ಪುಟ:ಬೆಳಗಿದ ದೀಪಗಳು.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೨೦

ಸಂಪೂರ್ಣ-ಕಥೆಗಳು

ಯಾಕೆ ಹಾಗೂ ಹೇಗೆ ಉತ್ಪನ್ನವಾಗುತ್ತದೆಂಬುದರ ಬಗ್ಗೆ ಅವನು ಬಹು ಪ್ರಯತ್ನ ಪೂರ್ವಕವಾಗಿ ಆಲೋಚಿಸಿದರು. ಆದರೆ, ಚತುರ್ಥ ಸಂಬಂಧದ ತಾಯಿಯನ್ನು ಹೊರತುಪಡಿಸಿ, ಮನೆತನದ ಸಂಗತಿಗಳನ್ನು ಬಲ್ಲ ಹಿರಿಯರು ಯಾರೂ ಇಲ್ಲದ್ದರಿಂದ ಅವನಿಗೆ ಈ ಕಾರಣಗಳ ಬಗ್ಗೆ ಏನೂ ಗೊತ್ತಾಗ ಇದರಿಂದ ಅವನು ಭವಿಷ್ಟನ ಹಾಗೆ ಆಚರಿಸಹತ್ತಿದನು. ಬರಬರುತ್ತ ತಂದೆ:ತು ಭ, ಮಿಷ್ಟ ತನವೂ ಹುಚ್ಚುತನವೂ ವಿಕೋಪಕ್ಕೆ ಹೋದವು ಇನ್ನು ಮೇಲೆ ತಾನು ಬಚ್ಚಳ ದಿವಸ ಬಾಳುವದಿಲ್ಲೆಂತಲೂ ತನ್ನ ಅಂತಕಾಲವು ಸವಿಾಪಿಸಿರುವಂತಲೂ ಭ>ವಿಸಿ ಆ ವೃದ್ಧಗೃಹಸ್ಥನು ಒಂದು ದಿನ ಮಧ್ಯರಾತ್ರಿಯಲ್ಲಿ ಎಲ್ಲಾ ಗಾಢವಾದ ನಿದ್ರೆಯಲ್ಲಿದ್ದಾಗ ಭೋಲಾನಾಥ ನನ್ನು ಮೆಲ್ಲ: ಎಬ್ಬಿಸಿದನು. ಅವನ ಕೈ ಹಿಡಿದು ಅವನ ಕೂಡ ಮಾತಾಡುತ್ತ ಮಾತಾಡುತ್ತ ತನ್ನ ವಿಸ್ತಾರವಾದ ಮನೆಯ ಹೊರ ಅಂಗಳದಲ್ಲಿ ಉತ್ತರ ದಿಕ್ಕಿನ ಕೊನೆಯ ಭಾಗದಲ್ಲಿದ್ದ ಒಂದು ಕಟ್ಟಡದ ಮಾರ್ಗವನ್ನು ಹಿಡಿದು ಅವನು ಹೊ?ಗುತ್ತಿದನು. "ಭೋಲಾನಾಥನೆ, ಇದೇ ಉತ್ತರ ದಿಕ್ಕು. ಎದುರಿನಲ್ಲಿ ಕಾಣುವ ಗಿಡದ ತಲೆಯ ಮೇಲೆ ಧ್ರುವನಕ್ಷತ್ರವಿರಬೇಕು. ಮೊದಲು ಅದು ನನಗೆ ಕಾಣುತ್ತಿತ್ತು; ಆದರೆ, ಇತ್ತಿತ್ತಲಾಗಿ ಅದು ನನಗೆ ಕಾಣದಂತಾಗಿದೆ. ಅದೇನೆ, ನನ್ನ ಮೂಗಿನ ತುದಿಯಾದರೂ ನನಗೆ ಈಗ ಕಾಣುವದಿಲ್ಲ. ರಾತ್ರಿಯಲ್ಲಿ ನನಗೆ ನಿದ್ದೆ ಯು ಹತ್ತು ವದಿಲ್ಲ. ಹತ್ತಿ ದರ ಭಯಂಕರವಾದ ಸ್ವಪ್ನಗಳು ಬಿದ್ದು, ಬೆದರಿ ಎದ್ದು ಕೂಡುತ್ತೆ?ನೆ. ಭಯಂಕರವಾದ ಧ್ವನಿಗಳು ಕೇಳಬರುತ್ತಿವೆ. ಚೀರಾಟದ ಸಪ್ಪಳವನ್ನು ಕೇಳಿ ಕಿಏಗಳು ಗಡು ಚುಹಾಕಿವೆ ಆಕಾಳವಿಕಾಳರಾದ ಯಮದೂತರು ನನ್ನ ಸುತ್ತಲೂ ಭಯಾನಕ ವಾವ ನರ್ತನವನ್ನು ಮಾಡುತ್ತಾರೆ; ಹಾಗೂ ತಮ್ಮ ಪಾಶದಿಂದ ನನ್ನನ್ನು ಬಿಗಿಯಲು ಪ್ರಯತ್ನಿಸುತ್ತಾರೆ. ಇಂಥ ಸ್ಥಿತಿ ಯಲ್ಲಿ ನಾನು ಬಹಳ ದಿನಗಳ ವರೆಗೆ ಬದುಕಿರುವೆನೆಂಬದು ಅಸಾಧ್ಯವು. ನನ್ನ ಹಿಂದೆ ನೀನು ಎಲ್ಲ ಸಂಗತಿಗಳನ್ನು ಚನ್ನಾಗಿ ನೋಡುತ್ತ ಹೋಗುವಿ ಎಂದು ನನಗೆ ಪೂರ್ಣ ವಾದ ನಂಬಿಗೆಯಿ: ದೆ ಆದರೆ, ನಿನ್ನ ಪ್ರಪಂಚಕ್ಕೆ ಬೇಕಾಗುವ ಹಣವು ನಿನಗೆ ಎಲ್ಲಿ ದೊರೆಯುವದೆಂಬ ಸ್ಥಳವನ್ನು ನಿನಗೆ ತೋರಿಸಬೇಕಾಗಿದೆ ಹಾಗೂ ಅದಕ್ಕಾಗಿಯೇ ನಿನ್ನನ್ನು ಆ ಕಟ್ಟಡದ ಕಡೆಗೆ