ಪುಟ:ಭಾರತ ದರ್ಶನ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೨೦

ಭಾರತ ದರ್ಶನ

ಈ ವಿಷಯವೆಲ್ಲ ಅಲ್ಲಲ್ಲಿ ಸ್ವಲ್ಪ ದೊರೆಯುತ್ತದೆ. ಆದರೆ ನೀತಿಸಾರ ಮತ್ತು ಇತರ ಆಧಾರ. ಗಳಿಂದ ದೊರೆಯುವ ವಿಷಯಗಳಿಂದ ಆಗಿನ ಕಾಲದಲ್ಲಿ ಗ್ರಾಮಗಳಿಗೆ ಮತ್ತು ನಗರಗಳಿಗೆ ಪೂರ್ಣ ಆಡಳಿತ ಸ್ವಾತಂತ್ರವಿತ್ತು ; ಎಂದಿನವರೆಗೆ ತೆರಿಗೆಯು ಸರಿಯಾಗಿ ಸಲ್ಲುತ್ತಲಿತ್ತು ಅಲ್ಲಿನ ವರೆಗೆ ಕೇಂದ್ರ ಆಡಳಿತವು ಸ್ವಲ್ಪವೂ ಪ್ರವೇಶ ಮಾಡುತ್ತಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಸನಾತನ ಧರ್ಮವು ಆಚರಣೆಯಲ್ಲಿತ್ತು. ಸಾಂಪ್ರದಾಯಿಕ ಹಕ್ಕು ಬಾಧ್ಯತೆಗಳಿಗೆ ರಾಜಕೀಯ ಅಥವ ಸೈನಿಕ ಶಕ್ತಿ ಯಾವುದೂ ಅಡ್ಡ ಬರುತ್ತಿರಲಿಲ್ಲ. ಆರಂಭದಲ್ಲಿ ವ್ಯವಸಾಯವು ಸಹಕಾರ ಪದ್ಧತಿಯ ಮೇಲೆ ಅಥವ ಇಡೀ ಗ್ರಾಮದ ಒಟ್ಟಿನಿಂದ ನಡೆಯುತ್ತಿತ್ತು. ವ್ಯಕ್ತಿಗಳಿಗೆ, ಕುಟುಂಬಗಳಿಗೆ ಹಕ್ಕು ಬಾಧ್ಯತೆ ಗಳೂ ಇದ್ದವು. ಕರ್ತವ್ಯ ಕರ್ಮವೂ ಇತ್ತು. ಇವೆರಡರ ನಿರ್ಧಾರ ಮತ್ತು ರಕ್ಷಣೆ ಸಂಪ್ರದಾಯ ಬದ್ಧವಿದ್ದವು.

ಮತ ಪ್ರಾಧಾನ್ಯ ರಾಜತ್ವವು ಭಾರತದಲ್ಲಿ ಯಾವಾಗಲೂ ಇರಲಿಲ್ಲ. ರಾಜನು ನ್ಯಾಯಬಾಹಿರ ನಾದರೆ ಅಥವ ಕ್ರೂರಿಯಾದರೆ ದಂಗೆ ಏಳಲು ಪ್ರಜೆಗಳಿಗೆ ಅಧಿಕಾರವಿತ್ತು. ಚೀನೀ ದಾರ್ಶನಿಕ ಮೆನ್ಷಿಯಸ್ ಎರಡು ಸಾವಿರ ವರ್ಷಗಳ ಹಿಂದೆ ಹೇಳಿದ “ ರಾಜನು ಪ್ರಜೆಗಳನ್ನು ಕಡ್ಡಿ ಕಸದಂತೆ ಕಂಡರೆ ಪ್ರಜೆಗಳು ರಾಜನನ್ನು ದರೋಡೆಕಾರನೆಂದೂ ಶತ್ರುವೆಂದೂ ಕಾಣಬೇಕು ” ಎಂಬ ಮಾತು ಭಾರತಕ್ಕೆ ಅನ್ವಯಿಸುತ್ತದೆ. ಈ ಬಗೆಯ ರಾಜನ ಅಧಿಕಾರಕ್ಕೂ ಯೂರೋಪಿಯನ್ ಶ್ರೀಮಂತಿಕೆಯ ರಾಜತ್ವದ ಅಧಿಕಾರಭಾವನೆಗೂ ಬಹಳ ಅಂತರವಿದೆ. ಯೂರೋಪಿಯನರ ಭಾವನೆಯಲ್ಲಿ ರಾಜನಿಗೆ ತನ್ನ ರಾಜ್ಯದ ಎಲ್ಲ ವ್ಯಕ್ತಿಗಳ ಮತ್ತು ವಸ್ತುಗಳ ಮೇಲೆ ಪೂರ್ಣ ಸ್ವಾಮ್ಯವಿದ್ದು ಈ ಅಧಿಕಾರವನ್ನು ತನ್ನ ಮಾಂಡಲಿಕ ಶ್ರೀಮಂತರಿಗೆ, ಪಾಳೆಯಗಾರರಿಗೆ ವಹಿಸಿಕೊಡಲು ಅಧಿಕಾರವಿತ್ತು. ಈ ರೀತಿಯ ಒಂದು ಅಧಿಕಾರವರ್ಗವು ಬೆಳೆಯಿತು; ಆ ಪಾಳೆಯ ಪಟ್ಟಿಗೆ ಸೇರಿದ ಜನರು ಮತ್ತು ಆಸ್ತಿ ಎಲ್ಲವೂ ಆ ಶ್ರೀಮಂತ ಅಥವ ಪಾಳೆಯಗಾರನದಾಗಿತ್ತು, ಅವನ ಮೂಲಕ ದೊರೆಯದು. ಈ ಅಧಿಕಾರ ಭಾವನೆಯು ರೋಮನರಿಂದ ಬೆಳೆದು ಬಂದದ್ದು, ಭಾರತದ ರಾಜಾಧಿಕಾರಭಾವನೆಯೇ ಬೇರೆ. ದೊರೆಗೆ ಕೆಲವು ಭೂಕಂದಾಯ ತೆಗೆದುಕೊಳ್ಳುವ ಅಧಿಕಾರವು ಮಾತ್ರವಿತ್ತು. ಅಷ್ಟು ಅಧಿಕಾರವನ್ನು ಮಾತ್ರ ಆತನು ಬೇರೆಯವರಿಗೆ ವಹಿಸಬಹುದಾಗಿತ್ತು. ಭಾರತದ ರೈತನು ರಾಜನ ಗುಲಾಮನಾಗಿರ ಲಿಲ್ಲ, ಬೇಕಾದಷ್ಟು ಭೂಮಿ ಇತ್ತು. ರೈತನಿಂದ ಭೂಮಿಯನ್ನು ಕಿತ್ತುಕೊಳ್ಳುವುದರಿಂದ ಯಾವ ಉಪಯೋಗವೂ ಇರಲಿಲ್ಲ. ಆದ್ದರಿ೦ದ ಪಾಶ್ಚಿಮಾತ್ಯ ದೇಶಗಳಂತೆ ಭಾರತದಲ್ಲಿ ಜಾನುವಾರಿ ಪದ್ಧತಿಯೂ ಇರಲಿಲ್ಲ; ರೈತನಿಗೆ ಭೂಮಿಯ ಸ್ವಾಮ್ಯವೂ ಇರಲಿಲ್ಲ. ಬ್ರಿಟಿಷರ ಆಳ್ವಿಕೆಯಿಂದ ಬಂದ ಈ ಎರಡೂ ಭಾವನೆಗಳು ಭಾರತದಲ್ಲಿ ಅಪಾರ ಕೆಡುಕನ್ನು ಮಾಡಿದವು.

