್ನು ಕೊಡದ ಹೊರತು ಅನ್ಯವಾದ ಮಾರ್ಗವು ಅವನಿಗೆ ತೋರದಂತಾಯಿತು. ಆಗ್ಗೆ, ನಿಮ್ಮ ಸಂಗಡ ನಾನು ನಿಮ್ಮ ಯಜಮಾನರ ಊರಿಗೆ ಬರುತ್ತೇನೆಂದು ಅವನು ಒಪ್ಪಿಕೊಂಡನು ; ಹಾಗೂ ಅದೇ ದಿವಸ ಸಾಯ೦ಕಾಲದಲ್ಲಿ ಆ ಉಭಯತರೂ ಆ ಕ್ಷೇತ್ರವನ್ನು ಬಿಟ್ಟು ತಮ್ಮ ಮುಂದಿನ ಮಾರ್ಗವನ್ನು ಆಕ್ರಮಿಸಹತ್ತಿದರು. ಅಷ್ಟರಲ್ಲಿ, ತಾನು ಸ್ವಪ್ನದಲ್ಲಿ ನೋಡಿದ ಪುರುಷನ ಆಕೃತಿಯೇ ತನಗೆ ಅಸ್ಪಷ್ಟವಾಗಿ ಕಾಣ ಹತ್ತಿದಂತೆ ಆ ಬ್ರಹ್ಮಚಾರಿಗೆ ಭಾಸವಾಯಿತು. ಆದರೆ ಅವನು ವಿಶೇಷವಾಗಿ ತನ್ನ ಲಕ್ಷವನ್ನು ಕೊಡಲಿಲ್ಲ.

****

ಕಮಲಾಪುರಕ್ಕೆ ಹೋಗಿ ಮುಟ್ಟಿದ ಬಳಿಕ, ಕೂಡಲೇ ದತ್ತಕವಿಧಾನದ ಸಮಾರಂಭವಾಯಿತು. ಬ್ರಹ್ಮಚಾರಿಯ ಸ್ವರೂಪವನ, ಜಾಣತನವನ್ನೂ, ಆಚರಣವನ್ನೂ ನೋಡಿ ದತ್ತಕ ಜನಕನಿಗೆ ಒಳಿತಾಗಿ ಸಮಾಧಾನವೆನಿಸಿತು. ಆದರೆ, ಮಗನನ್ನು ನೋಡಿ ನೋಡಿದಾಗ ಅವನು ದುಃಖದಿಂದ ಉಸುರ್ಗರೆಯುತ್ತಿದ್ದನು, ದತ್ತಕ ಮಗನ ಹೆಸರು - 'ಭೋಲಾನಾಥ' ಎಂದು ಇಡಲ್ಪಟ್ಟಿತು. ಮುಂದೆ ಸ್ವಲ್ಪ ದಿನಗಳಲ್ಲಿಯೇ ಸುಸ್ವರೂಪಿಯಾದ ಒಬ್ಬ ತರುಣಿಯ ಕೂಡ ಇವನ ವಿವಾಹವಾಯಿತು. ಇವನ ದತ್ತಕ ತಾಯಿಯೆಂದರೆ, ಇವನ ತೀರ್ಥರೂಪರ ನಾಲ್ಕನೆಯ ಲಗ್ನದ ಪತ್ನಿ ಯಾದರೂ ಒಳ್ಳೆ ಚಲುವೆಯಾಗಿ ತಾರುಣ್ಯದ ಭರದಲ್ಲಿದ್ದಳು. ಭೋಲಾನಾಥನನ್ನು ಅವಳು ನಿಸ್ಸಿಮವಾದ ಪುತ್ರ ಪ್ರೇಮದಿಂದ ಮನ್ನಿಸುತ್ತಿದ್ದಳು. ಭೋಲೆನಾಥನಾದರೂ ಆಕೆಯಲ್ಲಿ ಹಡೆದ ತಾಯಿಯಂತೆ ಪೂರ್ಣವಾದ ಮಾತೃಭಕ್ತಿಯ