ವಿಷಯಕ್ಕೆ ಹೋಗು

ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸೂರ್ಯವಂಶದ ಮೂಲ ಎಲ್ಲಿಯ ದಿಕ್ಕು ತೋಚದೆ, ಸಿ೦ಧುನದಿಯ ಆಚೆಗಿರುವ ಗಾಂಧಾರ ದೇಶದಲ್ಲಿ ತನ್ನ ದೊಂದು ಬೇರೆ ರಾಜ್ಯವನ್ನು ಕಟ್ಟಿಕೊಂಡನು. ಆದರೆ ಮು೦ದೆ ನಾವಕಾಶವಾಗಿ ತಿರಿಗಿ ಆರ್ಯರೊಡನೆ ಸ್ನೇಹ ಬೆಳೆಸಿ ಕೊಂಡನು. ಇರಲಿ. ಮಾಂಧಾತ ನಿ೦ದ ಮು೦ದೆ ೧೦ ನೇ ತಲೆಯವ ನಾದ ಹೆಸರು ಗೊಂಡ ಅರಸನೆಂದರೆ ಸತ್ಯವ್ರತ ಅಥವಾ ತ್ರಿಶಂಕು ರಾಜನೇ ! ಈ ತನು ಚಿಕ್ಕವನಿರುವಾಗಲೇ ತ೦ದೆಯು ಮಡಿದುದರಿಂದ ವಸಿಷ್ಠ ಋಷಿಗಳು ರಾಜ್ಯ ಸೂತ್ರವನ್ನು ತಮ್ಮ ಕೈಯಲ್ಲಿರಿಸಿಕೊಂಡು ಸಾಗಿಸಿದರು. ಈ ಕಾಲಕ್ಕೆ ಕಾನ್ಯಕುಬ್ಬ ಪ್ರಾಂತ್ಯಕ್ಕೆ ಗಾಧಿಸುತನಾದ ವಿಶ್ವರಥನೆಂಬುವನು ದೆರೆಯಾಗಿದ್ದು, ವಿಶ್ವರಥನು ತನ್ನ ಪಾಲಿಗೆ ಬಂದಿದ್ದ ರಾಜ್ಯವನ್ನು ಬಿಟ್ಟು, ವನಕ್ಕೆ ಹೋಗಿ ತಪಸ್ಸಿಗೆ ಕುಳಿತನು; ಈ ಸಂಧಿಯಲ್ಲಿ ಹನ್ನೆರಡು ವರ್ಷ ಒಂದೇಸಮನಾಗಿ ಎಡೆಬಿಡದೆ ಕ್ಷಾ ಮ ಬೀಳಲು, ತ್ರಿಶಂಕುರಾಜನು ವಿಶ್ವರಥನ ಕುಟುಂಬವನ್ನು ನಾಕಿ ಸಲುಹಿದನು. ಇತ್ಯ, ವಿಶ್ವರಥನು ಉಗ್ರ ತಪಶ್ಚರ್ಯೆಯಿಂದ ಬ್ರಾಹ್ಮಣ ಪದವನ್ನು ಪಡೆದು ಮರಳಿ ತನ್ನ ರಾಜ್ಯಕ್ಕೆ ಬಂದನು; ಆಗ, ತನ್ನ ರಾಜ್ಯ ವನ್ನೆಲ್ಲ ತ್ರಿಶಂಕುವಿಗೇ ಕೆಟ್ಟು, ತಾನು ವಿಶ್ವಾಮಿತ್ರನೆಂಬ ಹೆಸರಿನಿಂದ ತ್ರಿಶಂಕುವಿನ ಪುರೋಹಿತನಾದನು; ಇದಕ್ಕಾಗಿ ವಸಿಷ್ಠ ನಿಗೂ ವಿಶ್ವಾ ಮಿತ್ರನಿಗೂ ಅನೇಕ ಜಗಳ ನಡೆದವು; ಸತ್ಯವ್ರತನ ತರುವಾಯ, ಅವನ ಮಗನಾದ ಹರಿಶ್ಚಂದ್ರಮ ಪಟ್ಟವೇರಿದನು. ವಿಶ್ವಾಮಿತ್ರನು ಇವನ ಆಳಿಕೆಯಲ್ಲಿಯೆ ದೊಡ್ಡದೊಂದು ರಾಜಸೂಯಯ ಜ್ಞವನ್ನು ಮಾಡಿದನು. ಈ ಯಜ್ಞ ದಕ್ಷಿಣೆಗಾಗಿಯೇ, ವಿಶ್ವಾಮಿತ್ರನು ಹರಿಶ್ಚಂದ್ರನ ಸತ್ವ ಪರೀಕ್ಷೆ ಮಾಡಬೇಕೆಂದು ಬಹು ಸರಿಯಾಗಿ ಕಾಡಿದನು. ಸತ್ಯಸಂಧನಾದ ಹರಿ ಶೃಂದ್ರನ ಆಳಿಕೆಯಲ್ಲಿ ವಸಿಷ್ಠರು ಸೂರ್ಯವಂಶದ ಕುಲಪುರೋಹಿತ ರಾದರು. ಹರಿಶ್ಚಂದ್ರನ ಹಾರಾಯನು ನಾ ನಾ ಯಾತನಗಳಿಗೀಡಾಗಿ, ತನ್ನ ರಾಜ್ಯ, ಹೆ೦ಡಿರು, ಮಕ್ಕಳು ಕೊನೆಗೆ ತನ್ನನ್ನು ಸಹ ಶೀಲ ರಕ್ಷಣೆ ಗಾಗಿ ಮಾರಿಕೊಂಡು ಹೊಲಿಯ ಗಾಳಾಗಿ ದುಡಿದರೂ, ತನ್ನ ಸತ್ಯ ವ್ರತ ವನೆ ೦ದು ಬಿಡದೆ ಇದ್ದುದರಿಂದ ಮುಂದೆ ಆತನ ವಿಷಯದಲ್ಲಿ ದೇವ ರಿಗೆ ಕರುಣೆ ಹುಟ್ಟಿ, ಅವನನ್ನು ಕಾಯ್ದ ಸ೦ಗತಿಯು ಪ್ರಾಚೀನ ಇತಿ