ಪರಕೀಯರ ಧಾಳಿಯಿಂದ ಯುದ್ಧ ಮತ್ತು ವಿನಾಶ ಕೃತ್ಯಗಳಾದವು, ದಂಗೆಗಳಾದವು. ಕ್ರೂರ ದಬ್ಬಾಳಿಕೆಗಳಾದವು. ಸೈನ್ಯ ಶಕ್ತಿಯನ್ನವಲಂಬಿಸಿದ ಹೊಸ ರಾಜಮನೆತನಗಳು ಹುಟ್ಟಿದವು. ದೇಶ ದಲ್ಲಿ ಆಚರಣೆಯಲ್ಲಿದ್ದ ಸಂಪ್ರದಾಯ ಶಾಸನವನ್ನು ಈ ರಾಜಮನೆತನಗಳು ಅಲಕ್ಷೆಮಾಡಿದರು. ಇದ ರಿಂದ ಅನೇಕ ಪರಿವರ್ತನೆಗಳಾಗಿ, ಪ್ರಜಾಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿತು. ಕಟ್ಟ ಕಡೆಗೆ ಭೂಕಂದಾಯ ಪದ್ದತಿಯಲ್ಲೂ ಕೆಲವು ಬದಲಾವಣೆಗಳಾದವು. ಆದರೂ ಆಪ್ಟನ್ ಮತ್ತು ಮೊಗಲ ರಾಜರುಗಳು ಪ್ರಾಚೀನಸಂಪ್ರದಾಯಗಳಿಗೆ ಮತ್ತು ಪದ್ಧತಿಗಳಿಗೆ ಅಡ್ಡ ಬರಲಿಲ್ಲ. ಯಾವ ಮುಖ್ಯ ವ್ಯತ್ಯಾಸವನ್ನೂ ಮಾಡಲಿಲ್ಲ. ಭಾರತೀಯ ಜನಜೀವನದ ಸಾಮಾನ್ಯ ಮತ್ತು ಆರ್ಥಿಕರಚನೆಯು ಅಚ್ಚಳಿಯದೆ ಉಳಿ ಯಿತು. ಸನಾತನ ಧರ್ಮವನ್ನು ಕಾಪಾಡಿಕೊಂಡು ಬರಬೇಕೆಂದೂ, ರಾಜಕಾರ್ಯವನ್ನು ಧರ್ಮ ದಿಂದ ದೂರವಿಡಬೇಕೆಂದೂ, ಧರ್ಮವು ವೃತ್ತಿಗೆ ಸಂಬಂಧಿಸಿದ್ದೆಂದೂ ಮಯಾಸುದ್ದೀನ್ ತಗ್ಗ ಖ್ ತನ್ನ ಅಧಿಕಾರಿಗಳಿಗೆ ನಿರೂಪಕೊಟ್ಟನು. ಆದರೆ ಕಾಲ ಪರಿವರ್ತನೆ, ಸಂಘರ್ಷಣೆಗಳು ಮತ್ತು ಕೇಂದ್ರ ಅಧಿಕಾರವ್ಯಾಪ್ತಿಯ ಹೆಚ್ಚಳದಿಂದ ಸಂಪ್ರದಾಯನಿಯಮಕ್ಕೆ ಮನ್ನಣೆಯು ಕಡಮೆ ಯಾಯಿತು. ಗ್ರಾಮಾಡಳಿತದ ಸ್ವಾತಂತ್ರ್ಯವು ಮಾತ್ರ ಉಳಿಯಿತು. ಬ್ರಿಟಿಷರ ಆಳ್ವಿಕೆಯಲ್ಲಿ ಅದಕ್ಕೂ ಸಂಚಕಾರವು ಬಂದಿತು.